ಕಣಿವೆ, ಜ. ೬: ಪಟ್ಟಣದ ಗುಂಡೂರಾವ್ ಬಡಾವಣೆಗೆ ಹೊಂದಿಕೊAಡಿರುವ ಆರ್‌ಸಿ ಬಡಾವಣೆಯಲ್ಲಿ ನೂತನವಾಗಿ ನಿರ್ಮಿಸಲು ಉದ್ದೇಶಿಸಿದ್ದ ೫ ಕೋಟಿ ರೂ ವೆಚ್ಚದ ಮೌಲಾನಾ ಆಜಾದ್ ಶಾಲಾ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಾಸಕ ಡಾ.ಮಂತರ್‌ಗೌಡ ಮಂಗಳವಾರ ಭೂಮಿಪೂಜೆ ನೆರವೇರಿಸಿದರು.

ಬಳಿಕ ಮಾತನಾಡಿದ ಅವರು, ಮೌಲಾನ ಆಜಾದ್ ಶಾಲೆಯಲ್ಲಿ ೬ ರಿಂದ ೧೦ ನೇ ತರಗತಿಯವರಿಗೆ ಓದುವ ವಿದ್ಯಾರ್ಥಿಗಳಿಗೆ ಸೌಲಭ್ಯ ಸಿಗಲಿದ್ದು, ಅಲ್ಪಸಂಖ್ಯಾತ ವರ್ಗದ ಶೇ.೭೫ ಹಾಗೂ ಇತರೆ ಸಮುದಾಯಗಳ ಶೇ. ೨೫ ಮಕ್ಕಳಿಗೆ ಪ್ರವೇಶ ದೊರಕಲಿದೆ. ಎಲ್ಲರೂ ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣವನ್ನು ನೀಡುವ ಮೂಲಕ ಮಕ್ಕಳನ್ನು ಆದರ್ಶ ವ್ಯಕ್ತಿಗಳಾಗಿ ರೂಪಿಸಬೇಕಿದೆ. ಸಚಿವ ಜಮೀರ್ ಅಹಮದ್ ಆವರ ಸಹಕಾರದಿಂದ ಕುಶಾಲನಗರದಲ್ಲಿ ಮೌಲಾನಾ ಶಾಲೆಗೆ ೫ ಕೋಟಿ ರೂಗಳ ಅನುದಾನ ದೊರೆತಿದೆ.

ಉದ್ದೇಶಿತ ಕಟ್ಟಡದ ಜಾಗದ ಬಳಿ ಇರುವ ಉದ್ಯಾನವನ್ನು ಕೂಡ ಅಭಿವೃದ್ಧಿ ಪಡಿಸುವುದಾಗಿ ಶಾಸಕರು ಭರವಸೆ ನೀಡಿದರು.

ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ್ ರಜಾಕ್, ಶಬ್ಬೀರ್ ಅಹಮದ್, ಎಂ.ಎ.ಉಸ್ಮಾನ್, ಆದಂ, ನಗರ ಕಾಂಗ್ರೆಸ್ ಅಧ್ಯಕ್ಷ ಜೋಸೆಫ್ ವಿಕ್ಟರ್ ಸೋನ್ಸ್, ಕುಡಾ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಅಲ್ಪಸಂಖ್ಯಾತ ಇಲಾಖೆಯ ತಾಲೂಕು ವಿಸ್ತರಣಾಧಿಕಾರಿ ವೀರಭದ್ರ, ಶಾಲಾ ಮುಖ್ಯ ಶಿಕ್ಷಕಿ ಎಂ.ಎಸ್.ಸೌಮ್ಯ ಹಾಜರಿದ್ದರು.

ಕೋಪಗೊಂಡ ಶಾಸಕರು!

ಮೌಲಾನಾ ಆಜಾದ್ ಶಾಲಾ ಕಟ್ಟಡದ ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಭೂಮಿ ಪೂಜೆ ಸಂದರ್ಭ ಅಗತ್ಯ ಮಾಹಿತಿ ಪಡೆಯಲು ಶಾಸಕ ಡಾ.ಮಂತರ್‌ಗೌಡ ಮುಂದಾದಾಗ ಸಂಬAಧಿಸಿದ ಇಲಾಖೆಯ ಯಾವ ಅಧಿಕಾರಿಗಳು ಅಲ್ಲಿ ಇರಲಿಲ್ಲ. ಅಲ್ಲದೇ ಕಾಮಗಾರಿ ನಿರ್ಮಾಣ ಸಂಸ್ಥೆಯ ಅಭಿಯಂತರರು ಕೂಡ ಸ್ಥಳದಲ್ಲಿ ಇಲ್ಲದಿರುವುದನ್ನು ಕಂಡ ಶಾಸಕರು ಕೋಪಗೊಂಡರು.

ಈ ವೇಳೆ ಕಟ್ಟಡ ಕಾಮಗಾರಿ ಗುತ್ತಿಗೆದಾರರೊಬ್ಬರು ನಾನೇ ಸರ್ ಇಲ್ಲಿ ಇರೋದು ಎಂದು ಅವರಲ್ಲಿದ್ದ ಕಟ್ಟಡದ ಮಾಹಿತಿ ಯನ್ನು ಶಾಸಕರಿಗೆ ನೀಡಿದರು.

ಬಳಿಕ ಗುತ್ತಿಗೆದಾರರಿಗೆ ಸೂಕ್ತ ನಿರ್ದೇಶನ ನೀಡಿದ ಶಾಸಕರು, ಕಟ್ಟಡ ಕಾಮಗಾರಿ ಶೀಘ್ರ ಗತಿಯಲ್ಲಿ ನಡೆಯಬೇಕು. ಕಟ್ಟಡವಿಲ್ಲದೇ ಪರದಾಡುತ್ತಿರುವ ವಿದ್ಯಾರ್ಥಿಗಳಿಗೆ ಬಹು ಬೇಗನೇ ಈ ಕಟ್ಟಡ ದೊರಕುವಂತಾಗಬೇಕೆAದರು.

-ಕೆ.ಎಸ್.ಮೂರ್ತಿ