ವೀರಾಜಪೇಟೆ, ಜ. ೫: ಬಿಟ್ಟಂಗಾಲ ಕೊಡಗು ಹೆಗ್ಗಡೆ ಸಮಾಜದ ಸಭಾಂಗಣದಲ್ಲಿ ವೀರಾಜಪೇಟೆ ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ವತಿಯಿಂದ ನಿವೃತ್ತರಾದ ದೈಹಿಕ ಶಿಕ್ಷಣ ಶಿಕ್ಷಕರನ್ನು ಸನ್ಮಾನಿಸಲಾಯಿತು.

ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ವೀರಾಜಪೇಟೆ ಶೈಕ್ಷಣಿಕ ತಾಲೂಕು ಘಟಕದ ಅಧ್ಯಕ್ಷ ಮಂಡೇಪAಡ ತಮ್ಮಯ್ಯ, ಕಾರ್ಯದರ್ಶಿ ಪಡಿಞರಂಡ ಪ್ರಭು ಕುಮಾರ್ ನಿವೃತ್ತ ಶಿಕ್ಷಕರ ಸಾಧನೆಗಳನ್ನು ಸಭೆಯಲ್ಲಿ ವಿವರಿಸಿದರು.

ನಿವೃತ್ತ ದೈಹಿಕ ಶಿಕ್ಷಣ ಅಧಿಕಾರಿ ತೆಕ್ಕಡೆ ಗಾಯತ್ರಿ ಮಾತನಾಡಿ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರ ಹುದ್ದೆಗಳನ್ನು ಸರ್ಕಾರಗಳು ಸಕಾಲಕ್ಕೆ ಭರ್ತಿ ಮಾಡಿ ಕ್ರೀಡಾ ಚಟುವಟಿಕೆಗಳು ಶಾಲೆಗಳಲ್ಲಿ ನಿರಂತರವಾಗಿ ನಡೆಯಲು ಪ್ರೋತ್ಸಾಹಿಸಬೇಕೆಂದು ಕರೆ ನೀಡಿದರು. ಇದೇ ಸಂದರ್ಭ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರಾದ ಗಾಯತ್ರಿ, ಕೇಚಂಡ ಪ್ರಸನ್ನ, ಮುದ್ದಂಡ ಮೊಣ್ಣಪ್ಪ, ಕುಪ್ಪಣಮಾಡ ಮಾದಪ್ಪ, ಕಡೇಮಾಡ ಸುಬ್ಬಯ್ಯ, ಮಚ್ಚಂಡ ಬೋಪಣ್ಣ, ಅಪ್ಪಂಡೇರAಡ ದೇವಕ್ಕಿ, ಕೊಂಗೇಪAಡ ಕುಟ್ಟಪ್ಪ, ಪ್ರೇಮಕುಮಾರಿ, ಶಿವಣ್ಣ ಅವರುಗಳನ್ನು ಸನ್ಮಾನಿಸಲಾಯಿತು.

ಕೊಡಗು ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಪುಗ್ಗೇರ ಪ್ರವೀಣ್ ಅಧ್ಯಕ್ಷತೆ ವಹಿಸಿದ್ದರು. ದೈಹಿಕ ಶಿಕ್ಷಣ ಶಿಕ್ಷಕಿ ತೆಕ್ಕಡೆ ಹರಿಣಿ, ಮೂಕಳೆರ ಮೀರಾ, ವೀರಾಜಪೇಟೆ ಶೈಕ್ಷಣಿಕ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಚಿಮ್ಮಕಣಿರ ಸೋಮಯ್ಯ, ಪ್ರಮುಖರಾದ ಮಲ್ಲಂಗಡ ಸತ್ಯ, ಚೇಂದಿರ ಡ್ಯಾನಿ, ತಿರುನೆಲ್ಲಿಮಾಡ ರಮಾನಂದ, ಸರ್ಕಾರಿ ನೌಕರರ ಸಂಘದ ನಿರ್ದೇಶಕ ರಾಘವೇಂದ್ರ ಮುಂತಾದವರು ಹಾಜರಿದ್ದರು.