ಸಿದ್ದಾಪುರ, ಜ. ೭: ವಿದ್ಯುತ್ ಕಂಬದಲ್ಲಿ ಬಿರುಕು ಕಾಣಿಸಿಕೊಂಡಿದ್ದರೂ ಕೂಡ ಸೆಸ್ಕ್ ಇಲಾಖೆ ನಿರ್ಲಕ್ಷö್ಯ ತೋರುವ ಮೂಲಕ ಅಪಾಯಕ್ಕೆ ಎಡೆಮಾಡಿರುವ ದೃಶ್ಯ ವಾಲ್ನೂರು-ತ್ಯಾಗತ್ತೂರು ಗ್ರಾ.ಪಂ. ವ್ಯಾಪ್ತಿಯ ಬಾಳೆಗುಂಡಿ ಗಿರಿಜನ ಕಾಲೋನಿಯಲ್ಲಿ ಕಂಡುಬAದಿದೆ.
ಗಿರಿಜನ ಕಾಲೋನಿಗೆ ತೆರಳುವ ಅರಣ್ಯದ ಮಧ್ಯೆಯ ಮುಖ್ಯ ರಸ್ತೆಯಲ್ಲಿ ವಿದ್ಯುತ್ ಕಂಬವು ಬಿರುಕು ಬಿಟ್ಟಿರುವುದು ಕಂಡುಬAದಿದ್ದು ಸಮೀಪದಲ್ಲೇ ಬೃಹತ್ ಗಾತ್ರದ ಮರ ಇದ್ದು ಗಾಳಿಗೆ ಸಣ್ಣ ಕೊಂಬೆ ವಿದ್ಯುತ್ ತಂತಿಯ ಮೇಲೆ ಬಿದ್ದದೆ ಕಂಬ ಮುರಿದುಬೀಳುವ ಸಾಧ್ಯತೆ ಹೆಚ್ಚಿದೆ.
ಅಪಾಯಕ್ಕೆ ಆಹ್ವಾನ ನೀಡುತ್ತಿರುವ ವಿದ್ಯುತ್ ಕಂಬದಿAದ ಸ್ಥಳೀಯ ನಿವಾಸಿಗಳ ಹಾಗೂ ಕಾಡು ಪ್ರಾಣಿಗಳ ಪ್ರಾಣಕ್ಕೆ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ. ಸೆಸ್ಕ್ ಸಿಬ್ಬಂದಿಗಳು ಎಚ್ಚೆತ್ತುಕೊಂಡು ವಿದ್ಯುತ್ ಕಂಬವನ್ನು ದುರಸ್ತಿಪಡಿಸಬೇಕೆಂಬುದು ಸ್ಥಳೀಯರ ಒತ್ತಾಯವಾಗಿದೆ.