ಕೂಡಿಗೆ, ಜ. ೧೧: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಂದರನಗರ ಗ್ರಾಮದಲ್ಲಿರುವ ಗಣಪತಿ ದೇವಾಲಯದ ಜಾಗದಲ್ಲಿರುವ ಬೇಲಿಯನ್ನು ಕಳೆದ ಎರಡು ದಿನಗಳ ಹಿಂದೆ ಕುಶಾಲನಗರ ಅರಣ್ಯ ಇಲಾಖೆಯ ವತಿಯಿಂದ ತೆರವುಗೊಳಿಸಲು ಪ್ರಯತ್ನಿಸಿದ ಪ್ರಕರಣಕ್ಕೆ ಸಂಬAಧಿಸಿದAತೆ ಸುಂದರನಗರ ಗ್ರಾಮಕ್ಕೆ ಮಾಜಿ ಶಾಸಕ ಅಪ್ಪಚ್ಚು ರಂಜನ್, ಮತ್ತು ಗ್ರಾಮ ಪಂಚಾಯಿತಿ ಅಧ್ಯಕ್ಷ, ಸದಸ್ಯರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಗ್ರಾಮಸ್ಥರಿಂದ ಸಿ.ಎನ್. ಡಿ. ಲ್ಯಾಂಡ್, ಮತ್ತು ಡೀಮ್ಡ್ ಫಾರೆಸ್ಟ್ ಮತ್ತು ಊರುಡುಗೆ ಭೂಮಿಗೆ ಸಂಬAಧಿಸಿದ ಸಂಪೂರ್ಣ ಮಾಹಿತಿ ಪಡೆದರು.
ಸುಂದರನಗರ ಗ್ರಾಮದ ೮೦ ಕುಟುಂಬ ಮನೆಗೆ ಸಂಬAಧಿಸಿದ ತಡೆಗೋಡೆ, ಅಲ್ಲದೆ ಇತರೆ ಹೊಸ ಕೆಲವುಗಳನ್ನು ಕೈಗೊಳ್ಳಲು ಅರಣ್ಯ ಇಲಾಖೆಯ ವತಿಯಿಂದ ಅಡೆತಡೆಯಿಂದಾಗಿ ಈ ೮೦. ಕುಟುಂಬದವರು ಅತಂತ್ರ ಸ್ಥಿತಿಯಲ್ಲಿರುವುದು ಕಂಡುಬರುತ್ತದೆ. ಕುಶಾಲನಗರ ಅರಣ್ಯ ಇಲಾಖೆಯ ವ್ಯಾಪ್ತಿಗೆ ಒಳಪಡುವ ಸುಂದರನಗರ ಗ್ರಾಮವು ಡೀಮ್ಡ್ ಫಾರೆಸ್ವ್ ಎಂದು ಅರಣ್ಯ ಇಲಾಖೆಯ ವತಿಯಿಂದ ಯಾವುದೇ ರೀತಿಯ ಹೊಸ ಕೆಲಸಗಳಿಗೆ ಸಹಕಾರ ನೀಡದೆ ಗ್ರಾಮಸ್ಥರಿಗೆ, ಮತ್ತು ರೈತರಿಗೆ, ಸಾರ್ವಜನಿಕರಿಗೆ ತೊಂದರೆಗಳನ್ನು ನೀಡುತ್ತಿದ್ದಾರೆ ಎಂದು ಅಲ್ಲಿನ ನೂರಾರು ಗ್ರಾಮಸ್ಥರ ಅರೋಪವಾಗಿದೆ.
ಆರ್‌ಟಿಸಿಯಲ್ಲಿ ಮೂರು ಬಾರಿ ಬದಲಾವಣೆ ಗ್ರಾಮಸ್ಥರ ಅಕ್ರೊಶ. ೨೦೦೬ ರಲ್ಲಿ ಸರ್ವೆ ನಂಬರ್ ೩೦ ರ ಭೂಮಿ ಸಿ.ಎನ್. ಡಿ. ಲ್ಯಾಂಡ್ ಎಂದು ನಮೂದಿತವಾಗಿದ್ದ ಭೂಮಿ ಇದೀಗ ೨೦೨೨ ರಲ್ಲಿ ಡೀಮ್ಡ್ ಫಾರೆಸ್ಟ್ (ಪರಿಭಾವಿತ ಅರಣ್ಯ ಪ್ರದೇಶ) ವಾಗಿದೆ ಈ ಆದೇಶದಿಂದಾಗಿ ಸ್ಥಳೀಯರಿಗೆ ತಮ್ಮ ಮನೆಯ ಅಭಿವೃದ್ಧಿಗೆ ಯಾವುದೇ ಅವಕಾಶಗಳನ್ನು ಅರಣ್ಯ ಇಲಾಖೆ ನೀಡದ ಹಿನ್ನೆಲೆಯಲ್ಲಿ ಸುಂದರನಗರದ ನೂರಾರು ಗ್ರಾಮಸ್ಥರ ಸಹಕಾರದೊಂದಿಗೆ ಪ್ರತಿಭಟನೆಗೆ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಗ್ರಾಮದ ಪ್ರಮುಖರಾದ ಸುಕುಮಾರ್, ರಮೇಶ್, ರಾಜು, ಮುರುಗ, ಮಂಜುನಾಥ, ಧರ್ಮ, ಗಿರೀಶ್ ವೇಲುಸ್ವಾಮಿ, ಸವಿತ ನಿರ್ಮಲ, ಪಾರ್ವತಿ, ಮಹದೇವಮ್ಮ ಸೇರಿದಂತೆ ನೂರಾರು ಗ್ರಾಮಸ್ಥರು ತಿಳಿಸಿದ್ದಾರೆ. ೨೦೨೨ರಲ್ಲಿ ಇದೇ ಸ್ಧಳದ ಆರ್‌ಟಿ.ಸಿ.ಯು ೩೧/೧. ಎಂದು ನಮೂದಿಸಲಾಗಿದೆ. ಗ್ರಾಮಸ್ಥರು ನೀಡಿದ ಮಾಹಿತಿಯ ಮೇರೆಗೆ ಮಾಜಿ ಶಾಸಕ ಅಪ್ಪಚ್ಚು ರಂಜನ್ ಭೇಟಿ ನೀಡಿ ಪರಿಶೀಲನೆ ನಡೆಸಿ ಸರಕಾರದ ಈ ಕ್ರಮದ ಬಗ್ಗೆ ತೀವ್ರವಾಗಿ ಖಂಡಿಸಿದ ಅವರು ಅರಣ್ಯ ಇಲಾಖೆಯ ರಾಜ್ಯ ಸರ್ಕಾರದ ನಿಲುವು ಕ್ರಮಬದ್ಧವಾಗಿರುವುದಿಲ್ಲಾ, ಅರಣ್ಯ ಸಚಿವರು ಮನಬಂದAತೆ ಹೊಸ ನಿಯಮಗಳನ್ನು ಜಾರಿಗೆ ತಂದಿರುವುದು, ಸರಿಯಾದ ಕ್ರಮವಲ್ಲಾ, ಗ್ರಾಮಸ್ಥರಿಗೆ ತೊಂದರೆಗಳನ್ನು ಉಂಟುಮಾಡಿದರೆ ಮುಂದಿನ ದಿನಗಳಲ್ಲಿ ಗ್ರಾಮಸ್ಥರ ಸಹಕಾರದೊಂದಿಗೆ ಪಕ್ಷದ ಕಾರ್ಯಕರ್ತರೊಂದಿಗೆ ಹಿಂದಿನ ನಿಯಮಗಳನ್ನು ಪಾಲನೆ ಮಾಡುವಂತೆ ಪ್ರತಿಭಟನೆ ಮಾಡಲಾಗುವುದು ಎಂದು ಸ್ಧಳಕ್ಕೆ ತೆರಳಿದ ಸುದ್ದಿಗಾರರಿಗೆ ತಿಳಿಸಿದರು. ಇದಕ್ಕೆ ಸಂಬAಧಿಸಿದAತೆ ಕುಶಾಲನಗರ ವಲಯ ಅರಣ್ಯಾಧಿಕಾರಿ ರವರನ್ನು ಮಾಹಿತಿ ಬಯಸಿದಾಗ, ಅರಣ್ಯ ಇಲಾಖೆಯ ರಾಜ್ಯ ಮಟ್ಟದ ಅಧಿಕಾರಿ ಸೂಚನೆ ಅನ್ವಯ ಸುಂದರನಗರ ಗ್ರಾಮದಲ್ಲಿ ಯಾವುದೇ ರೀತಿಯ ಹೊಸ ಮನೆಗಳ ನಿರ್ಮಾಣ ಮತ್ತು ತಡೆಗೋಡೆ ನಿರ್ಮಾಣಕ್ಕೆ ಅವಕಾಶಗಳನ್ನು ನೀಡುವುದಿಲ್ಲ, ಅದರೆ ಡಿ.ಎಲ್. ಸಿ. ಸಭೆಯ ತೀರ್ಮಾನದಂತೆ ಅಧಿಕಾರಿ ವರ್ಗದವರು ಕಾರ್ಯ ನಿರ್ವಹಿಸುತ್ತೇವೆ ಎಂದು ತಿಳಿಸಿದ್ದಾರೆ. ಅಧಿಕಾರಿ ವರ್ಗದವರು ಸ್ಥಳಕ್ಕೆ ಭೇಟಿ ನೀಡಿ ಸಮರ್ಪಕವಾಗಿ ಪರಿಶೀಲನೆ ನಡೆಸಿ ನಿಯಮಾನುಸಾರ ಗ್ರಾಮಸ್ಥರಿಗೆ ಅನುಕೂಲ ಕಲ್ಪಿಸಿಕೊಡಬೇಕು ಇಲ್ಲದಿದ್ದಲ್ಲಿ ತೀವ್ರತರವಾದ ಪ್ರತಿಭಟನೆ ಮಾಡಲಾಗುವುದು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಕೂಡುಮಂಗಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಭಾಸ್ಕರ ನಾಯಕ್, ಸದಸ್ಯರುಗಳಾದ ದಿನೇಶ್, ಮಣಿಕಂಠ, ಬಿಜೆಪಿ ಮುಖಂಡ ಹೇರೂರು ಚಂದ್ರಶೇಖರ್, ಬಿಜೆಪಿ ಅಸಂಖ್ಯಾತ ಘಟಕದ ಅಧ್ಯಕ್ಷ ಎಂ.ಹೆಚ್. ಮಹಮ್ಮದ್, ಗ್ರಾಮದ ಪ್ರಮುಖರಾದ ಸುಕುಮಾರ್, ಗಿರೀಶ್ ರಾಜು ಮುರುಗ, ಮಂಜುನಾಥ, ಧರ್ಮ, ವೇಲುಸ್ವಾಮಿ, ಸೇರಿದಂತೆ ನೂರಾರು ಗ್ರಾಮಸ್ಥರು ಇದ್ದರು.
-ಕೆ.ಕೆ. ನಾಗರಾಜಶೆಟ್ಟಿ