ಆಲೂರು ಸಿದ್ದಾಪುರ , ಜ. ೬ : ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಳ್ತೆ ಗ್ರಾಮದಲ್ಲಿ ಒಳಚರಂಡಿ ಮಾಡಿದ್ದರು ಸಹ ಅನೇಕ ವರ್ಷಗಳಿಂದ ಸ್ವಚ್ಛಗೊಳಿಸದೇ ಪಂಚಾಯಿತಿ ನಿರ್ಲಕ್ಷö್ಯ ವಹಿಸಿತ್ತು. ಗ್ರಾಮಸ್ಥರು ಅನೇಕ ಬಾರಿ ಸಂಬAಧಪಟ್ಟ ಪಂಚಾಯಿತಿಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನ ಆಗಿರಲಿಲ್ಲ. ಇದರಿಂದ ಗ್ರಾಮಸ್ಥರು ರೋಗ ರುಜಿನ ಹರಡುವ ಭಿತಿಯಲ್ಲಿ ದಿನ ತಳ್ಳುತ್ತಿದ್ದರು, ಅನೇಕ ವರ್ಷಗಳಿಂದ ಬರ್ತಿಯಾಗಿ ಮಳೆ ನೀರು ಹಾಗೂ ಕೆಲ ಮನೆಗಳ ಗಲೀಜು ನೀರು ಒಳಚರಂಡಿ ಬರ್ತಿಯಾಗಿ ರಸ್ತೆಯಲ್ಲಿ ಹರಿಯುತಿತ್ತು ಇದರಿಂದ ಮುಖ್ಯ ರಸ್ತೆಯಲ್ಲಿ ನಡೆದಾಡಲು ಗ್ರಾಮಸ್ಥರಿಗೆ ಹಾಗೂ ಶಾಲಾ ಕಾಲೇಜು ವಿದ್ಯರ್ಥಿಗಳಿಗೆ ಪ್ರತಿನಿತ್ಯ ತೊಂದರೆ ಆಗುತ್ತಿತ್ತು.
ಬೇಸತ್ತ ಗ್ರಾಮಸ್ಥರು ಈ ಗ್ರಾಮದ ಒಳ ಚರಂಡಿಯನ್ನು ಸ್ವತಃ ತಾವೇ ಸೇರಿಕೊಂಡು ಸ್ವಚ್ಛಗೊಳಿಸಿದರು. ಇದು ದೊಡ್ಡಮಳ್ತೆ ಗ್ರಾಮಪಂಚಾಯಿತಿಯ ನಿರ್ಲಕ್ಷö್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.