ಕಣಿವೆ, ಜ. ೬: ಇಲ್ಲಿನ ಆರ್ಯವೈಶ್ಯ ಮಂಡಳಿ ವತಿಯಿಂದ ವಾಸವಿ ಸಪ್ತಾಹದ ಅಂಗವಾಗಿ ಕುಶಾಲನಗರ ತಾಲೂಕಿನ ಬಾಳೆಗುಂಡಿ ಹಾಗೂ ವಾಲ್ನೂರು ತ್ಯಾಗತ್ತೂರು ಗಿರಿಜನ ಹಾಡಿಯಲ್ಲಿರುವ ೫೦ಕ್ಕೂ ಹೆಚ್ಚಿನ ಆದಿವಾಸಿ ಕುಟುಂಬಗಳಿಗೆ ಉಚಿತವಾಗಿ ಬೆಡ್‌ಶೀಟ್ ವಿತರಿಸಲಾಯಿತು.
ಚಳಿಗಾಲದಲ್ಲಿ ಗುಡಿಸಲಿನಲ್ಲಿ ಮಲಗುವ ಆದಿವಾಸಿಗಳು ಬೆಚ್ಚಗೆ ಹೊದಿಕೆ ಹೊದ್ದು ಮಲಗಲಿ ಎಂಬ ಉದ್ದೇಶದಿಂದ ಅವರಿಗೆ ಈ ಸೇವೆ ನೀಡಿದ್ದಾಗಿ ಆರ್ಯವೈಶ್ಯ ಮಂಡಳಿ ಅಧ್ಯಕ್ಷ ಬಿ.ಆರ್. ನಾಗೇಂದ್ರ ಪ್ರಸಾದ್ ಹಾಗೂ ಮಹಿಳಾ ಮಂಡಳಿ ಅಧ್ಯಕ್ಷೆ ವಾಣಿ ಮಹೇಶ್ ಹೇಳಿದರು. ಈ ಸಂದರ್ಭ ಆರ್ಯವೈಶ್ಯ ಮಂಡಳಿಯ ವಿವಿಧ ಘಟಕಗಳ ಪದಾಧಿಕಾರಿಗಳು ಇದ್ದರು.