ಮಡಿಕೇರಿ, ಜ. ೫: ಕೊಡಗು ಜಿಲ್ಲಾ ಯೋಜನಾ ಸಮಿತಿ ಸದಸ್ಯರ ಚುನಾವಣೆಯಲ್ಲಿ ಬಿಜೆಪಿಗೆ ೪, ಕಾಂಗ್ರೆಸ್ ಗೆ ೩ ಹಾಗೂ ಎಸ್‌ಡಿಪಿಐಗೆ ೧ ಸ್ಥಾನ ಲಭಿಸಿದೆ.
ಒಟ್ಟು ೮ ಸ್ಥಾನಗಳಿಗೆ ನಡೆದಿದ್ದ ಚುನಾವಣೆಯಲ್ಲಿ ಬಿಜೆಪಿ ಯಿಂದ ೬, ಕಾಂಗ್ರೆಸ್‌ನಿAದ ೫, ಎಸ್‌ಡಿಪಿಐ ನಿಂದ ೩ ಮಂದಿ ಸ್ಪರ್ಧಿಸಿದ್ದರು. ಈ ಪೈಕಿ ಕಾಂಗ್ರೆಸ್‌ನ ನಗರಸಭಾ ಸದಸ್ಯ ರಾಜೇಶ್ ಯಲ್ಲಪ್ಪ ೨೭ ಮತ, ಬಿಜೆಪಿಯಿಂದ ನಗರಸಭಾ ಸದಸ್ಯರಾದ ಸಬಿತ ೨೩ ಮತ, ಚಂದ್ರಶೇಖರ್ ೨೨ ಮತ, ಪೊನ್ನಂಪೇಟೆ ಪಟ್ಟಣ ಪಂಚಾಯತ್ ಸದಸ್ಯೆ ಕೆ.ಎ ರಸಿಕ ೨೨ ಮತ ಪಡೆದು ಜಯಗಳಿಸಿದರು. ಇನ್ನುಳಿದಂತೆ ಮಡಿಕೇರಿ ನಗರಸಭಾ ಸದಸ್ಯರುಗಳಾದ ಬಿಜೆಪಿಯ ಅರುಣ್ ಶೆಟ್ಟಿ, ಚಿತ್ರಾವತಿ, ಶಾರದಾ, ಶ್ವೇತ, ಪೊನ್ನಂಪೇಟೆ ಪಟ್ಟಣ ಪಂಚಾಯಿತಿ ಸದಸ್ಯೆ ಮೂಕಳೆರ ಜಿ. ಸುಮಿತಾ, ನಗರಸಭಾ ಸದಸ್ಯರಾದ ಎಸ್‌ಡಿಪಿಐನ ಮನ್ಸೂರ್ ಇವರುಗಳು ತಲಾ ೨೧ ಮತಗಳನ್ನು ಪಡೆದ ಕಾರಣ ಲಾಟರಿ ಮೂಲಕ ಆಯ್ಕೆ ಪ್ರಕ್ರಿಯೆ ನಡೆದು ಅರುಣ್ ಶೆಟ್ಟಿ, ಚಿತ್ರ‍್ರಾವತಿ, ಸುಮಿತ, ಮನ್ಸೂರ್ ಗೆಲುವು ಸಾಧಿಸಿದರು. ಈ ಚುನಾವಣೆಯಲ್ಲಿ ಮಡಿಕೇರಿ ನಗರಸಭೆ ಹಾಗೂ ಪೊನ್ನಂಪೇಟೆ ಪಟ್ಟಣ ಪಂಚಾಯಿತಿ ಸದಸ್ಯರುಗಳು ಮತದಾರರಾಗಿದ್ದು, ಒಟ್ಟು ೪೨ ಮತಗಳ ಪೈಕಿ ೪೦ ಮತಗಳು ಚಲಾವಣೆಗೊಂಡಿದ್ದವು. ಪೊನ್ನಂಪೇಟೆ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ರಶೀದ್ ೧೯, ಸದಸ್ಯ ಜುನೈದ್ ೧೯, ನಗರಸಭಾ ಸದಸ್ಯರಾದ ಮೇರಿ ವೇಗಸ್ ೧೮, ಬಶೀರ್ ೧೭ ಮತ ಪಡೆದು ಸೋಲನುಭವಿಸಿದರು.