ಸೋಮವಾರಪೇಟೆ, ಜ. ೧೦: ಕಳೆದ ೨೦೧೭ರಲ್ಲಿ ಆರಂಭಗೊAಡು ೨೦೨೦ಕ್ಕೆ ಪೂರ್ಣಗೊಂಡಿರುವ ಹೊಸತೋಟ-ಗರಗಂದೂರು ರಸ್ತೆಗೆ ೨೦೨೫ರ ಮೇ ತಿಂಗಳಲ್ಲಿ ಹಾಕಲಾಗಿದ್ದ ಡಾಂಬರು ಕಳಪೆಯಾದ ಹಿನ್ನೆಲೆ, ಇದೀಗ ನೂತನವಾಗಿ ಡಾಂಬರು ಹಾಕಲಾಗಿದೆ. ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ ಕಾಮಗಾರಿ ಪೂರ್ಣಗೊಂಡ ೫ ವರ್ಷಗಳ ನಂತರ ಗುತ್ತಿಗೆದಾರ ಮರು ಡಾಂಬರೀಕರಣ ಮಾಡುವ ಒಪ್ಪಂದದAತೆ ಕಳೆದ ಮೇ ತಿಂಗಳಲ್ಲಿ ಮರುಡಾಂಬರೀಕರಣ ಮಾಡಲಾಗಿತ್ತು. ಸುಮಾರು ೧ ಕಿ.ಮೀ. ರಸ್ತೆಗೆ ಹಾಕಲಾಗಿದ್ದ ಡಾಂಬರು ಕಳಪೆಯಾದ ಹಿನ್ನೆಲೆ, ಸ್ಥಳೀಯರು ಕೈಯಿಂದಲೇ ರಸ್ತೆಯನ್ನು ಕಿತ್ತು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಬಗ್ಗೆ ಶಾಸಕ ಡಾ. ಮಂತರ್ ಗೌಡ ಅವರು ಸ್ಥಳ ಪರಿಶೀಲನೆ ನಡೆಸಿ, ರಸ್ತೆಗೆ ಹಾಕಿದ್ದ ಡಾಂಬರನ್ನು ಸಂಪೂರ್ಣವಾಗಿ ಕಿತ್ತು ತೆಗೆಯುವಂತೆ ಸೂಚಿಸಿದ್ದರು. ಅದರಂತೆ ಗುತ್ತಿಗೆದಾರರು ಒಂದು ಕಿ.ಮೀ. ರಸ್ತೆಯನ್ನು ಯಂತ್ರದಿAದ ಕಿತ್ತು ತೆಗೆಯಲು ಮುಂದಾದರು. ಈ ಸಂದರ್ಭ ಹಳೆಯ ರಸ್ತೆಗೂ ಹಾನಿಯಾಗುತ್ತಿದ್ದುದರಿಂದ ಸ್ಥಳೀಯರು ಮತ್ತೊಮ್ಮೆ ಶಾಸಕರ ಗಮನಕ್ಕೆ ತಂದರು.

ಶಾಸಕ ಡಾ. ಮಂತರ್ ಗೌಡ ಅವರು, ಡಿಸೆಂಬರ್ ನಂತರ ಮರುಡಾಂಬರೀಕರಣ ಮಾಡಬೇಕು. ಅಲ್ಲಿಯವರೆಗೂ ಗುತ್ತಿಗೆದಾರನಿಗೆ ಅಂತಿಮ ಬಿಲ್ ಪಾವತಿ ಮಾಡಬಾರದು ಎಂದು ಅಭಿಯಂತರರಿಗೆ ಖಡಕ್ ಸೂಚನೆ ನೀಡಿದ್ದರು. ಅದರಂತೆ ಇದೀಗ ಕಾಮಗಾರಿ ಪೂರ್ಣಗೊಂಡಿದ್ದು,೬ ಕಿ.ಮೀ. ರಸ್ತೆ ಯನ್ನು ಮರುಡಾಂಬ ರೀಕರಣ ಮಾಡಲಾಗಿದೆ.