ವೀರಾಜಪೇಟೆ, ಜ. ೩: ಕೊಲೆ ಪ್ರಕರಣವೊಂದಕ್ಕೆ ಸಂಬAಧಿಸಿದAತೆ ಆರೋಪಿಯನ್ನು ನ್ಯಾಯಾಲಯ ಸೂಕ್ತ ಸಾಕ್ಷö್ಯಧಾರಗಳಿಲ್ಲದ ಹಿನ್ನೆಲೆಯಲ್ಲಿ ದೋಷಮುಕ್ತಗೊಳಿಸಿ ತೀರ್ಪು ನೀಡಿದೆ.
ಹೆಗ್ಗಳ ಗ್ರಾಮದ ಎಸ್ ಅಂಡ್ ಎಸ್ ಎಸ್ಟೇಟಿನ ಲೈನ್‌ಮನೆಯಲ್ಲಿ ವಾಸವಿದ್ದ ಆರೋಪಿ ಅಸ್ಸಾಂ ಮೂಲದ ಉಸ್ಮಾನ್ ಅಲಿ ೨೦೧೯ರ ಜನವರಿ ೩ ರಂದು ತನ್ನ ಎರಡನೇ ಪತ್ನಿ ಮರ್ಜಿನಾ ಕತೂನ್ ಎಂಬಾಕೆಯನ್ನು ಕೊಲೆ ಮಾಡಿ ಕುರುಚಲು ಗಿಡಗಂಟಿಗಳ ಮಧ್ಯೆ ಎಸೆದು ಹೋಗಿದ್ದಾಗಿ ಪ್ರಕರಣ ದಾಖಲಾಗಿತ್ತು.
ಉಸ್ಮಾನ್ ಅಲಿಯ ಎರಡÀನೇ ಪತ್ನಿ ಮರ್ಜಿನಾ ಕತೂನ್, ಆರೋಪಿತನ ಮೊದಲ ಪತ್ನಿ ಮಮ್ತಾಜ್ ಬೇಗ್‌ನನ್ನು ಬಿಟ್ಟುಬಿಡುವಂತೆ ಆಗಿಂದಾಗ್ಗೆ ಪತಿಯನ್ನು ಪೀಡಿಸುತ್ತಿದ್ದಳು. ಇದರಿಂದ ನಿತ್ಯ ಜಗಳ ಉಂಟಾಗುತ್ತಿತ್ತು. ಇದರಿಂದ ಬೇಸತ್ತ ಉಸ್ಮಾನ್ ಅರಮೇರಿ ಗ್ರಾಮಕ್ಕೆ ೨೦೧೯ರ ಜ. ೨ರಂದು ತೆರಳಿ ಎರಡನೇ ಪತ್ನಿಯನ್ನು ಉಪಾಯದಿಂದ ಸ್ಥಳೀಯರಾದ ಪಿ. ಬೋಪಣ್ಣ ಅವರ ಹÀಡ್ಲು ಬಿಟ್ಟ ಗದ್ದೆಯ ಬಳಿ ಕರೆದುಕೊಂಡು ಹೋಗಿ ರಾತ್ರಿ ಅಲ್ಲಿಯೇ ಇದ್ದು ಜನವರಿ ೩ರಂದು ಸಂಜೆ ವೇಳೆ ಮರ್ಜಿನಾ ಧರಿಸಿದ್ದ ವೇಲನ್ನು ಆಕೆಯ ಕುತ್ತಿಗೆಗೆ ಬಿಗಿದು ಕೊಲೆಮಾಡಿ, ಕೊಲೆಯನ್ನು ಮರೆಮಾಚುವ ಉದ್ದೇಶದಿಂದ ಮೃತ ಶರೀರವನ್ನು ಗಿಡಗಂಟಿಗಳ ನಡುವೆ ಎಸೆದು ಹೋಗಿದ್ದ ಆರೋಪದಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಪ್ರಕರಣದ ವಿಚಾರಣೆ ವೀರಾಜಪೇಟೆಯ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಲಯದಲ್ಲಿ ನಡೆದು ಪೊಲೀಸರು ಸುಮಾರು ೩೦ಕ್ಕೂ ಅಧಿಕ ಸಾಕ್ಷಿಗಳನ್ನು ಹಾಜರುಪಡಿಸಿದ್ದರು. ಆದರೆ ಅಂತಿಮವಾಗಿ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಎಸ್. ನಟರಾಜ್ ಅವರು, ಆರೋಪಿ ವಿರುದ್ಧ ಆರೋಪ ಸಾಬೀತಾಗದ ಹಿನ್ನೆಲೆಯಲ್ಲಿ ಆರೋಪಿ ಉಸ್ಮಾನ್ ಅಲಿಯನ್ನು ಕೊಲೆ ಆರೋಪದಿಂದ ದೋಷಮುಕ್ತಗೊಳಿಸಿ ತೀರ್ಪು ನೀಡಿದ್ದಾರೆ. ಆರೋಪಿಯ ಪರ ವಕೀಲರಾದ ಡಿ.ಸಿ. ಧ್ರುವ ವಾದಿಸಿದ್ದರು.