ಸುಂಟಿಕೊಪ್ಪ, ಜ. ೩: ಕರ್ನಾಟಕ ರಾಜ್ಯದಿಂದ ಹಾಗೂ ಕೊಡಗು ಜಿಲ್ಲೆಯಿಂದ ಶಬರಿ ಮಲೈ ಯಾತ್ರೆಗೆ ಲಕ್ಷಾಂತರ ಮಂದಿ ಭಕ್ತಾದಿಗಳು ತೆರಳುತ್ತಿದ್ದಾರೆ. ಪಂಪಾ ನದಿಯಲ್ಲಿ ಸ್ನಾನ ಮಾಡಿ ಶಬರಿ ಮಲೈ ಬೆಟ್ಟ ಹತ್ತುವಾಗ ಗಣಪತಿ ದೇವಾಲಯದಿಂದ ಮುಂದೆಸಾಗುವ ಅಪ್ಪಾಜಿ ಬೆಟ್ಟ, ನೀಲಿಮಲೈ ಬೆಟ್ಟ, ಶರಂಗುತ್ತಿ ಬೆಟ್ಟವನ್ನು ಸುಮಾರು ೮ ಕಿಲೋ ಮೀಟರ್ ಹತ್ತಿ ದೇವರ ದರ್ಶನ ಮಾಡುತ್ತಿದ್ದಾರೆ. ಗಣಪತಿ ದೇವಾಲಯದಿಂದ ಬೆಟ್ಟ ಏರುವಾಗ ವಿವಿಧ ಭಾಷೆಗಳಲ್ಲಿ ಸೂಚನಾ ಫಲಕಗಳನ್ನು ಅಳವಡಿಸಲಾಗಿದೆ. ೬ ಭಾಷೆಗಳಲ್ಲಿ ಈ ಫಲಕಗಳಿವೆ. ಆದರೆ ಕನ್ನಡ ಭಾಷೆಯ ಸೂಚನಾ ಫಲಕ ಮಾತ್ರ ಅನರ್ಥಕಾರಿಯಾಗಿದೆ. ಇದನ್ನು ನೋಡುವ ಕನ್ನಡಗರೇ ಇದು ಯಾವ ಭಾಷೆ ಎಂದು ಆಶ್ಚರ್ಯದಿಂದ ಕೇಳುವಷ್ಟು ತಪ್ಪು ತಪ್ಪಾದ ಬರಹಗಳಿಂದ ಕೂಡಿದೆ. ಇನ್ನಾದರೂ ದೇವಸ್ಥಾನಕ್ಕೆ ಸಂಬAಧಪಟ್ಟವರು ಸರಿಯಾದ ಕನ್ನಡ ಭಾಷೆಯನ್ನು ಅನುಸರಿಸಲು ಕ್ರಮಕೈಗೊಳ್ಳಲಿ. ಕೇರಳ ಸರಕಾರ ಈ ಬಗ್ಗೆ ಮುತುವರ್ಜಿ ವಹಿಸಲಿ. - ರಾಜು ರೈ, ಸುಂಟಿಕೊಪ್ಪ.