ಕುಶಾಲನಗರ, ಜ. ೧೦: ದ್ವಿಚಕ್ರ ಮಾರಾಟ ಅಂ ಗಡಿ ಮುಂಭಾಗ ನಿಲ್ಲಿಸಿದ್ದ ಬೈಕ್ ಅಪಹರಿಸಿ ನಂತರ ಅದೇ ಸ್ಥಳದಲ್ಲಿ ವಾಪಸ್ ಬಿಟ್ಟುಹೋದ ಪ್ರಕರಣ ಕುಶಾಲನಗರ ದಂಡಿನಪೇಟೆ ಬಳಿ ನಡೆದಿದೆ. ಶುಕ್ರವಾರ ಬೆಳಗ್ಗಿನ ವೇಳೆ ಕುಶಾಲನಗರ ದಂಡಿನಪೇಟೆಯ ಮೂವರು ಯುವಕರು ಗಾಂಜಾ ನಿಲ್ಲಿಸಿದ್ದ ಬೈಕ್ ಅನ್ನು ನಕಲಿ ಕಿ ಬಳಸಿ ಸ್ಟಾರ್ಟ್ ಮಾಡಿ ಸ್ವಲ್ಪಕಾಲ ಸುತ್ತಾಡಿ ನಂತರ ವಾಪಸ್ ಅದೇ ಸ್ಥಳದಲ್ಲಿ ಬಿಟ್ಟು ಹೋದ ಪ್ರಕರಣ ಇದಾಗಿದೆ. ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಶಶಿ ಎಂಬವರಿಗೆ ಸೇರಿದ ಬೈಕ್ (ಏಂ ೨೬ಊ೭೯೫೨) ಇದಾಗಿತ್ತು. ಬೈಕ್ ಒಯ್ದ ಸಂದರ್ಭ ಸ್ಥಳೀಯ ಕೆಲವು ವ್ಯಕ್ತಿಗಳು ಕಂಡು ಅಂಗಡಿ ಮಾಲೀಕರಿಗೆ ತಿಳಿಸಿದ ವೇಳೆ ಸ್ಥಳೀಯ ಸಂಚಾರಿ ಪೊಲೀಸರಿಗೆ ಮಾಹಿತಿ ನೀಡಿ ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಹುಡುಕಾಟದಲ್ಲಿ ತೊಡಗಿದ್ದಾರೆ. ಸ್ವಲ್ಪ ಕಾಲ ನಂತರ ಬೈಕ್ ತಂದು ನಿಲ್ಲಿಸಿ ಪರಾರಿಯಾಗಿದ್ದಾರೆ. ಆರೋಪಿಗಳ ಪತ್ತೆಯಾಗಿದ್ದು ಕುಶಾಲನಗರ ಸಂಚಾರಿ ಪೊಲೀಸರು ವಿಚಾರಣೆಗೆ ಒಳಪಡಿಸಿ ತನಿಖೆ ಕೈಗೊಂಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಕುಶಾಲನಗರ ಪಟ್ಟಣ ವ್ಯಾಪ್ತಿಯಲ್ಲಿ ನಿಲ್ಲಿಸಿದ್ದ ಬೈಕ್‌ಗಳು ಮತ್ತು ಅದರಲ್ಲಿ ಇಟ್ಟು ಹೋಗಿರುವ ಹೆಲ್ಮೆಟ್‌ಗಳನ್ನು ಕಳವು ಮಾಡಿ ಅಪರಾಧ ಎಸಗುವ ಪ್ರಕರಣಗಳು ಅಧಿಕಗೊಳ್ಳುತ್ತಿವೆ ಎಂದು ದ್ವಿಚಕ್ರ ವಾಹನ ಸವಾರರು ದೂರಿದ್ದಾರೆ.