ಮಡಿಕೇರಿ, ಜ. ೫: ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಪ್ರತಾಪ್ ಸಿಂಹ ರಾಜ್ಯ ರಾಜಕಾರಣಕ್ಕೆ ಪ್ರವೇಶಿಸಿದ್ದು, ಚಾಮರಾಜ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲು ಪ್ರಯತ್ನಿಸುತ್ತಿರುವುದಾಗಿ ತಿಳಿಸಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ತಾನು ಈ ಹಿಂದೆಯೇ ಟಿವಿ ಸಂದರ್ಶನಗಳಲ್ಲಿ, ಬ್ರಾಡ್ ಕಾಸ್ಟ್ಗಳಲ್ಲಿ ರಾಜ್ಯ ರಾಜಕಾರಣಕ್ಕೆ ತಾನು ಬಂದಾಗಿದೆ ಎಂಬುದಾಗಿ ಸ್ಪಷ್ಟವಾಗಿ ಹೇಳಿದ್ದೇನೆ. ಚಾಮರಾಜ ವಿಧಾನಸಭಾ ಕ್ಷೇತ್ರ ವಿದ್ಯಾವಂತರು, ಸುಶಿಕ್ಷಿತರು, ಅತಿ ಹೆಚ್ಚು ಸರಕಾರಿ ಉದ್ಯೋಗಿಗಳು, ಅತಿ ಹೆಚ್ಚು ಕೇಂದ್ರ ಸರ್ಕಾರಿ ಉದ್ದಿಮೆಗಳು ಅತಿ ಹೆಚ್ಚು ಎಲ್ಲಾ ಕಡೆಗಳಿಂದಲೂ ಬಂದು ನೆಲೆಸಿ ಮೈಸೂರಿನಲ್ಲಿ ಬದುಕು ಕಟ್ಟಿಕೊಂಡಿರುವವರು ಮತ್ತು ಒಳ್ಳೆಯತನಕ್ಕೆ ಬೆಲೆ ಕೊಡುವವರ ಸಂಖ್ಯೆ ದೊಡ್ಡ ಪ್ರಮಾಣದಲ್ಲಿ ಇರುವಂತಹ ಕ್ಷೇತ್ರವಾಗಿದೆ. ಐದೈದು ವರ್ಷಕ್ಕೂ ಕೂಡ ಬದಲಾಯಿಸಬೇಕಾದಂತಹ ಅನಿವಾರ್ಯತೆಯನ್ನು
ತಂದೊಡ್ಡುವAತಹ ಶಾಸಕರು ಈ ಕ್ಷೇತ್ರಕ್ಕೆ ಬೇಡ; ಶಂಕರಲಿAಗೇಗೌಡರ ಹಾಗೆ ನಾಲ್ಕೆöÊದು ಬಾರಿ ಗೆದ್ದು ಈ ಕ್ಷೇತ್ರದ ಅಭಿವೃದ್ಧಿ ಕೆಲಸ ಮಾಡುವಂತಹ ಶಾಸಕರು ಬೇಕು. ನಾಲ್ಕೆöÊದು ವರ್ಷಕ್ಕೆ ಬದಲಾವಣೆ ಮಾಡುವಂತ ಶಾಸಕರು ಬೇಡ. ಈ ಕ್ಷೇತ್ರದಲ್ಲಿ ಜನ ಕೈಹಿಡಿಯುವುದು ಕವರಿಗೆ ಕಾಸು ಹಾಕಿ ಕೊಡುವವರನ್ನಲ್ಲ, ಕೆಲಸ ಮಾಡುವವರನ್ನು. ಹಾಗಾಗಿ ಸ್ವಾಭಾವಿಕವಾಗಿ ಈ ಕ್ಷೇತ್ರ ನನ್ನ ಆಯ್ಕೆಯಾಗಿದ್ದು ಇದಕ್ಕಾಗಿ ಬಹಳಷ್ಟು ಸಮಯದಿಂದ ಪ್ರಯತ್ನ ಮಾಡುತ್ತಿದ್ದೇನೆ, ಜನರ ಜೊತೆಗಿದ್ದೇನೆ ಎಂದರು. ತಾನು ಸಂಸದನಾಗಿದ್ದಾಗ ಈ ಕ್ಷೇತ್ರಕ್ಕೂ ಕೂಡ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ಅವುಗಳನ್ನು ಜನ ನೆನಪಿನಲ್ಲಿಟ್ಟುಕೊಂಡು ಎಲ್ಲೇ ಹೋದರೂ ಪ್ರೀತಿ ವಿಶ್ವಾಸದಿಂದ ನಡೆಸಿಕೊಳ್ಳುತ್ತಾರೆ. ಜನರಿಗೆ ಕವರಿಗೆ ಕಾಸು ಹಾಕಿ ಕೊಡುವವರು ಬೇಡ, ಕೆಲಸ ಮಾಡುವವರು ಬೇಕು ಅಂತಾದಾಗ ಪ್ರತಾಪ್ ಸಿಂಹ ಕೂಡ ನ್ಯಾಚುರಲ್ ಚಾಯ್ಸ್ ಆಗೇ ಆಗ್ತಾನೆ ಎಂದು ಪ್ರತಾಪ್ ಸಿಂಹ ಹೇಳಿದರು.