ಕಣಿವೆ, ಜ. ೩: ಶನಿವಾರ ಮುಂಜಾನೆ ವೇಳೆ ರಾಷ್ಟಿçÃಯ ಹೆದ್ದಾರಿಯ ಆನೆಕಾಡು ಅರಣ್ಯದ ಬಳಿ ಒಂಟಿ ಸಲಗವೊಂದು ಸಾಗಿದ್ದು, ಇದನ್ನು ಕಂಡು ಹೆದ್ದಾರಿ ಕಾರು ಸವಾರರೊಬ್ಬರು ತಮ್ಮ ಕಾರಿನ ಲೈಟಿನ ಬೆಳಕಿನಿಂದ ಮೊಬೈಲ್ ಮೂಲಕ ಸಲಗದ ಪೋಟೋ ಸೆರೆ ಹಿಡಿಯುವ ಯತ್ನ ಮಾಡಿದ್ದಾರೆ. ಅದರ ಸನಿಹಕ್ಕೆ ವಾಹನ ತೆರಳುತ್ತಿದ್ದಂತೆಯೇ ಸಲಗ ಮುಂದಿಟ್ಟ ಹೆಜ್ಜೆಯನ್ನು ಹಿಂದಕ್ಕಿಟ್ಟಿದ್ದು, ಕಾರು ಸವಾರ ಕೂಡಲೇ ಅಲ್ಲಿಂದ ತೆರಳಿದ್ದಾರೆ.

-ಕೆ.ಎಸ್.ಮೂರ್ತಿ