ಮಡಿಕೇರಿ, ಜ. ೧೧: ಮೇಕೇರಿಯ ರಸ್ತೆ ಅಭಿವೃದ್ಧಿಗೆ ಶಾಸಕ, ಮುಖ್ಯಮಂತ್ರಿ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಅನುದಾನ ನೀಡಿದ್ದು, ಉದ್ದೇಶಿತ ಕಾಮಗಾರಿಗೆ ಸ್ಥಳೀಯರು ಚಾಲನೆ ನೀಡಿದರು.

ಮೇಕೇರಿ ಗ್ರಾಮದ ತೋರೆರ, ಮಡಿಯನ, ಚೆರಿಯಮನೆ ಮತ್ತಿತರ ಕುಟುಂಬಸ್ಥರ ಮನೆಗೆ ಹೋಗುವ ರಸ್ತೆಗೆ ೭.೫ ಲಕ್ಷ ರೂಗಳ ಅನುದಾನವನ್ನು ಶಾಸಕ ಪೊನ್ನಣ್ಣ ಒದಗಿಸಿದ್ದಾರೆ.

ಈ ಸಂದರ್ಭ ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್, ಕೊಡಗು ಜಿಲ್ಲಾ ಕಾಂಗ್ರೆಸ್ ವಕ್ತಾರ ತೆನ್ನಿರ ಮೈನಾ, ವಲಯ ಕಾಂಗ್ರೆಸ್ ಅಧ್ಯಕ್ಷ ಪೊನ್ನಪ್ಪ, ಗ್ರಾಮ ಪಂಚಾಯಿತಿ ಸದಸ್ಯ ಹನೀಫ್, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಮತಾ, ಪಂಚಾಯತ್ ರಾಜ್ ಇಂಜಿನಿಯರ್ ರಘು ಸೇರಿದಂತೆ ಸ್ಥಳೀಯರು ಉಪಸ್ಥಿತರಿದ್ದರು.