ಮಡಿಕೇರಿ. ಜ. ೧೦: ಸಮಾಜದಲ್ಲಿ ನಾವು ಸನ್ಮಾರ್ಗದಲ್ಲಿ ಬಾಳುವುದರೊಂದಿಗೆ ಇತರರು ಉತ್ತಮ ರೀತಿಯಲ್ಲಿ ಬಾಳಲು ಅವಕಾಶ ಮಾಡಿಕೊಡಬೇಕು ಎಂದು ಹೊನ್ನಾವರ ಶ್ರೀ ದೈವಜ್ಞ ಬ್ರಾಹ್ಮಣ ಸಭಾ ಪೀಠಾಧಿಪತಿಗಳಾದ ಶ್ರೀ ಸಚ್ಚಿದಾನಂದ ಭಾರತಿ ಮಹಾಸ್ವಾಮಿಗಳು ಕರೆ ನೀಡಿದರು.

ಮಡಿಕೇರಿ ಶ್ರೀ ಚೌಡೇಶ್ವರಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ದೈವಜ್ಞ ದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸರಸ್ವತಿ ನದಿ ತಟದಲ್ಲಿ ದೈವಿಕ ಕಾರ್ಯಕ್ರಮದೊಂದಿಗೆ ಬದುಕು ಕಟ್ಟಿಕೊಂಡಿದ್ದ ನಮ್ಮ ಹಿರಿಯರು ಕಾಲಚಕ್ರ ಉರುಳಿದಂತೆ ಭಗವಂತನ ದಯೆಯಿಂದ ಭಾರತದ ವಿವಿಧೆಡೆ ನೆಲೆಸುತ್ತಾ ಚಿನ್ನಾಭರಣ ತಯಾರಿಸುವ ಕಾಯಕದೊಂದಿಗೆ ಜೀವನೋಪಾಯ ಕಂಡುಕೊAಡ ಪರಂಪರೆಯಾಗಿದೆ. ಈ ದಿಸೆಯಲ್ಲಿ ಎಲ್ಲ ಕಾಲಕ್ಕೂ ನಮ್ಮ ಹಿರಿಯರಿಗೆ ಗೌರವ ಹಾಗೂ ಕೃತಜ್ಞತೆಯಿಂದ ಬಾಳೋಣ ಎಂದು ಒತ್ತಿಹೇಳಿದ ಸ್ವಾಮೀಜಿ, ಜಾತಿ, ಮತ, ಪಂಥ, ಪಂಗಡದ ಭೇದವಿಲ್ಲದೆ ಎಲ್ಲರೂ ಸನ್ಮಾರ್ಗದಲ್ಲಿ ಸಾಗಿ ಸತ್ಪçಜೆಗಳಾಗಿ ಬಾಳುವಂತೆ ಮಾದರಿಯಾಗಿರೋಣ ಎಂದರು. ನಗರದ ಶ್ರೀ ಓಂಕಾರೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಭಕ್ತರೊಡನೆ ಕಳೆಯಲು ಸಾಧ್ಯ ಆಗಿದ್ದು ಮನಸ್ಸಿಗೆ ಅತೀವ ಆನಂದಗೊAಡಿದೆ ಎಂದರು.

ಮಡಿಕೇರಿ ಭೇಟಿ ಬಹು ವರ್ಷಗಳ ಬಳಿಕ ಸಾಧ್ಯ ಆಗಿದ್ದು, ದೈವಜ್ಞ ದರ್ಶನ ಕಾರ್ಯಕ್ರಮ ಅತೀವ ಸಂತಸ ತಂದಿದೆ ಎಂದು ಶ್ರೀ ಮಠದ ಕಿರಿಯ ಶ್ರೀ ಸುಜ್ಞಾನೇಶ್ವರ ಭಾರತಿ ಸ್ವಾಮೀಜಿ ನುಡಿದರು. ಮಠದ ಪ್ರತಿನಿಧಿಗಳಾದ ಗರುಡಾಚಾರ್ ಯೋಗೇಶ್ ಭಟ್ ಉಲ್ಲಾಸ್ ಮೊದಲಾದವರು ಗುರು ವಂದನಿಯ ನುಡಿಗಳನ್ನಾಡಿದರು.