ಕಣಿವೆ, ಜ. ೫: ಇಲ್ಲೊಂದು ತಡೆಗೋಡೆಯ ಮೇಲೆ ಬರೆದ ಸಾಲುಗಳಿವು.

ಮರೆಯದಿರು ತಾಯನುಡಿ, ಕಡಿಯದಿರು ಹಸಿರ ಕುಡಿ, ಅಕ್ಷರ ಅನ್ನ - ಪರಿಸರ ಚೆನ್ನ ಅಂತಾ ಯಾರೋ ಪರಿಸರ ಪ್ರೇಮಿಯೊಬ್ಬರ ಕಾಳಜಿ ಹಾಗೂ ಕರೆ ಇದು. ಆದರೆ, ಅದೇ ಬರಹದ ಬಳಿ ಇದ್ದಂತಹ ಮರವೊಂದರ ರೆಂಬೆ ಕೊಂಬೆಗಳನ್ನು ಕಡಿದು ಬೋಳು ಮಾಡಲಾಗಿದೆ. ರೆಂಬೆಗಳಲ್ಲಿನ ಎಲೆಗಳು ಉದುರುವ ಕಾರಣಕ್ಕೋ ಏನೋ ಆಗಾಗ್ಗೆ ಗುಡಿಸುವುದು ತಪ್ಪುತ್ತೆ ಎಂದು ಹೀಗೆ ರೆಂಬೆಗಳನ್ನು ಕಡಿದು ಉರುಳಿಸಲಾಗಿದೆ.

ಆದರೆ, ಇದ ಕಡಿದ ಕಟುಕನಿಗೇನು ಗೊತ್ತು. ಆ ಮರದಡಿ ಇರುವ ಈ ಘೋಷ ವಾಕ್ಯ..? ಸುಂಕದವನ ಬಳಿ ಕಷ್ಟ ಹೇಳಿಕೊಂಡರೇನು ಫಲ ? ಎಂಬAತೆ ಗಿಡ ಮರದ ಮೇಲೆ ಮಮತೆ ಇಲ್ಲದವರು ಹೀಗೆ ರೆಂಬೆ ಕೊಂಬೆ ಕಡಿದಿದ್ದಾರೆ.