ಗೋಣಿಕೊಪ್ಪಲು, ಜ.೬: ಗೋಣಿಕೊಪ್ಪ ಚೇಂಬರ್ ಆಫ್ ಕಾಮರ್ಸ್ ಕೋಶಾಧಿಕಾರಿ ಮನೋಹರ್. ವಿ.ಜಿ. (೬೪) ಮಂಗಳವಾರ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾದರು. ಮನೋಹರ್ ಹಲವಾರು ಸಂಘ-ಸAಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಪೊನ್ನಂಪೇಟೆಯಲ್ಲಿ ಸ್ವಂತ ಅಂಗಡಿಯನ್ನು ಹೊಂದಿದ್ದು, ರಿಯಲ್ ಎಸ್ಟೇಟ್ ಉದ್ಯಮದಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದರು.
ಬೆಳಿಗ್ಗೆ ಮಕ್ಕಳನ್ನು ಗೋಣಿಕೊಪ್ಪಲಿನ ಶಾಲೆಗೆ ಬಿಟ್ಟು ಬಂದ ನಂತರ ತಮ್ಮ ಅಂಗಡಿಯ ಹಿಂಭಾಗದಲ್ಲಿರುವ ಮನೆಯಲ್ಲಿ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದರು. ಕೆಲ ಸಮಯದ ನಂತರ ಇವರನ್ನು ಅಂಗಡಿಯಲ್ಲಿರುವ ಸಿಬ್ಬಂದಿ ವಿಚಾರಿಸಲು ತೆರಳಿದ ವೇಳೆ ಎಚ್ಚರಗೊಳ್ಳದಿದ್ದಾಗ, ವೈದ್ಯರನ್ನು ಕರೆಸಿದಾಗ ಪರಿಶೀಲಿಸಿದ ವೈದ್ಯರು ಮನೋಹರ್ ಹೃದಯಘಾತಕ್ಕೊಳಗಾಗಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಮೃತರ ನಿಧನಕ್ಕೆ ಗೋಣಿಕೊಪ್ಪ ಚೇಂಬರ್ ಆಫ್ ಕಾಮರ್ಸ್ನ ಸ್ಥಾನೀಯ ಅಧ್ಯಕ್ಷ ಕಡೇಮಾಡ ಸುನಿಲ್ ಮಾದಪ್ಪ, ಪ್ರಧಾನ ಕಾರ್ಯದರ್ಶಿ ಪೊನ್ನಿಮಾಡ ಸುರೇಶ್, ಉಪಾಧ್ಯಕ್ಷರಾದ ಪ್ರಭಾಕರ್ ನೆಲ್ಲಿತ್ತಾಯ ಮತ್ತಿತರರು ಸಂತಾಪ ವ್ಯಕ್ತಪಡಿಸಿದ್ದಾರೆ.