ಮಡಿಕೇರಿ, ಜ. ೫: ಗಾಂಜಾ ಮಾರಾಟ ಯತ್ನ ಪ್ರಕರಣಕ್ಕೆ ಸಂಬAಧಿಸಿದAತೆ ಮೂವರನ್ನು ಬಂಧಿಸಲಾಗಿದೆ. ಕಾಂತೂರು ಮೂರ್ನಾಡುವಿನಲ್ಲಿ ಸಂದೇಶ್ ಎಂಬವರ ತೋಟದ ಲೈನ್ಮನೆಯಲ್ಲಿ ಗಾಂಜಾ ಸಹಿತ ಮೂವರನ್ನು ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಅಸ್ಸಾA ರಾಜ್ಯದ ಧರಾಂಗ್ ಜಿಲ್ಲೆ ಮೂಲದ ಅಜೀಮ್ ಅಲಿ (೧೯), ಸೈಫುಲ್ ಇಸ್ಲಾಂ (೩೧) ಹಾಗೂ ಅಪ್ರಾಪ್ತ ಬಾಲಕನೋರ್ವನನ್ನು ಬಂಧಿಸಿ, ೧ ಕೆ.ಜಿ ೪೨೦ ಗ್ರಾಂ. ಗಾಂಜಾ, ರೂ. ೮೫೦ ನಗದು, ೧ ಗಾಂಜಾ ಸೇದುವ ಕೊಳವೆಯನ್ನು ವಶಕ್ಕೆ ಪಡೆದಿದ್ದಾರೆ.