ಕುಶಾಲನಗರ, ಜ. ೩: ಸಹಕಾರಿ ಸಂಘಗಳು ಸಮಾಜವನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವುದು ಶ್ಲಾಘನೀಯ ಎಂದು ಶಾಸಕ ಡಾ.ಮಂತರಗೌಡ ಹೇಳಿದರು.

ಕುಶಾಲನಗರದ ಸರ್ಕಾರಿ ಪಿಯು ಕಾಲೇಜಿಗೆ ಸ್ಥಳೀಯ ಕೈಗಾರಿಕೋದ್ಯಮಿಗಳು ಹಾಗೂ ವೃತ್ತಿ ನಿರತರ ಸಹಕಾರ ಸಂಘದ ವತಿಯಿಂದ ರೂ ೧೨ ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಆಧುನಿಕ ಶೈಲಿಯ ಕಂಪ್ಯೂಟರ್ ಲ್ಯಾಬ್ ಉದ್ಘಾಟಿಸಿ ಮಾತನಾಡಿದ ಅವರು, ಆರಂಭವಾದ ಕೇವಲ ೨೦ ವರ್ಷಗಳಲ್ಲಿ ಈ ಸಂಘ ೫೦೦ ಕೋಟಿ ರೂಗಳಷ್ಟು ವಹಿವಾಟು ನಡೆಸುವ ಮೂಲಕ ಪ್ರತೀ ವರ್ಷವೂ ಸಾಮಾಜಿಕ ಬದ್ಧತೆಯಿಂದ ಕಾರ್ಯನಿರ್ವಹಿಸುತ್ತಿರುವುದು ಇತರೇ ಸಹಕಾರ ಸಂಸ್ಥೆಗಳಿಗೆ ಮಾದರಿ ಎಂದು ಹೇಳಿದರು.

ಕುಶಾಲನಗರ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್ ಮಾತನಾಡಿ ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಪೋಷಕರ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ವ್ಯಾಸಂಗ ಮಾಡುವ ಈ ಕಾಲೇಜಿಗೆ ಶರವಣಕುಮಾರ್ ನೇತೃತ್ವದ ಸಹಕಾರಿ ಮಂಡಳಿ ನೀಡಿರುವ ಸೇವೆ ಅರ್ಥಪೂರ್ಣವಾದುದು ಎಂದರು.

ಜಲಮಂಡಳಿ ಮಾಜಿ ಅಧ್ಯಕ್ಷೆ ಕೆ.ಪಿ. ಚಂದ್ರಕಲಾ ಮಾತನಾಡಿ, ಅನೇಕ ವರ್ಷಗಳಿಂದ ಸರ್ಕಾರ ನೀಡಬೇಕಿದ್ದ ಮೂಲ ಸೌಕರ್ಯಗಳನ್ನು ಕೈಗಾರಿಕೋದ್ಯಮಿಗಳ ಸಹಕಾರ ಸಂಘ ನೀಡಿರುವುದು ಶ್ಲಾಘನೀಯ ಎಂದರು. ಸಹಕಾರ ಸಂಘದ ಉಪಾಧ್ಯಕ್ಷ ಜೋಸೆಫ್ ವಿಕ್ಟರ್ ಸೋನ್ಸ್, ನಿರ್ದೇಶಕರಾದ ರಾಮಕೃಷ್ಣ, ನಾಗೇಂದ್ರ ಬಾಬು, ಎಲ್. ನವೀನ್, ವಿ.ಸಿ. ಅಮೃತ್, ಎಂ.ವಿ. ನಾರಾಯಣ, ಫ್ರ‍್ರಾನ್ಸಿಸ್ ಡಿಸೋಜಾ, ಕೃತಿಕಾ , ಕೀರ್ತಿ ಲಕ್ಷಿö್ಮ, ಕವಿತಾ, ಸಹಕಾರ ಸಂಘದ ಸಿಇಒ ಶ್ರಿಜೇಶ್, ವ್ಯವಸ್ಥಾಪಕ ಆರ್. ರಾಜಾ, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಎಸ್.ಎನ್.ರಾಜೇಂದ್ರ, ಪಿಯು ವಿಭಾಗದ ಪ್ರಾಂಶುಪಾಲೆ ಪಿ.ಜಿ. ಶಾಂತಿ, ಗಂಥಾಲಯ ಅಧಿಕಾರಿ ಎಸ್.ನಂದೀಶ್ ಇದ್ದರು.