ಐಗೂರು: ಯಡವನಾಡಿನ ವಾಲ್ಮೀಕಿ ಆಶ್ರಮ ಶಾಲೆಯಲ್ಲಿ ಹೊಸ ವರ್ಷಾಚರಣೆಯ ಪ್ರಾರಂಭದ ದಿನವನ್ನು ಅಧ್ಯಾಪಕ ವೃಂದದವರು ಮತ್ತು ವಿದ್ಯಾರ್ಥಿಗಳು ಮಾದಕ ವಸ್ತುಗಳ ನಿರ್ಮೂಲನ ದಿನವನ್ನಾಗಿ ಆಚರಿಸಿದರು.

ಮಾದಕ ವಸ್ತುಗಳ ಬಳಕೆಯಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಚಿತ್ರ ಬಿಡಿಸುವ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ವಿಜೇತರಾದವರಿಗೆ ಬಹುಮಾನವನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕ ರಜನಿಕಾಂತ್, ಅಧ್ಯಾಪಕ ವೃಂದದ ರೇಖಾ, ಪ್ರಿಯ, ವಿದ್ಯಾ, ಚಂದ್ರಕಲಾ, ಸುಧಾ, ಅರುಣಿ ಮತ್ತು ಗಣೇಶ್ ಭಾಗವಹಿಸಿದ್ದರು.