ಮಡಿಕೇರಿ, ಜ. ೫ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಶಿಶು ಅಭಿವೃದ್ಧಿ ಯೋಜನಾ ಕಚೇರಿ, ಕರಿಕೆ ಗ್ರಾಮ ಪಂಚಾಯಿತಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕರಿಕೆ ಇವರ ಸಹಯೋಗದೊಂದಿಗೆ ಕಿಶೋರಿಯರಿಗೆ ಹಾಗೂ ೬ ವರ್ಷದೊಳಗಿನ ಮಕ್ಕಳ ತಾಯಂದಿರಿಗೆ, ಸ್ತಿçà ಶಕ್ತಿ ಸದಸ್ಯರಿಗೆ ಅರಿವು ಕಾರ್ಯಕ್ರಮ ಕರಿಕೆ ಸರ್ಕಾರಿ ಪ್ರೌಢಶಾಲಾ ಸಭಾಂಗಣದಲ್ಲಿ ನಡೆಸಲಾಯಿತು.
ಕಾರ್ಯಕ್ರಮವನ್ನು ಕರಿಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಾಲಚಂದ್ರ ನಾಯರ್ ಉದ್ಘಾಟಿಸಿ ಮಾತನಾಡಿ ಕರಿಕೆ ಗ್ರಾಮ ಬಾಲ್ಯವಿವಾಹ ಮುಕ್ತ ಗ್ರಾಮವಾಗಿದ್ದು, ಬಾಲಗರ್ಭಿಣಿಯಂತಹ ತೊಂದರೆಗಳು ತಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಆಗದಿರುವಂತೆ ತಡೆಯಲು ಪೋಷಕರಿಗೆ ಮತ್ತು ಮಕ್ಕಳಿಗೆ ಅರಿವು ಕಾರ್ಯಕ್ರಮಗಳನ್ನು ಪಂಚಾಯಿತಿ ಅಧ್ಯಕ್ಷರು, ಸದಸ್ಯರುಗಳು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಎಲ್ಲಾರೂ ಒಟ್ಟುಗೂಡಿ ನಡೆಸಿ ಈ ಸಮಸ್ಯೆ ಬರದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ನಡೆಸಲಾಗುವುದು ಎಂದು ತಿಳಿಸಿದರು. ರಾಜ್ಯಸರ್ಕಾರ ಮಹಿಳೆಯರ ಸಬಲೀಕರಣ ಕ್ಕಾಗಿ ಹಲವಾರು ಸೌಲಭ್ಯಗಳನ್ನು ತಂದಿದ್ದು ಸರಿಯಾದ ರೀತಿಯಲ್ಲಿ ಸದುಪಯೋಗಪಡಿಸಿಕೊಳ್ಳಿ ಎಂದು ತಿಳಿಸಿದರು. ಪಂಚ ಗ್ಯಾರಂಟಿ ಯೋಜನೆಗಳ ಅನುಕೂಲಗಳ ಬಗ್ಗೆ ಮಾಹಿತಿ ನೀಡಿದರು.
ಶಿಶು ಅಭಿವೃದ್ಧಿ ಯೋಜನಾ ಇಲಾಖೆಯ ಪ್ರಬಾರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾಡಂಡ ಸವಿತಾ ಕೀರ್ತನ್ ಮಾತನಾಡಿ ಇಂದು ಮಕ್ಕಳು ಮತ್ತು ಮಹಿಳೆಯರಿಗೆ ಸರ್ಕಾರ ಬೇಟಿ ಬಚಾವೋ ಬೇಟಿ ಪಡಾವೋ ಎಂಬ ಉತ್ತಮ ರೀತಿಯ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದು, ಕೊಡಗಿನಲ್ಲಿ ಗಂಡು -ಹೆಣ್ಣು ಎಂಬ ಭೇದ ಭಾವವಿಲ್ಲದೆ ಸಮಾನತೆಯಿಂದ ಮಕ್ಕಳನ್ನು ಬೆಳೆಸುತ್ತಿದ್ದಾರೆ. ಇಬ್ಬರಲ್ಲೂ ಸಮಾನ ಶಿಕ್ಷಣಕ್ಕೆ ಆದ್ಯತೆ ನೀಡಿದ್ದು ಇದರ ಸದ್ಬಳಕೆಯನ್ನು ಮಾಡಿಕೊಂಡು ಮಕ್ಕಳು ಉತ್ತಮ ಶಿಕ್ಷಣ ಪಡೆಯುವಂತಾಗಬೇಕು ವಯಸ್ಸಿನ ಆಕರ್ಷಣೆಗೆ ಒಳಗಾಗದೆ , ಕೆಟ್ಟ ಆಮಿಷಗಳಿಗೆ ಒಳಗಾಗದೆ, ಮೊಬೈಲ್ ದುರ್ಬಳಕೆ ಮಾಡದೆ, ಬಾಲ್ಯ ಮತ್ತು ಭವಿಷ್ಯ ಉತ್ತಮ ರೀತಿಯಲ್ಲಿ ಇರುವಂತೆ ನಿರ್ಧಾರಗಳನ್ನು ಕೈಕೊಂಡು ಪೋಷಕರ ಮತ್ತು ಶಿಕ್ಷಕರ ಮಾರ್ಗದರ್ಶನದೊಂದಿಗೆ ದಾರಿ ತಪ್ಪದೇ ಜಾಗರುಕರಾಗಿರಬೇಕಾಗಿ ತಿಳಿಸುತ್ತಾ ಚರ್ಚೆಗಳ ಮೂಲಕ ಸಲಹೆ ಮಾರ್ಗದರ್ಶನ ನೀಡಿ ಉತ್ತಮ ಗುರಿ ಸಾಧನೆಗೆ ಸತತ ಪ್ರಯತ್ನ ಮಾಡಲು ಸಲಹೆ ನೀಡಿದರು.
ದಿನಪತ್ರಿಕೆಗಳನ್ನು ಪ್ರತಿದಿನ ಓದುವ ಹವ್ಯಾಸಗಳನ್ನು ಬೆಳೆಸಿಕೊಳ್ಳ ಬೇಕು, ಮೊಬೈಲ್ ಬಳಕೆಯಿಂದ ಯಾವುದೆ ಉತ್ರೆö್ಪÃಕ್ಷೆಗೆ ಒಳಗಾಗದೆ ಓದುವ ವಯಸ್ಸಿನಲ್ಲಿ ಶಿಕ್ಷಣದಿಂದ ವಂಚಿತರಾಗಿ ತಮ್ಮ ಬಾಲ್ಯ ಮತ್ತು ಶಿಕ್ಷಣವನ್ನು ಹಾಳು ಮಾಡಿಕೊಳ್ಳ ಬಾರದು. ನಿಮ್ಮ ಸಮಯ ಮತ್ತು ಶಿಕ್ಷಣ ಅತಿ ಅವಶ್ಯಕ, ಸರಿಯಾದ ರೀತಿಯಲ್ಲಿ ಸದುಪಯೋಗ ಪಡಿಸಿಕೊಳ್ಳಿ ಎಂದು ತಿಳಿಸಿದರು.
ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರಾದ ಪುಂಡರೀಕ ಮಾತನಾಡಿ ೧೧-೧೮ ವರ್ಷದ ಹೆಣ್ಣು ಮಕ್ಕಳಿಗೆ ದೈಹಿಕ, ಭೌತಿಕ, ಮಾನಸಿಕ ಬದಲಾವಣೆಗಳಾಗುವುದಲ್ಲದೆ ಆ ಸಮಯದಲ್ಲಿ ದೇಹಕ್ಕೆ ಹೆಚ್ಚು ಪೋಷಕಾಂಶಗಳು ಬೇಕಾಗುತ್ತದೆ. ಐರನ್, ಪೋಲಿಕ್ ಅಸಿಡ್ ಅವಶ್ಯಕತೆ ಇದ್ದು ಮುಟ್ಟಾಗುವ ಸಂದರ್ಭದಲ್ಲಿ ಐರನ್ & ಪೋಲಿಕ್ ಆಸಿಡ್ ತೆಗೆದುಕೊಳ್ಳಬೇಕು. ಮಲ್ಟಿ ವಿಟಮಿನ್ಸ್ ಅವಶ್ಯಕ ಮೊಟ್ಟೆ ಮತ್ತು ಬೇಳೆಗಳು ಅವಶ್ಯಕತೆ ಉತ್ತಮ ಆಹಾರವನ್ನು ತೆಗೆದುಕೊಳ್ಳಿ ಎಂದು ಮಾಹಿತಿ ನೀಡಿದರು.
ಮಹಿಳಾ ಸಬಲೀಕರಣ ಘಟಕದ ಜಿಲ್ಲಾ ಸಂಯೋಜಕಿ ಮಮತ ಮಾತನಾಡಿ ಒಳ್ಳೆ ಸ್ಪರ್ಶ ಮತ್ತು ಕೆಟ್ಟ ಸ್ಪರ್ಶದ ಕುರಿತು ಮಾಹಿತಿ ನೀಡಿದರು. ಕೆಟ್ಟ ಸ್ಪರ್ಶ ಮಾಡಿದ ವ್ಯಕ್ತಿಗಳ ವಿರುದ್ಧ ಧ್ವನಿಯೆತ್ತಬೇಕು ಹೆದರಿ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳಬಾರದು ಎಂದು ತಿಳಿಸಿದರು.
ಮಹಿಳಾ ಸಬಲೀಕರಣ ಘಟಕದ ಜೆಂಡರ್ ಸ್ಪೆಷಲಿಸ್ಟ್ ಕೇಶಿನಿ ಎಸ್.ಆರ್ ಮಾತನಾಡಿ ಮಹಿಳೆಯರು ಮತ್ತು ಹೆಣ್ಣು ಮಕ್ಕಳು ಸಮಾಜದ ಮುಖ್ಯವಾಹಿನಿಗೆ ಬರಬೇಕು, ಎಲ್ಲಾ ಕ್ಷೇತ್ರದಲ್ಲಿದಲ್ಲಿ ತಮ್ಮನ್ನು ತಾವು ಉತ್ತಮ ರೀತಿಯಲ್ಲಿ ತೊಡಗಿಸಿಕೊಳ್ಳಬೇಕು. ನಾವು ಇಂದು ಹೆಣ್ಣು ಮಕ್ಕಳ ಜನನವನ್ನು ಪ್ರೋತ್ಸಾಹಿಸುವುದರೊಂದಿಗೆ, ಉತ್ತಮ ಶಿಕ್ಷಣವನ್ನು ನೀಡಬೇಕು, ಸರ್ಕಾರ ಉಚಿತ ಮತ್ತು ಕಡ್ಡಾಯ ಶಿಕ್ಷಣ ವನ್ನು ಜಾರಿಗೆ ತಂದಿದ್ದು, ಸೂಕ್ತರೀತಿಯಲ್ಲಿ ಸದುಪಯೋಗ ಪಡಿಸಿಕೊಳ್ಳಬೇಕು. ಮಕ್ಕಳಿಗೆ ಯಾವುದೆ ರೀತಿಯ ಸಮಸ್ಯೆಗಳು ಏರ್ಪಟ್ಟಲ್ಲಿ ೧೦೯೮, ಮಹಿಳೆಯರು ಸಮಸ್ಯೆಗಳಿಗೆ ಒಳಗಾದರೆ ೧೮೧, ತುರ್ತು ಕರೆಗಾಗಿ ೧೧೨ ಸಹಾಯವಾಣಿಗೆ ಕರೆ ಮಾಡಬಹುದು ಎಂದು ಹೇಳಿದರು ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಗರ್ಭಿಣಿ /ಬಾಣಂತಿ ಹಾಗೂ ಎರಡನೇ ಹೆಣ್ಣು ಮಗುವಿಗೆ ಮಾತೃವಂದನಾ ಯೋಜನೆ ಇದ್ದು ಹತ್ತಿರದ ಅಂಗನವಾಡಿ ಕೇಂದ್ರದಲ್ಲಿ ಅರ್ಜಿಯನ್ನು ಸಲ್ಲಿಸಬಹುದು, ದೌರ್ಜನ್ಯಕ್ಕೆ ಮಹಿಳೆಯರೆನಾದರೂ ಒಳಗಾದರೆ ಮಡಿಕೇರಿಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಸಖಿ ಒನ್ ಸ್ಟಾಫ್ ಸೆಂಟರ್ನಲ್ಲಿ ದೂರನ್ನು ನೀಡುದರೊಂದಿಗೆ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರು ರಾಜಶೇಖರ್, ಪಂಚಾಯಿತಿ ಸದಸ್ಯರಾದ ಆಯಿಷ, ಜಯಶ್ರೀ, ಸುಮಾ, ಶಾಲಾ ಶಿಕ್ಷಕಿ ಸುಶ್ಮಿತಾ, ಹರ್ಷಿತ, ಅರುಣ, ಕುಸುಮ, ಆರೋಗ್ಯ ಇಲಾಖೆಯ ಜಯಕುಮಾರಿ, ಸೌಮ್ಯ, ಪೋಷಕರು, ಮಹಿಳೆಯರು, ವಿದ್ಯಾರ್ಥಿಗಳು, ಭಾಗಮಂಡಲ ವೃತ್ತದ ಅಂಗನವಾಡಿ ಕಾರ್ಯಕರ್ತೆಯರು ಹಾಜರಿದ್ದರು.