ಶ್ರೀಮAಗಲ, ಜ. ೧೦: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸುದೀರ್ಘ ಅವಧಿಗೆ ಮುಖ್ಯಮಂತ್ರಿಯಾಗಿ ದಾಖಲೆ ಬರೆದ ಹಿನ್ನೆಲೆ ಟಿ. ಶೆಟ್ಟಿಗೇರಿ ವಲಯ ಕಾಂಗ್ರೆಸ್ ವತಿಯಿಂದ ಟಿ. ಶೆಟ್ಟಿಗೇರಿ ಪಟ್ಟಣದಲ್ಲಿ ಸಂಭ್ರಮಾಚರಣೆ ನಡೆಯಿತು. ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಜಯಘೋಷ ಕೂಗಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಈ ಸಂದರ್ಭ ಟಿ. ಶೆಟ್ಟಿಗೇರಿ ವಲಯ ಕಾಂಗ್ರೆಸ್ ಅಧ್ಯಕ್ಷ ತೀತಿರ ಪ್ರಭು, ಕಾಂಗ್ರೆಸ್ ಹಿರಿಯ ಮುಖಂಡ ಅಪ್ಪಚ್ಚಂಗಡ ಮೋಟಯ್ಯ, ಗ್ರಾಮ ಪಂಚಾಯತಿ ಮಾಜಿ ಸದಸ್ಯ ಚೊಟ್ಟೆಯಾಂಡಮಾಡ ಉದಯ, ಆಂಡಮಾಡ ಧನು, ಲವ, ಮಚ್ಚಮಾಡ ಅಪ್ಪಣ್ಣ, ಆಲೇಮಾಡ ಸೋಮಣ್ಣ, ಚೊಟ್ಟೆಯಾಂಡಮಾಡ ದೀಪು, ಉದಯ, ಕಿರಣ, ಅನಿಲ, ಕಾಳಿಮಾಡ ಕಿರಣ, ಬಲ್ಯಮೀದೇರಿರ ಚೋಮಣಿ, ಮತ್ತಿತರರು ಇದ್ದರು.