ಐಗೂರು, ಜ. ೧೧: ಕರ್ನಾಟಕ ಅರಣ್ಯ ಇಲಾಖೆ, ಮಡಿಕೇರಿ ಪ್ರಾದೇಶಿಕ ವಿಭಾಗದ ವತಿಯಿಂದ ವಿದ್ಯಾರ್ಥಿಗಳಿಗಾಗಿ ಅರಣ್ಯ ಮತ್ತು ಪರಿಸರ ಉಳಿಸುವ ಕಾರ್ಯಕ್ರಮದನ್ವಯ ಚಿಣ್ಣರ ವನದರ್ಶನದ ಎರಡು ದಿನಗಳ ಪ್ರವಾಸ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಕಾಜೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ೪೦ ವಿದ್ಯಾರ್ಥಿಗಳು ಮತ್ತು ಅಧ್ಯಾಪಕ ವೃಂದದವರು ಅರಣ್ಯ ಕ್ಷೇತ್ರಕ್ಕೆ ಸಂಬAಧಪಟ್ಟ ಹುದುಗೂರಿನ ಸಸ್ಯ ಕ್ಷೇತ್ರ, ಕುಶಾಲನಗರದ ಕಾವೇರಿ ನಿಸರ್ಗಧಾಮ, ಅರಣ್ಯ ಇಲಾಖೆಯ ನಾಟ ಸಂಗ್ರಹ ಕೇಂದ್ರ ಮತ್ತು ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನವನ ವೀಕ್ಷಿಸಿದರು. ಅರಣ್ಯ ರಕ್ಷಿಸುವ ಬಗ್ಗೆ ತಂಡದ ಉಸ್ತುವಾರಿ ವಹಿಸಿದ್ದ ಮಾದಾಪುರ ಉಪವಲಯಾರಣ್ಯಾಧಿಕಾರಿ ಉಲ್ಲಾಸ್, ಗಸ್ತು ಪಡೆಯ ಚಂದ್ರಶೇಖರ್, ಅರಣ್ಯ ವೀಕ್ಷಕ ಅಂತೋಣಿ ಅವರು ಮಾಹಿತಿ ನೀಡಿದರು. ನಂತರ ನಾಗರಹೊಳೆಗೆ ತಲುಪಿದ ಪ್ರವಾಸಿ ತಂಡ ನಾಗರಹೊಳೆಯ ಚರಿತ್ರೆಗಳನ್ನು ತಿಳಿದ ನಂತರ ಅಲ್ಲಿಯ ಅಭಯಾರಣ್ಯಕ್ಕೆ ಸಫಾರಿ ಮೂಲಕ ಪ್ರಯಾಣಿಸಿ ಪ್ರಾಣಿ-ಪಕ್ಷಿಗಳ ವಿಹಂಗಮ ನೋಟವನ್ನು ಕಣ್ತುಂಬಿಕೊAಡರು. ಇರ್ಪು ಜಲಪಾತ, ಮತ್ತಿಗೋಡು ಸಾಕಾನೆ ಶಿಬಿರ ವೀಕ್ಷಿಸಿ ಪರಿಸರದ ಅನುಭವಗಳನ್ನು ಪಡೆದುಕೊಂಡರು.

ವಿದ್ಯಾರ್ಥಿಗಳಿಗೆ ಎರಡು ದಿನಗಳ ಕಾಲದ ಉಚಿತ ಸಾರಿಗೆ, ಊಟ, ತಿಂಡಿ ವ್ಯವಸ್ಥೆ, ಉಚಿತ ಬ್ಯಾಗ್, ಕ್ಯಾಪ್ ಮತ್ತು ಅಭಿನಂದನಾ ಪತ್ರಗಳನ್ನು ಇಲಾಖಾ ವತಿಯಿಂದ ನೀಡಲಾಯಿತು.