ವೀರಾಜಪೇಟೆ, ಜ. ೬: ಮೂಲತಃ ವೀರಾಜಪೇಟೆ ಸಮೀಪದ ಬೇಟೋಳಿ ಗ್ರಾಮದವರಾದ ಬಿ.ಬಿ. ರವಿನಂದನ್ ಬೋರ್ಕರ್ ಅವರು ಮೈಸೂರು ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿ ಪಡೆದಿದ್ದಾರೆ.

ಮೈಸೂರು ವಿಶ್ವವಿದ್ಯಾನಿಲಯದ ಜರ್ನಲಿಸಂ ಹಾಗೂ ಮಾಸ್ ಕಮ್ಯುನಿಕೇಷನ್ ವಿಭಾಗದ ಪ್ರಾಧ್ಯಾಪಕಿ ಪ್ರೊ. ಸಪ್ನಾ ಎಂ.ಎಸ್. ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ iಟಿಣegಡಿiಣಥಿ ಚಿಟಿಜ ಖಿeಚಿಛಿhiಟಿg ಆಚಿಣಚಿ ಎouಡಿಟಿಚಿಟisಚಿm iಟಿ Iಟಿಜiಚಿಟಿ Uಟಿiveಡಿsiಣies: ಂಟಿ emಠಿiಡಿiಛಿಚಿಟ sಣuಜಥಿ oಜಿ sಣಚಿಣus,ಛಿhಚಿಟಟeಟಿges ಚಿಟಿಜ sಣಡಿಚಿಣegies ಎಂಬ ವಿಷಯದ ಬಗ್ಗೆ ಮಹಾ ಪ್ರಬಂಧವನ್ನು ಮಂಡಿಸಿರುತ್ತಾರೆ. ಡಾ. ಬಿ.ಬಿ. ರವಿನಂದನ್ ಬೋರ್ಕರ್ ಅವರು ಬೆಂಗಳೂರಿನ ಸೆಂಟ್ ಜೋಸೆಫ್ಸ್ ವಿಶ್ವವಿದ್ಯಾಲಯದಲ್ಲಿ ಜರ್ನಲಿಸಂ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಪ್ರಸ್ತುತ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ.

ಇವರು ವೀರಾಜಪೇಟೆ ಬೇಟೋಳಿ ಗ್ರಾಮದ ನಿವೃತ್ತ ಸೈನಿಕರಾದ ಬಿ.ಎನ್. ಬಾಲಕೃಷ್ಣ ಬೋರ್ಕರ್ ಹಾಗೂ ಸುಲೋಚನ ಬೋರ್ಕರ್ ದಂಪತಿ ಪುತ್ರ.