ಸೋಮವಾರಪೇಟೆ, ಜ. ೧೦: ತಾಲೂಕಿನ ಸೋಮವಾರಪೇಟೆ ವಲಯ, ಹುದುಗೂರು ಶಾಖೆಯ ಯಡವನಾಡು ಮೀಸಲು ಅರಣ್ಯದ ಕಾಜೂರು ಗಸ್ತಿನಲ್ಲಿ ಅಕ್ರಮವಾಗಿ ತೇಗದ ಮರಗಳನ್ನು ಕಳ್ಳತನ ಮಾಡಿರುವುದು ಹಾಗೂ ಮಾದಾಪುರ ಶಾಖೆ ವ್ಯಾಪ್ತಿಯ ಮಾದಾಪುರ ಗ್ರಾಮದಲ್ಲಿ ಅರಣ್ಯ ಇಲಾಖೆಗೆ ಸೇರಿದ ಜಾಗದಲ್ಲಿ ಬೆಳೆದಿದ್ದ ಬೆಲೆಬಾಳುವ ಮರಗಳನ್ನು ಅಕ್ರಮವಾಗಿ ಕಡಿತಲೆ ಮಾಡಿರುವ ಪ್ರಕರಣಗಳ ಬಗ್ಗೆ ಉನ್ನತಮಟ್ಟದ ತನಿಖೆ ನಡೆಸಲು ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲಾಗಿದೆ.

ರಾಜ್ಯ ಸರ್ಕಾರದ ಅರಣ್ಯ ವನ್ಯಜೀವಿ ಶಾಸ್ತç ಮತ್ತು ಪರಿಸರ ಇಲಾಖಾ ಸಚಿವ ಈಶ್ವರ್ ಬಿ. ಖಂಡ್ರೆ ಅವರ ಸೂಚನೆಯ ಮೇರೆಗೆ ಕೊಡಗು ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ಸೋನಾಲ್ ವೃಷ್ಣಿ ಅವರು ವಿಶೇಷ ತನಿಖಾ ತಂಡ ರಚನೆ ಮಾಡಿ ಆದೇಶ ಹೊರಡಿಸಿದ್ದಾರೆ.

ಮಡಿಕೇರಿ ಅರಣ್ಯ ಸಂಚಾರಿ ದಳದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎ.ನೆಹರು, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ವಿ. ಗಾನಶ್ರೀ, ನಾಗರಹೊಳೆ ವನ್ಯಜೀವಿ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜೆ. ಅನನ್ಯಕುಮಾರ್, ಮಡಿಕೇರಿ ಅರಣ್ಯ ಸಂಚಾರಿ ದಳದ ವಲಯ ಅರಣ್ಯಾಧಿಕಾರಿ ಕೆ. ಕೊಟ್ರೇಶ್, ಇಲವಾಲ ಅರಣ್ಯ ತರಬೇತಿ ಕೇಂದ್ರದ ವಲಯ ಅರಣ್ಯಾಧಿಕಾರಿ ವಿ. ಮುನಿರಾಜು, ಬೆಂಗಳೂರು ಕ್ರೆöÊಂ ಸೆಲ್‌ನ ಮೋಜಣಿದಾರ ಹಾಗೂ ಉಪವಲಯ ಅರಣ್ಯಾಧಿಕಾರಿ ಅಶ್ವಿನ್ ಚಿದಾನಂದ ಸಿದ್ಧರಾಜು ಅವರುಗಳ ನೇತೃತ್ವದಲ್ಲಿ ಉಪ ವಲಯ ಅರಣ್ಯಾಧಿಕಾರಿಗಳಾದ ಮಂಜುನಾಥ್ ಬಸವರಾಜ ಕಾರಜನಗಿ, ವೈ.ಕೆ. ಜಗದೀಶ್, ಎಂ.ಸಿ. ಹಾಲೇಶ್, ಆರ್. ಶ್ರೀನಿವಾಸ್, ರವಿಚಂದ್ರ ಪಕೀರಪ್ಪ, ರಿಷಾ ಪಾರ್ವತಿ, ಸಮೀರ್ ಅಹಮ್ಮದ್ ಅವರುಗಳನ್ನು ನೇಮಿಸಲಾಗಿದೆ.

ಏನಿದು ಪ್ರಕರಣ? : ಸೋಮವಾರಪೇಟೆ ವಲಯ, ಹುದುಗೂರು ಶಾಖೆಯ ಯಡವನಾಡು ಮೀಸಲು ಅರಣ್ಯದ ಕಾಜೂರು ಗಸ್ತಿಗೆ ಒಳಪಡುವ ಅರಣ್ಯ ಪ್ರದೇಶದಲ್ಲಿ ಬೆಳೆಯಲಾಗಿರುವ ಸುಮಾರು ೩೦ಕ್ಕೂ ಅಧಿಕ ತೇಗದ ಮರಗಳು ಕಳ್ಳತನವಾಗಿದ್ದವು.

೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಕಳೆದ ತಿಂಗಳು ಅರಣ್ಯದೊಳಗೆ ಕಳ್ಳರು ೭ ಮರಗಳನ್ನು ಕಡಿದು ಸಾಗಾಟಗೊಳಿಸುತ್ತಿದ್ದ ಸಂದರ್ಭ ಸೋಮವಾರಪೇಟೆ ಅರಣ್ಯ ಇಲಾಖಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ದಾಳಿ ನಡೆಸಿದ್ದರು.

ಈ ಸಂದರ್ಭ ಅಧಿಕಾರಿಗಳ ಮೇಲೆ ಕಳ್ಳರು ದಾಳಿಗೆ ಮುಂದಾದ ಸಂದರ್ಭ ಗಾಳಿಯಲ್ಲಿ ಗುಂಡು ಹಾರಿಸಲಾಗಿತ್ತು. ಅಂತೆಯೇ ಓರ್ವ ಆರೋಪಿಯನ್ನು ಸ್ಥಳದಲ್ಲೇ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖಾಧಿಕಾರಿಗಳು ಯಶಸ್ವಿಯಾಗಿದ್ದರು.

ಈ ಪ್ರಕರಣ ಬೆಳಕಿಗೆ ಬಂದ ನಂತರ ಮತ್ತಷ್ಟು ಮರಗಳ ಕಳ್ಳತನವಾಗಿರುವ ಬಗ್ಗೆ ಸಂಶಯ ಮೂಡಿದ್ದು, ಅರಣ್ಯದೊಳಗೆ ಹುಡುಕಾಟ ನಡೆಸಿದಾಗ ಸುಮಾರು ೩೦ಕ್ಕೂ ಅಧಿಕ ತೇಗದ ಮರಗಳನ್ನು ಕಳ್ಳರು ಕಡಿದು ಸಾಗಿಸಿರುವುದು ಪತ್ತೆಯಾಯಿತು. ಘಟನೆಗೆ ಸಂಬAಧಿಸಿದAತೆ ಒಟ್ಟು ೧೦ ಆರೋಪಿಗಳ ವಿರುದ್ಧ ಮೊಕದ್ದಮೆ ದಾಖಲಿಸಿದ್ದು, ಸದ್ಯ ಬಹುತೇಕ ಆರೋಪಿಗಳು ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡಿದ್ದಾರೆ.

ಈ ನಡುವೆ ವ್ಯವಸ್ಥಿತವಾಗಿ ನಡೆದಿರುವ ಮರ ಕಳ್ಳತನ ಪ್ರಕರಣದಲ್ಲಿ ಇಲಾಖೆಯೊಳಗಿನ ಸಿಬ್ಬಂದಿಗಳ ಕೈವಾಡವಿರುವ ಸಂಶಯವೂ ವ್ಯಕ್ತವಾಗಿದ್ದು, ಆರ್‌ಆರ್‌ಟಿ ಸಿಬ್ಬಂದಿಯೋರ್ವನೂ ಇದರಲ್ಲಿ ಶಾಮೀಲಾಗಿರುವುದು ಕಂಡುಬAತು. ಪ್ರಕರಣದ ತನಿಖೆ ನಡೆಸಿದ ಮಡಿಕೇರಿ ಅರಣ್ಯ ಸಂಚಾರಿ ದಳದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ವಿ. ಗಾನಶ್ರೀ ಅವರು ನೀಡಿದ ವರದಿಯ ಆಧಾರದ ಮೇರೆ, ಕೊಡಗು ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ಸೋನಾಲ್ ವೃಷ್ಣಿ ಅವರು, ಹುದುಗೂರು ವಿಭಾಗದ ಡಿಆರ್‌ಎಫ್‌ಓ ಚಂದ್ರೇಶ್ ಅವರನ್ನು ಅಮಾನತುಗೊಳಿಸಿ ಆದೇಶ ಮಾಡಿದ್ದಾರೆ. ಮತ್ತೊಂದೆಡೆ ಸೋಮವಾರಪೇಟೆ ವಲಯ ಅರಣ್ಯಾಧಿಕಾರಿಗಳ ನೇತೃತ್ವದಲ್ಲಿಯೂ ಪ್ರಕರಣದ ತನಿಖೆ ನಡೆಯುತ್ತಿದ್ದು, ಅರಣ್ಯದಿಂದ ಕಳವುಮಾಡಿ ಅಡಗಿಸಿಟ್ಟಿದ್ದ ತೇಗದ ಮರಗಳನ್ನು ವಶಪಡಿಸಿಕೊಳ್ಳುತ್ತಿದ್ದಾರೆ. ಈ ಮಧ್ಯೆ ರಾಜ್ಯ ಅರಣ್ಯ ಸಚಿವರ ನಿರ್ದೇಶನದಂತೆ ಇಡೀ ಪ್ರಕರಣದ ಆಳ, ಅಗಲ ಅರಿಯಲು ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ. ಇದರೊಂದಿಗೆ ಮಾದಾಪುರದ ಸರ್ವೆ ನಂಬರ್ ೬೦/೧ರಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಮರಗಳ ಕಡಿತಲೆಗೆ ಅನುಮತಿ ಪಡೆದು ಸ.ನಂ.೫೪ರ ಅರಣ್ಯ ಪ್ರದೇಶದಲ್ಲಿ ಬೆಲೆ ಬಾಳುವ ಮರಗಳನ್ನು ಅಕ್ರಮವಾಗಿ ಕಡಿತಲೆ ಮಾಡಲಾಗಿದೆ. ಈ ಎರಡೂ ಪ್ರಕರಣಗಳ ತನಿಖೆಗೆ ತಂಡ ರಚಿಸಲಾಗಿದೆ.

ತಂಡ ರಚಿಸಿ ಅಧಿಕಾರಿ ಆದೇಶ

ಮಡಿಕೇರಿ ಪ್ರಾದೇಶಿಕ ವಿಭಾಗದ ಸೋಮವಾರಪೇಟೆ ವಲಯ ವ್ಯಾಪ್ತಿಯ ಮೀಸಲು ಅರಣ್ಯದಲ್ಲಿ ಅರಣ್ಯ ಭೂಮಿಯಲ್ಲಿನ ಬೆಲೆ ಬಾಳುವ ೩೦ಕ್ಕೂ ಅಧಿಕ ಮರಗಳನ್ನು ಅಕ್ರಮವಾಗಿ ಕಡಿತಲೆ ಮಾಡಿರುವ ಪ್ರಕರಣಕ್ಕೆ ಸಂಬAಧಿಸಿದAತೆ ಈವರೆಗೆ ಕೈಗೊಳ್ಳಲಾಗಿರುವ ಕ್ರಮಗಳು ಹಾಗೂ ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ವರದಿ ಸಲ್ಲಿಸಲು ಸೂಚಿಸಿದ್ದಾರೆ.

ಅದರಂತೆ ಪ್ರಕರಣಕ್ಕೆ ಸಂಬAಧಿಸಿದ ಎಲ್ಲಾ ದಾಖಲಾತಿಗಳನ್ನು ಉಪ ಅರಣ್ಯ ಸಂರಕ್ಷಣಾಧಿಕಾರಿ, ಅರಣ್ಯ ಸಂಚಾರಿ ದಳ, ಮಡಿಕೇರಿ ಇವರಿಗೆ ಹಸ್ತಾಂತರಿಸಲು ತಿಳಿಸಲಾಗಿರುತ್ತದೆ. ಆದುದರಿಂದ ಸದರಿ ಪ್ರಕರಣಕ್ಕೆ ಸಂಬAಧಿಸಿದAತೆ ಸಿ.ಡಿ.ಆರ್. ಮಾಹಿತಿ ಹಾಗೂ ಡಿಜಿಟಲ್ ಮಾಹಿತಿ ಅನುಸಾರ ತನಿಖೆ ಆಗಬೇಕಾಗಿರುವುದರಿಂದ ವಿಶೇಷ ತನಿಖಾ ತಂಡವನ್ನು ರಚಿಸುವುದು ಅವಶ್ಯಕವಾಗಿರುತ್ತದೆ. ಸದರಿ ತನಿಖಾ ತಂಡಕ್ಕೆ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು (ಜಾಗೃತ) ಬೆಂಗಳೂರು ಇವರಿಗೆ ಮೂರು ಸದಸ್ಯರನ್ನು ನಿಯೋಜಿಸುವಂತೆ ಕೋರಲಾಗಿರುತ್ತದೆ. ಆದುದರಿಂದ ಸದರಿ ಪ್ರಕರಣದ ಕುರಿತು ಶೀಘ್ರವಾಗಿ ತನಿಖೆ ನಡೆಸಿ ಕಾನೂನು ರೀತ್ಯಾ ಕ್ರಮ ಜರುಗಿಸಲು ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ. ವಿಶೇಷ ತನಿಖಾ ತಂಡಕ್ಕೆ ನಿಯೋಜಿಸಿರುವ ಎಲ್ಲಾ ಸದಸ್ಯರುಗಳು ಉಪ ಅರಣ್ಯ ಸಂರಕ್ಷಣಾಧಿಕಾರಿ, ಅರಣ್ಯ ಸಂಚಾರಿ ದಳ, ಮಡಿಕೇರಿ ಇವರ ಸಮ್ಮುಖದಲ್ಲಿ ಕೂಡಲೇ ವರದಿ ಮಾಡಿಕೊಳ್ಳಬೇಕೆಂದು ನಿರ್ದೇಶಿಸಲಾಗಿದೆ.