(ಕಾಯಪಂಡ ಶಶಿ ಸೋಮಯ್ಯ)

ಮಡಿಕೇರಿ, ಜ. ೪: ಜಿಲ್ಲೆಯಲ್ಲಿ ರಸಗೊಬ್ಬರ ದಾಸ್ತಾನು ಹಾಗೂ ಮಾರಾಟಕ್ಕೆ ಸಂಬAಧಿಸಿದAತೆ ಸೂಕ್ತ ನಿಯಮ ಪಾಲನೆಯೊಂದಿಗೆ ವ್ಯವಸ್ಥಿತ ಕಾರ್ಯನಿರ್ವಹಣೆಗೆ ಜಿಲ್ಲೆಯ ಗೊಬ್ಬರ ಮಾರಾಟಗಾರರು- ವಹಿವಾಟುದಾರರಿಗೆ ಕೃಷಿ ಇಲಾಖೆಯ ಮೂಲಕ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ.

ಈ ವಿಚಾರಕ್ಕೆ ಸಂಬAಧಿಸಿದAತೆ ಜಿಲ್ಲಾ ಕೃಷಿ ಇಲಾಖಾ ಜಂಟಿ ನಿರ್ದೇಶಕ ಚಂದ್ರಶೇಖರ್ ಅವರ ನೇತೃತ್ವದಲ್ಲಿ ಜಿಲ್ಲೆಯ ಎಲ್ಲಾ ಹೋಲ್‌ಸೇಲ್ ಪರಿಕರ ಮಾರಾಟಗಾರರು, ಅಂದರೆ ರಸಗೊಬ್ಬರ ಮಾರಾಟ ಮಾಡುವ ಡೀರ‍್ಸ್ಗಳು, ಕರ್ನಾಟಕ ಸ್ಟೇಟ್ ಸೀಡ್ ಕಾರ್ಪೋರೇಷನ್ ಮಾರ್ಕೆಟಿಂಗ್ ಫೆಡರೇಷನ್, ಜಿಲ್ಲೆಯ ಪರಿಕರ ಮಾರಾಟಗಾರರ ಸಂಘದ ಅಧ್ಯಕ್ಷರು ಹಾಗೂ ರಸಗೊಬ್ಬರ ಸರಬರಾಜು ಮಾಡುವ ಕಂಪೆನಿಗಳ ಜಿಲ್ಲಾ ಪ್ರತಿನಿಧಿಗಳನ್ನು ಒಳಗೊಂಡAತೆ ಸಭೆಯೊಂದನ್ನು ನಡೆಸಲಾಗಿದ್ದು, ಈ ಸಭೆಯಲ್ಲಿ ಹಲವು ಸಲಹೆ - ಸೂಚನೆಗಳನ್ನು ನೀಡಲಾಗಿದೆ.

ಮಾರ್ಚ್ ವೇಳೆಗೆ ಜಿಲ್ಲೆಗೆ ಅಗತ್ಯವಿರುವ ರಸಗೊಬ್ಬರಗಳನ್ನು ದಾಸ್ತಾನು ಇಟ್ಟುಕೊಳ್ಳಲು ಕ್ರಮವಹಿಸುವ ಕುರಿತು ಚರ್ಚಿಸಲಾಯಿತು. ಈ ಬಗ್ಗೆ ರಸಗೊಬ್ಬರ ಸರಬರಾಜು ಸಂಸ್ಥೆಗಳು ಕೇಂದ್ರ ಕಚೇರಿ ನೀಡಿರುವ ಅಲಾಟ್‌ಮೆಂಟ್‌ನAತೆ ಸರಬರಾಜು ಮಾಡಲು ತಾಕೀತು ಮಾಡಲಾಗಿದೆ. ಅಲ್ಲದೆ ವೋಲ್‌ಸೇಲ್ ಡೀಲರ್‌ನಿಂದ, ರೀಟೈಲ್ ಡೀಲರ್‌ಗಳಿಗೆ ಪೂರೈಕೆ ಹಾಗೂ ರೀಟೈಲ್ ಡೀಲರ್‌ಗಳು ಮಾರಾಟದಲ್ಲಿ ಅನುಸರಿಸಬೇಕಾದ ನಿಯಮಗಳ ಬಗ್ಗೆಯೂ ಮಾರ್ಗಸೂಚಿ ನೀಡಲಾಗಿದೆ.

ರೀಟೈಲ್ ಮಾರಾಟಗಾರರು ರಸಗೊಬ್ಬರಗಳನ್ನು ತಮ್ಮ ತಮ್ಮ ವ್ಯಾಪ್ತಿಯ ರೈತರಿಗೆ ಮಾತ್ರ ವಿತರಣೆ ಮಾಡಬೇಕು. ಈ ಸಂದರ್ಭದಲ್ಲಿ ರೈತರ ಜಮೀನು ಎಷ್ಟಿದೆಯೋ ಅದಕ್ಕೆ ತಕ್ಕಂತೆ ಮಾತ್ರ ಗೊಬ್ಬರ ಒದಗಿಸಬೇಕು. ಜಮೀನು ಇಲ್ಲದವರಿಗೆ ಗೊಬ್ಬರ ನೀಡಿದಲ್ಲಿ ಕ್ರಮ ಜರುಗಿಸಲಾಗುವುದು, ಜಮೀನು ಇಲ್ಲದವರಿಗೆ ಗೊಬ್ಬರ ನೀಡಿ ಇದು ಪಾಯಿಂಟ್ ಆಫ್‌ಸೇಲ್ ಅನ್ನುವ ಮೆಷಿನ್‌ನಲ್ಲಿ ಅವರ ಆಧಾರ್ ನಂಬರ್ ದಾಖಲಾದಲ್ಲಿ ಇಲಾಖೆಯಿಂದ ರೀಟೈಲ್ ಮಾರಾಟಗಾರರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಸೂಚನೆಯನ್ನು ಸಭೆಯಲ್ಲಿ ನೀಡಲಾಗಿದೆ. ಎಲ್ಲಾ ರೀಟೈಲ್ ಔಟ್‌ಲೆಟ್‌ಗಳು, ವೋಲ್‌ಸೇಲ್ ಡೀಲರ್‌ನಿಂದ ವಿತರಣೆಯಾಗುವ ಪಿಓಎಸ್‌ನಂತೆ ಮಾತ್ರ ಮಾರಾಟ ಮಾಡಬೇಕು ಎಂದು ವಹಿವಾಟುದಾರರಿಗೆ ತಿಳಿಸಲಾಗಿದೆ.

ಹೊರಜಿಲ್ಲೆ - ರಾಜ್ಯಕ್ಕೆ ನಿರ್ಬಂಧ

ಕೊಡಗು ಜಿಲ್ಲೆಯಿಂದ ಹೊರಜಿಲ್ಲೆ, ರಾಜ್ಯಕ್ಕೆ ಯಾವುದೇ ಕಾರಣಕ್ಕೂ ಗೊಬ್ಬರ ಹೋಗಬಾರದು. ಅಲ್ಲದೆ ಸರಬರಾಜು ಮಾಡಬಾರದು ಎಂಬ ಎಚ್ಚರಿಕೆಯನ್ನೂ ನೀಡಲಾಗಿದೆ.

ತಂಡ ರಚನೆ: ಈಗಾಗಲೇ ಜಿಲ್ಲಾಧಿಕಾರಿಗಳು ರಸಗೊಬ್ಬರದ ವಿಚಾರಕ್ಕೆ ಸಂಬAಧಿಸಿದAತೆ ಜಿಲ್ಲೆಯಲ್ಲಿ ಮೂರು ತಂಡಗಳನ್ನು ರಚನೆ ಮಾಡಿದ್ದಾರೆ. ಈ ತಂಡದಲ್ಲಿ ಕೃಷಿ ಇಲಾಖೆ, ಪೊಲೀಸ್ ಇಲಾಖೆ, ಕಂದಾಯ, ತೋಟಗಾರಿಕೆ ಇಲಾಖೆ, ವಾಣಿಜ್ಯ ತೆರಿಗೆ ಇಲಾಖೆಯ ಸಿಬ್ಬಂದಿಗಳಿದ್ದಾರೆ. ಈ ತಂಡ ಮಾರಾಟ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ. ಈ ಸಂದರ್ಭ ಯಾವದಾದರೂ ನ್ಯೂನ್ಯತೆ, ಲೋಪ - ದೋಷಗಳು ಕಂಡು ಬಂದರೆ, ಸಂಬAಧಿತ ಮಾಲೀಕರ ವಿರುದ್ಧ ಎಫ್‌ಐಆರ್ ದಾಖಲಿಸಲಾಗುವುದು ಎಂದೂ ಎಚ್ಚರಿಕೆ ನೀಡಲಾಗಿದೆ. ಇದಲ್ಲದೆ ಕೃಷಿಗೆ ಬಳಸುವ ರಸಗೊಬ್ಬರಗಳನ್ನು ಹೊರರಾಜ್ಯ - ಜಿಲ್ಲೆಗಳ ಕಾರ್ಖಾನೆಗಳಿಗೆ ರವಾನಿಸುವ ಪ್ರಯತ್ನ ನಡೆದಲ್ಲೂ ಅದರ ವಿರುದ್ಧ ಎಫ್‌ಐಆರ್ ದಾಖಲಾಗಲಿದೆ ಎಂಬ ಸೂಚನೆಯನ್ನೂ ಪರಿಕರ ಮಾರಾಟಗಾರರಿಗೆ ನೀಡಲಾಗಿದೆ.

ಈ ಸಭೆಯಲ್ಲಿ ಪರಿಕರ ಮಾರಾಟಗಾರರ ಸಂಘದ ಅಧ್ಯಕ್ಷರಾದ ನಂದಕುಮಾರ್ ಅವರು ಪಾಲ್ಗೊಂಡಿದ್ದರು. ಅವರು ಕೂಡ ಖಾಸಗಿ ಮಾರಾಟಗಾರರು ನಿಯಮಪಾಲನೆಯೊಂದಿಗೆ ಪಿಓಎಸ್ ನಿಯಮದಂತೆ ಮಾರಾಟ ಮಾಡಬೇಕು ಎಂದು ತಿಳಿಸಿದರು.

ಅಲ್ಲದೆ ಕಳಪೆ ರಸಗೊಬ್ಬರಗಳನ್ನು ಯಾವುದೇ ಕಾರಣಕ್ಕೂ ಮಾರಾಟ ಮಾಡಬಾರದು. ಅಧಿಕಾರಿಗಳ ತಂಡ ಪರಿಶೀಲನೆಗೆ ಆಗಮಿಸಿದಾಗ ಕಳಪೆ ಎಂದು ಕಂಡುಬAದರೂ ಕ್ರಮಜರುಗಿಸಲಾಗುವುದು. ಇನ್ನು ಮುಂದೆ ಪ್ರತಿ ತಿಂಗಳೂ ಈ ಬಗ್ಗೆ ಸಭೆ ನಡೆಸಲಾಗುವುದು ಎಂದು ಜಂಟಿ ನಿರ್ದೇಶಕ ಚಂದ್ರಶೇಖರ್ ಅವರು ತಿಳಿಸಿದರು.

ಕೊಡಗಿನಲ್ಲಿ ಮಾರ್ಚ್ನಲ್ಲಿ ಕಾಫಿಗೆ ಹೆಚ್ಚಾಗಿ ರಸಗೊಬ್ಬರದ ಅಗತ್ಯ ಎದುರಾಗುತ್ತದೆ. ಈ ನಿಟ್ಟಿನಲ್ಲಿ ಅಗತ್ಯ ದಾಸ್ತಾನು ಇಟ್ಟುಕೊಳ್ಳುವಂತೆಯೂ ಸೂಚಿಸಲಾಯಿತು. ಪ್ರಸ್ತುತ ಬೇರೆ ಜಿಲ್ಲೆಗಳಿಗೆ ರಸಗೊಬ್ಬರದ ಅಗತ್ಯತೆ ಇಲ್ಲ. ಕೊಡಗಿಗೆ ಅವಶ್ಯ ಇರುವುದರಿಂದ ಮೂರು ತಿಂಗಳಿಗೆ ಅಗತ್ಯವಾದ ಗೊಬ್ಬರ ದಾಸ್ತಾನು ಇಟ್ಟುಕೊಳ್ಳುವಂತೆ ಸಂಬAಧಿಸಿದವರಿಗೆ ಸಭೆಯಲ್ಲಿ ಸೂಚನೆ ನೀಡಲಾಗಿದೆ ಎಂದೂ ಚಂದ್ರಶೇಖರ್ ಅವರು ಮಾಹಿತಿ ನೀಡಿದ್ದಾರೆ.