ವೀರಾಜಪೇಟೆ, ಜ. ೭: ಇಲ್ಲಿನ ಅಂಬೇಡ್ಕರ್ ಭವನ ಸಭಾಂಗಣದಲ್ಲಿ ವೀರಾಜಪೇಟೆ ತಾಲೂಕು ಸರಕಾರಿ ನೌಕರರ ಸಂಘದ ಮಹಾಸಭೆ ಹಾಗೂ ಸನ್ಮಾನ ಸಮಾರಂಭ ನಡೆಯಿತು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಶಾಸಕ ಎ.ಎಸ್. ಪೊನ್ನಣ್ಣ ಅವರು, ಸರಕಾರಿ ನೌಕÀರರ ಸೇವೆ ಸುಲುಭವಾದುದ್ದಲ್ಲ. ಜನರ ಕೆಲಸ ಕಾರ್ಯದಲ್ಲಿ ಜನರ ಟೀಕೆ ಇನ್ನಿತರ ಸಮಸ್ಯೆಗಳ ಒತ್ತಡ ಇದ್ದೆ ಇರುತ್ತದೆ. ಇದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೆ ಉತ್ತಮವಾಗಿ ಕೆಲಸಮಾಡಬೇಕು ಎಂದರು. ಇಲಾಖೆಗಳಲ್ಲಿ ಎಲ್ಲವನ್ನೂ ಅರಿತುಕೊಂಡು ನಿಭಾಯಿಸಿಕೊಂಡು ಹೋಗಬೇಕು ಎಂದರು. ಸಮಾರಂಭದಲ್ಲಿ ಶಾಸಕ ಪೊನ್ನಣ್ಣ ಹಾಗೂ ವಿಧಾನ ಪರಿಷತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ, ವಿವಿಧ ಇಲಾಖೆಗಳಲ್ಲಿ ಉತ್ತಮ ಸಾಧನೆ ಮಾಡಿದ ಸಾಧಕ ನೌಕರರನ್ನು ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಿದರು.

ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿದ್ದ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಧರ್ಮಜ ಉತ್ತಪ್ಪ ಸಭೆಯನ್ನು ಉದೇಶಿಸಿ ಮಾತನಾಡಿದರು, ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಕೆ.ಎಂ. ತಿಮ್ಮಯ್ಯ ವಹಿಸಿದ್ದರು.

ಇದೇ ಸಂದರ್ಭ ವೀರಾಜಪೇಟೆ ಸರ್ವೆ ಇಲಾಖೆಯ ನಿರ್ದೇಶಕ ಬಾನಂಗಡ ಅರುಣ ತಮ್ಮ ಪ್ಲಾಂಟೇಶನ್ ಜಾಗದಲ್ಲಿ ಸರಕಾರಿ ನೌಕರರು ಮತ್ತು ಸ್ಥಳಿಯರಿಗೆ ಸಹ ಮನೆ ನಿರ್ಮಾಣಕ್ಕೆ ಅಗತ್ಯವಾದ ೭-೧೦ ಸೆಂಟ್ ಜಾಗ ಪರಿವರ್ತನೆಗೆ ಕಾನೂನು ತೊಡಕಾಗಿದೆ. ಈ ಕುರಿತು ಬರುವ ಅರ್ಜಿಗಳನ್ನು ಪರಿಗಣಿಸಲು ಸಾಧ್ಯವಾಗದಿರುವ ಸಮಸ್ಯೆ ಬಗ್ಗೆ ಸಭೆಯಲ್ಲಿ ವಿವರಿಸಿದರು.

ಸಂಘದ ಖಜಾಂಚಿ ಎನ್.ಎಸ್. ಬಸವರಾಜು ೨೦೨೪-೨೫ನೇ ಸಾಲಿನ ಲೆಕ್ಕ ಪತ್ರವನ್ನು ಮಂಡಿಸಿದರು. ಕಾರ್ಯದರ್ಶಿ ಬಿ.ಟಿ. ದೇವರಾಜ್ ಸಂಘದ ವತಿಯಿಂದ ಶಾಸಕರಿಗೆ ಮನವಿ ಸಲ್ಲಿಸಿದರು. ವೇದಿಕೆಯಲ್ಲಿ ರಾಜ್ಯ ಪರಿಷತ್ ಸದಸ್ಯ ಸುರೇಂದ್ರ ಮತ್ತು ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಶಿಕ್ಷಕಿಯರಾದ ಡಿ. ಚಂದನ ಮತ್ತು ಸಿ.ಸಿ. ಭಾರತಿ ಕಾರ್ಯಕ್ರಮ ನಿರೂಪಿಸಿದರು.