ಕೂಡಿಗೆ, ಜ. ೭: ಕೊಡಗು ಜಿಲ್ಲಾ ಪೊಲೀಸ್, ಸೋಮವಾರಪೇಟೆ ಉಪ ವಿಭಾಗ, ಕುಶಾಲನಗರ ಸಂಚಾರಿ ಪೊಲೀಸ್ ಠಾಣೆ ವತಿಯಿಂದ ರಸ್ತೆ ಸುರಕ್ಷತಾ ಸಪ್ತಾಹ ೨೦೨೬ ರ ಅಂಗವಾಗಿ ಕೂಡುಮಂಗಳೂರು ಮತ್ತು ಕೂಡಿಗೆಯಲ್ಲಿ ಸಾರ್ವಜನಿಕರಿಗೆ ರಸ್ತೆ ಸುರಕ್ಷತಾ ನಿಯಮ ಮತ್ತು ಕಟ್ಟುನಿಟ್ಟಾಗಿ ಪಾಲಿಸಬೇಕಾದ ಸಂಚಾರಿ ನಿಯಮಗಳ ಬಗ್ಗೆ ಸಂಚಾರಿ ಪೊಲೀಸ್ ಠಾಣಾಧಿಕಾರಿ ಮಾಹಿತಿ ನೀಡಿದರು.

ಸಾರ್ವಜನಿಕರು ಸಂಚಾರಿ ನಿಯಮಗಳನ್ನು ಪಾಲಿಸಿ, ಸಂಚಾರಿ ಪೊಲೀಸರೊಂದಿಗೆ ಸಹಕರಿಸಿ ಎಂಬ ವಾಕ್ಯದೊಂದಿಗೆ ಅಪ್ರಾಪ್ತರಿಗೆ ವಾಹನಗಳನ್ನು ಚಾಲನೆಗೆ ನೀಡದಿರುವಂತೆ ಸೂಚಿಸಿದರು. ಸೀಟ್ಟ್ ಬೆಲ್ಟ್ ಧರಿಸಿ ವಾಹನಗಳ ಚಾಲನೆ ಮಾಡುವುದು, ದ್ವಿಚಕ್ರ ವಾಹನ ಚಾಲನೆ ಸಂದರ್ಭ ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ಚಾಲನೆ ಮಾಡುವುದು ಸೇರಿದಂತೆ ವಿವಿಧ ಬಗೆಯ ಸಂಚಾರಿ ನಿಯಮಗಳ ಬಗ್ಗೆ ಮಾಹಿತಿ ಒದಗಿಸಿದರು.

ಈ ಸಂದರ್ಭ ಕುಶಾಲನಗರ ಸಂಚಾರಿ ಪೊಲೀಸ್ ಠಾಣೆಯ ಉಪ ನಿರೀಕ್ಷಕರಾದ ಗಣೇಶ್, ಶ್ರೀನಿವಾಸ್, ಎ.ಎಸ್.ಐ. ಸಾರಿಲ್ಡಿನ್ ಸೇರಿದಂತೆ ಸಿಬ್ಬಂದಿ ವರ್ಗದವರು ಇದ್ದರು.