ಕೋವರ್ಕೊಲ್ಲಿ ಇಂದ್ರೇಶ್
ಬೆAಗಳೂರು, ಜ. ೫: ರಾಜ್ಯದ ಎಲ್ಲಾ ಅರಣ್ಯ ಪ್ರದೇಶಗಳಲ್ಲಿ ಹುಲಿಗಳು ಮತ್ತು ಇತರ ಮಾಂಸಾಹಾರಿ ಪ್ರಾಣಿಗಳ ಸಂಖ್ಯೆಯನ್ನು ಅಂದಾಜು ಮಾಡುವ ಪ್ರಕ್ರಿಯೆ ಸೋಮವಾರದಿಂದ ಪ್ರಾರಂಭವಾಗಿದೆ.
ಈ ಗಣತಿಯನ್ನು ಕಾಳಿ, ಭದ್ರಾ, ನಾಗರಹೊಳೆ, ಬಂಡೀಪುರ ಮತ್ತು ಬಿಳಿಗಿರಿ ರಂಗಸ್ವಾಮಿ ದೇವಾಲಯ ಹುಲಿ ಮೀಸಲು ಸೇರಿದಂತೆ ರಾಜ್ಯದ ಪ್ರಮುಖ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ನಡೆಸಲಾಗುತ್ತಿದೆ.
ರಾಷ್ಟçವ್ಯಾಪಿ ಹುಲಿ ಗಣತಿ ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ನಡೆಸಲಾಗುತಿದ್ದು, ಇದು ಅಂತಹ ಆರನೇ ಗಣತಿ ಆಗಿದೆ. ಹಿಂದಿನ ಗಣತಿಗಳನ್ನು ೨೦೦೬, ೨೦೧೦, ೨೦೧೪, ೨೦೧೮ ಮತ್ತು ೨೦೨೨ರಲ್ಲಿ ನಡೆಸಲಾಗಿತ್ತು. ಕರ್ನಾಟಕದಲ್ಲಿ ೨೦೨೨ ರ ಗಣತಿಯ ಪ್ರಕಾರ ಸುಮಾರು ೫೬೩ ಹುಲಿಗಳಿವೆ ಎಂದು ಅಂದಾಜಿಸಲಾಗಿತ್ತು.
ಅರಣ್ಯ ಇಲಾಖೆಯ ಮಾಹಿತಿ ಪ್ರಕಾರ ರಾಜ್ಯದ ೩೮ ಅರಣ್ಯ ವಿಭಾಗಗಳಲ್ಲಿ ಗಸ್ತು ಪ್ರದೇಶಗಳಲ್ಲಿ ಗಣತಿ ಮಾಡಲಾಗುತ್ತಿದೆ. ಈ ಉದ್ದೇಶಕ್ಕಾಗಿ, ಅಕ್ಟೋಬರ್ನಿಂದ ಡಿಸೆಂಬರ್ವರೆಗೆ ಐದು ಹುಲಿ ಮೀಸಲು ಪ್ರದೇಶಗಳ ಮುಂಚೂಣಿ ಸಿಬ್ಬಂದಿಗೆ ಪ್ರತ್ಯೇಕವಾಗಿ ಮತ್ತು ಎಲ್ಲಾ ೧೩ ಅರಣ್ಯ ವೃತ್ತಗಳ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ತಲಾ ಮೂವರು ಸದಸ್ಯರನ್ನು ಒಳಗೊಂಡ ತಂಡಗಳು ಜನವರಿ ೫ ರಿಂದ ಮೂರು ದಿನಗಳ ಕಾಲ ರಾಜ್ಯಾದ್ಯಂತ ಅರಣ್ಯ ಪ್ರದೇಶಗಳಲ್ಲಿ ಪ್ರತಿದಿನ ಸುಮಾರು ಐದು ಕಿ.ಮೀ. ಗಸ್ತು ತಿರುಗಲಿದ್ದು, ಹುಲಿಗಳು, ಚಿರತೆಗಳು ಮತ್ತು ಇತರ ಮಾಂಸಾಹಾರಿ ಪ್ರಾಣಿಗಳ ಹಾಗೂ ಆನೆಗಳ ಪಗ್ಮಾರ್ಕ್ಗಳು, ಸ್ಕಾö್ಯಟ್ ಮತ್ತು ನೇರ ವೀಕ್ಷಣೆಯಂತಹ ಅಂಕಿ ಅಂಶಗಳನ್ನು ಸಂಗ್ರಹಿಸಲಿವೆ.
ಈಗಾಗಲೇ ನಾಗರಹೊಳೆ ಹುಲಿ ಮೀಸಲು ಪ್ರದೇಶಗಳಲ್ಲಿ ೪೫ ದಿನಗಳ ಕಾಲ ೬೦೦ಕ್ಕೂ ಹೆಚ್ಚು ಕ್ಯಾಮೆರಾಗಳನ್ನು ಬಳಸಿಕೊಂಡು ಕ್ಯಾಮೆರಾ ಟ್ರಾಪ್ ಸರ್ವೆ ನಡೆಸಿ ಹುಲಿಗಳ ಸಂಖ್ಯೆಯನ್ನು ಸಂಗ್ರಹಿಸಲಾಗಿದೆ. ಇಂದಿನಿAದ ತಾ. ೭ ರವರೆಗೆ ಮಾಂಸಾಹಾರಿ ಪ್ರಾಣಿಗಳ ಗಣತಿ ನಡೆಸಲಾಗುತ್ತಿದ್ದು, ಇದರಲ್ಲಿ ನಾಗರಹೊಳೆಯ ೮ ವಲಯಗಳ ಸುಮಾರು ೪೦೦ಕ್ಕೂ ಹೆಚ್ಚು ಅಧಿಕಾರಿ ಮತ್ತು ಸಿಬ್ಬಂದಿ ಭಾಗಿಯಾಗಿದ್ದಾರೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ನಾಗರಹೊಳೆಯಲ್ಲಿ ತಾ. ೯, ೧೦ ಮತ್ತು ೧೧ ರಂದು ಲೈನ್ ಟ್ರಾನ್ಸಾಕ್ಟ್ ಸರ್ವೆ ನಡೆಸಲು ದಿನಾಂಕ ನಿಗದಿ ಮಾಡಲಾಗಿದೆ. ಈ ಸರ್ವೆಯನ್ನು ವಿವಿಧ ಅರಣ್ಯಗಳಲ್ಲಿ ವಿವಿಧ ದಿನಾಂಕಗಳAದು ನಡೆಸಲಾಗುತ್ತದೆ. ಈ ಎರಡನೇ ಹಂತದ ಗಣತಿ ಸಮಯದಲ್ಲಿ ತಂಡಗಳು ಮಾಂಸಾಹಾರಿ ಪ್ರಾಣಿಗಳ ಜೊತೆಗೆ ಅವುಗಳಿಗೆ ಆಹಾರವಾಗಿರುವ ಜಿಂಕೆ, ಗೌರ್ ಮತ್ತು ಕಾಡುಕೋಣಗಳಂತಹ ಸಸ್ಯಾಹಾರಿ ಪ್ರಾಣಿಗಳ ನೇರ ವೀಕ್ಷಣೆಯ ಆಧಾರದ ಮೇಲೆ ಅಂಕಿ ಅಂಶಗಳನ್ನು ಸಂಗ್ರಹಿಸಲಿವೆ. ಮುಂದೆ ಕ್ಯಾಮೆರಾ ಅಳವಡಿಸಲು ಸ್ಥಳಗಳನ್ನು ನಿರ್ಧರಿಸಲು ಈ ಮಾಹಿತಿಯಿಂದ ಸಹಾಯವಾಗಲಿದೆ. ಹುಲಿ ಯೋಜನಾ ನಿರ್ದೇಶಕ ರಮೇಶ್ ಕುಮಾರ್ ಅವರನ್ನು ರಾಷ್ಟಿçÃಯ ಹುಲಿ ಸಂರಕ್ಷಣಾ ಪ್ರಾಧಿಕಾರದ (ಎನ್ಟಿಸಿಎ) ನೋಡಲ್ ಅಧಿಕಾರಿಯಾಗಿ ನೇಮಿಸಲಾಗಿದೆ. ಇವರು ಸಂಪೂರ್ಣ ಗಣತಿ ಪ್ರಕ್ರಿಯೆಯನ್ನು ನೋಡಿಕೊಳ್ಳಲಿದ್ದಾರೆ.
೨೦೨೨ ರ ಗಣತಿಯ ಪ್ರಕಾರ ನಾಗರಹೊಳೆಯಲ್ಲಿ ಒಟ್ಟು ೧೪೬ ಹುಲಿಗಳು ಇವೆ ಎಂದು ಅಂದಾಜಿಸಲಾಗಿತ್ತು. ೨೦೧೮ ರ ಗಣತಿಯಲ್ಲಿ ಇಲ್ಲಿ ೧೨೫ ಹುಲಿಗಳನ್ನು ಗುರುತಿಸಲಾಗಿತ್ತು. ನಾಗರಹೊಳೆ ರಾಜ್ಯದಲ್ಲೇ ಅತ್ಯಂತ ಹೆಚ್ಚು ಹುಲಿಗಳ ಸಂಖ್ಯೆಯನ್ನು ಹೊಂದಿದ್ದು ಎರಡನೇ ಸ್ಥಾನದಲ್ಲಿ ಬಂಡೀಪುರ ಹುಲಿ ಮೀಸಲು ಅರಣ್ಯ ಇದ್ದು ಇಲ್ಲಿ ೧೪೦ ಹುಲಿಗಳಿವೆ ಎಂದು ಅರಣ್ಯ ಇಲಾಖೆ ಅಂದಾಜಿಸಿದೆ. ಕೆಲ ಜಿಲ್ಲೆಗಳಲ್ಲಿ ಆಸಕ್ತ ವನ್ಯಜೀವಿ ಪ್ರೇಮಿಗಳಿಗೂ ಅರಣ್ಯ ಇಲಾಖೆಯ ಗಣತಿ ಕಾರ್ಯದಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಿಕೊಡಲಾಗಿದೆ.
೨೦೨೨ ರ ಗಣತಿಯ ಪ್ರಕಾರ ದೇಶದಲ್ಲಿ ಒಟ್ಟು ೩೬೮೨ ಹುಲಿಗಳಿದ್ದು ೫೩ ಹುಲಿ ಮೀಸಲು ಅರಣ್ಯಗಳೂ ಇವೆ. ಜಗತ್ತಿನಲ್ಲಿ ಒಟ್ಟು ೫೫೦೦-೬೦೦೦ ಹುಲಿಗಳಿವೆ ಎಂದು ಅಂದಾಜಿಸಲಾಗಿದೆ. ಮಧ್ಯ ಪ್ರದೇಶ ರಾಜ್ಯವು ಹುಲಿಗಳ ಸಂಖ್ಯೆಯಲ್ಲಿ ದೇಶದಲ್ಲೇ ಮೊದಲ ಸ್ಥಾನದಲ್ಲಿದ್ದು ಇಲ್ಲಿ ೭೮೫ ಹುಲಿಗಳಿವೆ. ಎರಡನೇ ಸ್ಥಾನದಲ್ಲಿ ೫೬೩ ಹುಲಿ ಹೊಂದಿರುವ ಕರ್ನಾಟಕ ಇದ್ದು, ೫೬೦ ಹುಲಿಗಳಿರುವ ಉತ್ತರಖಾಂಡ ಮೂರನೇ ಸ್ಥಾನದಲ್ಲಿದೆ.
ದೇಶಾದ್ಯಂತ ಸಂಗ್ರಹಿಸಿದ ಹುಲಿ ಗಣತಿಯ ಮಾಹಿತಿಯನ್ನು ದೆಹಲಿಯ ರಾಷ್ಟಿçÃಯ ಹುಲಿ ಸಂರಕ್ಷಣಾ ಪ್ರಾಧಿಕಾರಕ್ಕೆ ಕಳುಹಿಸಲಾಗುತ್ತದೆ. ಅಲ್ಲಿ ಮಾಹಿತಿ ಕ್ರೋಢೀಕರಿಸಿ ಮಾರ್ಚ್ ನಂತರ ಅಂಕಿ ಅಂಶಗಳನ್ನು ಬಿಡುಗಡೆ ಮಾಡಲಾಗುತ್ತದೆ.