ಚೆಯ್ಯಂಡಾಣೆ, ಜ. ೫: ರಸ್ತೆಗೆ ನಾಯಿ ಅಡ್ಡಬಂದ ಸಂದರ್ಭ ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ರಸ್ತೆ ಬದಿಯ ತೋಡಿನೊಳಕ್ಕೆ ಉರುಳಿಬಿದ್ದ ಘಟನೆ ನಾಪೋಕ್ಲು-ಮೂರ್ನಾಡು ಮುಖ್ಯ ರಸ್ತೆಯ ಹೊದವಾಡ ಗ್ರಾಮದ ಬೊಳಿಬಾಣೆ ಎಂಬಲ್ಲಿ ಭಾನುವಾರ ಮಧ್ಯರಾತ್ರಿ ನಡೆದಿದೆ.
ನಾಪೋಕ್ಲು ಕಡೆಯಿಂದ ಮೂರ್ನಾಡು ಕಡೆಗೆ ಇಕೋ ಸ್ಪೋರ್ಟ್ಸ್ ಕಾರಿನಲ್ಲಿ ಮೂರ್ನಾಡು ನಿವಾಸಿಯೊಬ್ಬರು ತೆರಳುತ್ತಿದ್ದ ಸಂದರ್ಭ ನಾಪೋಕ್ಲು-ಮೂರ್ನಾಡು ಮುಖ್ಯ ರಸ್ತೆಯ ಹೊದವಾಡ ಗ್ರಾಮದ ಬೊಳಿಬಾಣೆ ಬಳಿಯ ರಸ್ತೆ ತಿರುವಿನಲ್ಲಿ ದಿಢೀರನೆ ಕಾರಿಗೆ ನಾಯಿಯೊಂದು ಅಡ್ಡಬಂದಿದೆ. ಈ ಸಂದರ್ಭ ನಿಯಂತ್ರಣ ಕಳೆದುಕೊಂಡ ಕಾರು ಕಾವೇರಿ ನದಿಗೆ ಹೊಂದಿಕೊAಡಿರುವ ರಸ್ತೆ ಬದಿಯ ತೋಡಿನೊಳಗೆ ಉರುಳಿಬಿದ್ದಿದೆ. ಅವಘಡದಿಂದ ಕಾರು ಸಂಪೂರ್ಣ ಜಖಂಗೊAಡಿದ್ದು. ಮೂರ್ನಾಡು ನಿವಾಸಿ ಕಾರಿನ ಚಾಲಕನಿಗೆ ಗಾಯಗಳಾಗಿದ್ದು, ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ತೋಡಿನೊಳಕ್ಕೆ ಉರುಳಿ ಬಿದ್ದ ಕಾರನ್ನು ಸೋಮವಾರ ಕ್ರೆöÊನ್ ಯಂತ್ರದ ಮೂಲಕ ಮೇಲೆತ್ತಲಾಯಿತು.
ಸ್ಥಳಕ್ಕೆ ನಾಪೋಕ್ಲು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.