ಮಡಿಕೇರಿ, ಜ. ೫: ನಗರದ ಪುಟಾಣಿನಗರ ಅಂಗನವಾಡಿ ಕೇಂದ್ರದಲ್ಲಿ ಅನೀಮಿಯ ಹಾಗೂ ಆರೋಗ್ಯ ತಪಾಸಣೆಯನ್ನು ಆರ್‌ಬಿಎಸ್‌ಕೆ ತಂಡದಿAದ ನೆರವೇರಿತು. ಅನೀಮಿಯ ತಪಾಸಣೆ ಕುರಿತು ಪೋಷಕರಿಗೆ ಪ್ರಭಾರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾಡಂಡ ಸವಿತಾ ಕೀರ್ತನ್ ರವರು ಮಾಹಿತಿ ನೀಡಿದರು.
ಜನವರಿ ೨೦೨೬ ರಿಂದ ವರ್ಷದಲ್ಲಿ ಎರಡು ಬಾರಿ ಅಂಗನವಾಡಿ ಕೇಂದ್ರದ ವ್ಯಾಪ್ತಿಗೆ ಒಳಪಡುವ ಆರು ತಿಂಗಳಿAದ ೫ ವರ್ಷದವರೆಗಿನ ಮಕ್ಕಳಿಗೆ ಅನೀಮಿಯ ತಪಾಸಣೆಯನ್ನು ಮಾಡಿ ಮಕ್ಕಳ ರಕ್ತಹೀನತೆ ತಡೆಗಟ್ಟುವ ಪ್ರಯತ್ನವನ್ನು ಆರೋಗ್ಯ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಕಾರದೊಂದಿಗೆ ಪ್ರಾರಂಭಿಸಿದೆ.
ಆರರಿಂದ ಐವತ್ತೊಂಬತ್ತು ತಿಂಗಳ ವಯಸ್ಸಿನ ಮಕ್ಕಳಲ್ಲಿ ಹಿಮೋಗ್ಲೋಬಿನ್ ಸಾಂದ್ರತೆ ಕಡಿಮೆ ಇದ್ದರೆ ರಕ್ತಹೀನತೆ ಎಂದು ಪರಿಗಣಿಸಲಾಗುವುದು. ಪೋಷಕರಿಗೆ ತಿಳುವಳಿಕೆಯನ್ನು ಸಭೆ ಮೂಲಕ ಮೂಡಿಸಿ ನಂತರ ಮಗುವಿನ ಆಹಾರ ಪದ್ಧತಿ ಮಗುವಿನ ರಕ್ತಹೀನತೆ ಇತಿಹಾಸದ ಬಗ್ಗೆ ಪೋಷಕರ ಮೂಲಕ ಮಾಹಿತಿ ಪಡೆದು ಸ್ಕಿçÃನಿಂಗ್ ಮಾಡಲಾಗುವುದು.
ಚಿಕಿತ್ಸೆ: ರಕ್ತಹೀನತೆಗೆ ಒಳಗಾಗಿದ್ದ ಮಕ್ಕಳ ಚಿಕಿತ್ಸೆ, ೬-೧೨ ತಿಂಗಳ ಮಕ್ಕಳಿಗೆ ಪ್ರತಿದಿನ ೧ ಎಂಎಲ್ ಐರನ್ ಸಿರಪ್, ೧-೩ ವರ್ಷದ ಮಕ್ಕಳಿಗೆ ಪ್ರತಿದಿನ ೧.೫ ಎಂಎಲ್, ೩-೫ ವರ್ಷದ ಮಕ್ಕಳಿಗೆ ಪ್ರತಿದಿನ ೨ ಎಂಎಲ್, ಎರಡು ತಿಂಗಳ ಅವಧಿಗೆ ಪ್ರತಿ ೧೪ ದಿನಗಳಿಗೊಮ್ಮೆ ಐ ಎಫ್ ಎ ಸಿರಪ್‌ನ ಅನುಸರಣೆಗಾಗಿ ಆಶಾ ಮೂಲಕ ಮೇಲ್ವಿಚಾರಣೆ ಮಾಡಲಾಗುತ್ತದೆ. ಹಿಮೋಗ್ಲೋಬಿನ್ ಸಾಮಾನ್ಯ ಮಟ್ಟಕ್ಕೆ ಸುಧಾರಿಸಿ ದರೆ ಚಿಕಿತ್ಸೆ ನಿಲ್ಲಿಸಲಾಗುವುದು. ಆದರೆ ರೋಗನಿರೋಧಕ ಐಎಫ್‌ಎ ಡೋಸ್‌ಗಳು ಮುಂದುವರಿಸಲಾಗುವುದು (ವಾರಕ್ಕೊಮ್ಮೆ), ಎರಡು ತಿಂಗಳಲ್ಲಿ ರಕ್ತಹೀನತೆ ಚಿಕಿತ್ಸೆಗೆ ಮಗು ಪ್ರತಿಕ್ರಿಯಿಸದಿದ್ದಲ್ಲಿ ಹೆಚ್ಚಿದ ತಪಾಸಣೆಗಾಗಿ ಶಿಶುವೈದ್ಯರ ಬಳಿಗೆ ಜಿಲ್ಲಾಸ್ಪತ್ರೆಗೆ ಸೂಚನೆ ಮಾಡಲಾಗುವುದು.
ಮಕ್ಕಳಲ್ಲಿ ಪೋಷಕಾಂಶದ ಕೊರತೆಯಿಂದ, ಜಂತುಹುಳು ಭಾದೆಯಿಂದ, ಸ್ವಚ್ಛತೆಗೆ ಗಮನ ಹರಿಸದೆ ಇರುವುದರಿಂದ ರಕ್ತಹೀನತೆ ಉಂಟಾಗುತ್ತದೆ. ಮಕ್ಕಳಲ್ಲಿ ಸುಸ್ತು, ತಲೆ ಸುತ್ತುವಿಕೆ, ಕೈ ಕಾಲು ಸೆಳೆಯುವಿಕೆ, ಏಕಾಗ್ರತೆಯ ಕೊರತೆ, ಹಸಿವಾಗದೆ ಇರುವುದು ಇವೆಲ್ಲ ತೊಂದರೆಗಳಿAದ ಮಕ್ಕಳ ಬೆಳವಣಿಗೆ ಕುಂಠಿತವಾಗುತ್ತದೆ ಎಂದು ತಿಳಿಸಿದರು. ಪೋಷಕರ ಒಪ್ಪಿಗೆ ಪಡೆದು ೩೫ ಮಕ್ಕಳ ಅನೀಮಿಯ ತಪಾಸಣೆಯನ್ನು ವೈದ್ಯಾಧಿಕಾರಿ ಶೈಮಾ, ಆರೋಗ್ಯ ಕಾರ್ಯಕರ್ತರಾದ ಮಮತಾ ರವರು ನೆರವೇರಿಸಿದರು.
ಮಕ್ಕಳನ್ನು ಸಮಯಕ್ಕೆ ಸರಿಯಾಗಿ ಆರೋಗ್ಯ ತಪಾಸಣೆ ಮತ್ತು ಅನೀಮಿಯ ತಪಾಸಣೆಗೆ ಒಳಪಡಿಸುವಲ್ಲಿ ಅಂಗನವಾಡಿ ಕಾರ್ಯಕರ್ತೆ ಉಮಾವತಿ ಮತ್ತು ಸಹಾಯಕಿ ದೈವಣಿರವರು ಶ್ರಮಿಸಿದ್ದು ಅಧಿಕಾರಿಯವರಿಂದ ಪ್ರಶಂಸೆಗೆ ಒಳಪಟ್ಟರು.