ಶ್ರೀಮಂಗಲ, ಜ. ೧೦: ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಅವರು ಕ್ಷೇತ್ರದ ಪೊನ್ನಂಪೇಟೆ ತಾಲೂಕಿನ ವಿವಿಧ ಭಾಗಗಳಲ್ಲಿ ಭೂಮಿಪೂಜೆ ಹಾಗೂ ಉದ್ಘಾಟನೆ ಕಾರ್ಯಕ್ರಮ ಕೈಗೊಂಡರು.
ಒಟ್ಟು ೧೦.೭೭ ಕೋಟಿ ಅನುದಾನದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆಯೊಂದಿಗೆ ಈ ಅನುದಾನದಲ್ಲಿ ಮುಕ್ತಾಯಗೊಂಡ ಕಾಮಗಾರಿಗಳನ್ನು ಉದ್ಘಾಟಿಸಿದರು.
ಮೈಸೂರು -ಗೋಣಿಕೊಪ್ಪ ಮುಖ್ಯರಸ್ತೆಯ, ಆಯ್ದ ಭಾಗಗಳಲ್ಲಿ ರಸ್ತೆ ಅಭಿವೃದ್ಧಿಗೆ ೩.೮೦ ಕೋಟಿ ವೆಚ್ಚದಲ್ಲಿ ಭೂಮಿ ಪೂಜೆ ನೆರವೇರಿಸಿದರು.ತಿತಿಮತಿ ಸೇತುವೆಯಿಂದ ದೇವರಪುರದವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆಯನ್ನು ತಿತಿಮತಿ ಪಟ್ಟಣ ವ್ಯಾಪ್ತಿಯಲಿ ನೆರವೇರಿಸಿದರು. ಕಾಮಗಾರಿ ಅತಿ ಶೀಘ್ರದಲ್ಲಿ ಗುಣಮಟ್ಟ ಕಾಯ್ದುಕೊಂಡು ಮುಗಿಸಬೇಕು. ಅತ್ಯಂತ ಹೆಚ್ಚು ವಾಹನ ದಟ್ಟಣೆ ಇರುವ ಪ್ರಮುಖ ರಸ್ತೆ ಇದಾಗಿರುವುದರಿಂದ, ಸಾರ್ವಜನಿಕರಿಗೆ ಅನುಕೂಲವಾಗುವಂತೆ ಕಾರ್ಯ ನಿರ್ವಹಿಸಿ ಎಂದು ಸೂಚಿಸಿದರು. ಮೈಸೂರು-ಪೊನ್ನಂಪೇಟೆ ಮುಖ್ಯರಸ್ತೆಯ, ದೇವರಪುರದಿಂದ ಸೀಗೆತೋಡು ಸೇತುವೆ ತನಕ ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ರೂ. ೩.೫೦ ಕೋಟಿ ಅನುದಾನದಲ್ಲಿ, ಸುಮಾರು ೪.೩೪ ಕಿ.ಮೀ ಉದ್ದದ ರಸ್ತೆ ಉದ್ಘಾಟನೆ ಶಾಸಕರು ಮಾಡಿದರು. ಗೋಣಿಕೊಪ್ಪ-ಪೊನ್ನಂಪೇಟೆ ಮುಖ್ಯ ರಸ್ತೆಯ, ಬಾಳಾಜಿಯಿಂದ ಜೋಡುಬೀಟಿ (ಮಾಯಮುಡಿ-ಬಾಳಾಜಿ-ಜೋಡುಬೀಟಿ -ಕುಂದ) ಭಾಗದಲ್ಲಿ ರೂ. ೧ ಕೋಟಿ ಅನುದಾನದಲ್ಲಿ, ರಸ್ತೆ ಅಗಲೀಕರಣ ಹಾಗೂ ಮರು ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಿದರು. ಈ ಕಾಮಗಾರಿಗೆ ಭೂಮಿ ಪೂಜೆಯನ್ನು ಜೋಡುಬೀಟಿ ಭಾಗದಲ್ಲಿ ನಡೆಸಿದರು. ಹುದಿಕೇರಿಯಲ್ಲಿ ಶಾಸಕರು, ೫ ಲಕ್ಷಗಳ ಅನುದಾನದಲ್ಲಿ ನಿರ್ಮಾಣಗೊಂಡ ಹುದಿಕೇರಿ-ಕಳತ್ತೋಡು ನೂತನ ರಸ್ತೆಯನ್ನು ಲೋಕಾರ್ಪಣೆಗೊಳಿಸಿದರು. ಬಳಿಕ ಹುದಿಕೇರಿಯ ಮುಕ್ಕಾಟಿಮಾನಿಯಲ್ಲಿ ಶಾಸಕರ ವಿಶೇಷ ಕಾಳಜಿಯಿಂದ ೪೨ ಲಕ್ಷ ಅನುದಾನದಲ್ಲಿ ನೂತನವಾಗಿ ನಿರ್ಮಾಣಗೊಂಡ ೧೧ ಕೆವಿ ವಿದ್ಯುತ್ ಮಾರ್ಗಕ್ಕೆ ಚಾಲನೆ ನೀಡಿದರು.
ಬಳಿಕ ಮಡಿಕೇರಿ-ಕುಟ್ಟ ರಸ್ತೆಯ ಹುದಿಕೇರಿ ಬಳಿ ಪೊಕಳತೋಡು ಭಾಗದಲ್ಲಿರುವ ಸೇತುವೆಯ ಮರು ನಿರ್ಮಾಣಕ್ಕಾಗಿ ೨ ಕೋಟಿ ಅನುದಾನವನ್ನು ಶಾಸಕರು ಒದಗಿಸಿದ್ದು, ಈ ಕಾಮಗಾರಿಗೆ ಭೂಮಿ ಪೂಜೆಯನ್ನು ಪೂಕಳತೋಡು ಬಳಿ ನೆರವೇರಿಸಿದರು.
ಈ ಸಂದರ್ಭ ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಚೆಪ್ಪುಡಿರ ಅರುಣ್ ಮಾಚಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೇರಿರ ನವೀನ್, ತಾಲೂಕು ಪ್ರಚಾರ ಸಮಿತಿಯ ಅಧ್ಯಕ್ಷÀ ಟಾಟು ಮೊಣ್ಣಪ್ಪ, ವಲಯ ಅಧ್ಯಕ್ಷ ನವೀನ್, ದೇವರಪುರ ವಲಯ ಅಧ್ಯಕ್ಷ ಬಸಂತ್, ಹುದಿಕೇರಿ ವಲಯ ಅಧ್ಯಕ್ಷ ಚಂಗುಲAಡ ಸೂರಜ್, ಬೆನ್ನಿ, ಅಣ್ಣಳಮಾಡ ಹರೀಶ್, ಡಾ ಮಧ್ಯಸ್ತಾ, ಮಣಿಕಂಠ, ಪಿ.ಸಿ. ರಾಮು, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಪಂಕಜ, ರಜನಿ, ಪ್ರಮುಖರಾದ ಪುಷ್ಪ, ರವಿನಾ, ಸತೀಶ್, ಕಳ್ಳಿಚಂಡ ಸುರೇಶ್, ಗ್ರಾಮ ಪಂಚಾಯಿತಿ ಸದಸ್ಯ ಚುಬ್ರು, ನವೀನ್, ಚೆಕ್ಕೇರ ವಾಸು ಕುಟ್ಟಪ್ಪ, ಮನೋಹರ್, ರಮೇಶ್, ರಿಕ್ಷಿತ್ ಕಾರ್ಯಪ್ಪ, ಅಜ್ಜಿಕುಟ್ಟಿರ ಪಮು, ಅಜ್ಜಿಕುಟ್ಟಿರ ಗಿರೀಶ್, ಮಂದಣ್ಣ, ಅಜ್ಜಿಕುಟ್ಟಿರ ಪೊನ್ನು, ಚೆಕ್ಕೇರ ಸುಧೀರ್, ಅಪ್ಪಚಂಗಡ ಮೋಟಯ್ಯ, ದಿಲು, ಚೊಟ್ಟೆಯಂಡಮಾಡ ವಿಶು, ಉದಯ, ಮಧು ತಮ್ಮಯ್ಯ, ಕರುಂಬಯ್ಯ, ಕಿರಿಯಮಾಡ ಗಣೇಶ್, ಹಾಗೂ ಪಕ್ಷದ ಮುಖಂಡರು, ಪ್ರಮುಖರು ಉಪಸ್ಥಿತರಿದ್ದರು.