ಕುಶಾಲನಗರ, ಜ. ೭: ಶಾಸಕ ಡಾ.ಮಂತÀರ್‌ಗೌಡ ಸುಂದರನಗರ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರ ಅಹವಾಲು ಆಲಿಸಿದರು. ಗ್ರಾಮದ ಬಹು ಮುಖ್ಯ ಬೇಡಿಕೆಯಾದ ಸ್ಮಶಾನ ಜಾಗದ ದಾಖಲೆಯನ್ನು ಸರಿಪಡಿಸಬೇಕು.

ಕೂಡ್ಲೂರಿನಿಂದ ಸುಂದರ ನಗರದ ವರೆಗಿನ ಕೈಗಾರಿಕಾ ಬಡಾವಣೆಯ ಮೂಲ ಪುರುಷ ಮಾಜಿ ಮುಖ್ಯಮಂತ್ರಿ ದಿ. ಆರ್.ಗುಂಡೂರಾವ್ ಅವರ ಹೆಸರನ್ನು ಚಿರಸ್ಥಾಯಿಗೊಳಿಸಲು ಹಾರಂಗಿ ರಸ್ತೆಯ ಸುಂದರನಗರದ ವೃತ್ತದಲ್ಲಿ ಮಾಜಿ ಮುಖ್ಯಮಂತ್ರಿ ದಿ. ಗುಂಡೂರಾವ್ ಅವರ ಸ್ವಾಗತ ಕಮಾನು ಹಾಗೂ ಅವರ ಪ್ರತಿಮೆ ನಿರ್ಮಾಣದ ಬಗ್ಗೆ ಗ್ರಾಮಸ್ಥರು ಕೋರಿಕೆ ಇಟ್ಟರು.

ಸುಂದರನಗರಕ್ಕೆ ರಸ್ತೆ, ಚರಂಡಿ ಸೇರಿದಂತೆ ಮೂಲ ಸೌಕರ್ಯಗಳ ಬಗ್ಗೆ, ಸಿ.ಎನ್.ಡಿ ಲ್ಯಾಂಡ್ ಸಮಸ್ಯೆ, ಗ್ರಾಮಕ್ಕೆ ಅಂಬೇಡ್ಕರ್ ಭವನ ನಿರ್ಮಾಣ, ಗಣಪತಿ ಪ್ರತಿಷ್ಠಾಪನೆಗೆ ಸೂಕ್ತ ಸ್ಥಳಾವಕಾಶ ಹಾಗೂ ಗ್ರಾಮಸ್ಥರ ಬಳಕೆಗೆ ಸಮುದಾಯ ಭವನ ನಿರ್ಮಾಣ ಸೇರಿದಂತೆ ಹತ್ತು ಹಲವು ಬೇಡಿಕೆಗಳ ಬಗ್ಗೆ ಗ್ರಾಮಸ್ಥರು ಶಾಸಕರಲ್ಲಿ ಮನವಿ ಮಾಡಿದರು. ಬಹಳಷ್ಟು ವರ್ಷಗಳಿಂದ ಬಾಡಿಗೆ ಮನೆಯಲ್ಲಿ ವಾಸವಿರುವ ನಿವೇಶನ ರಹಿತರಿಗೆ ಮನೆ ನೀಡುವುದು ಸೇರಿದಂತೆ ಮತ್ತಷ್ಟು ಸಮಸ್ಯೆಗಳ ಬಗ್ಗೆ ಶಾಸಕರ ಗಮನಕ್ಕೆ ತರಲಾಯಿತು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಶಾಸಕರು, ಸಂಬAಧಿಸಿದ ಅಧಿಕಾರಿಗಳಿಗೆ ಕ್ರಮ ಕೈಗೊಳ್ಳಲು ಸೂಚಿಸುವುದರೊಂದಿಗೆ ಸ್ಮಶಾನ ಜಾಗವನ್ನು ಮೀಸಲಿರಿಸಲು ಅಧಿಕಾರಿಗಳಿಗೆ ಸೂಚನೆ ನೀಡುವ ಮೂಲಕ ಗ್ರಾಮಸ್ಥರಿಗೆ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಕುಶಾಲನಗರ ತಾಲೂಕು ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷರಾದ ವಿ.ಪಿ.ಶಶಿಧರ್, ಕುಶಾಲನಗರ ಕಂದಾಯ ಅಧಿಕಾರಿ ಸಂತೋಷ್ ಕುಮಾರ್, ಕೂಡುಮಂಗಳೂರು ಪಂಚಾಯಿತಿ ಪಿಡಿಒ ಸಂತೋಷ್, ಸದಸ್ಯ ಷಂಶುದ್ದೀನ್, ಹಾಗೂ ಕೆ.ಐ.ಎ.ಡಿ.ಬಿ ಅಧಿಕಾರಿಗಳು ಇದ್ದರು. ಗ್ರಾಮದ ಮುಖಂಡರಾದ ಕಾರ್ತಿಕ್, ತಂಬಿ, ರಫೀಕ್, ಎಸ್.ಎ.ಹರೀಶ್, ಸಂತೋಷ್, ಮಂಜುಕುಟ್ಟಿ, ರವಿ, ಅಭಿಷೇಕ್ ಸೇರಿದಂತೆ ಇನ್ನಿತರ ಪ್ರಮುಖರು ಹಾಗೂ ಗ್ರಾಮಸ್ಥರು ಇದ್ದರು.