ಭಾಗಮಂಡಲ, ಜ. ೧೨: ಚೆರಂಡೇಟಿ ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಅಭಿಯಾನದ ಅಂಗವಾಗಿ ಅನ್ನಪ್ರಾಸನ ಮತ್ತು ಆರೋಗ್ಯ ತಪಾಸಣೆ ಕಾರ್ಯಕ್ರಮ ನಡೆಯಿತು.
ಭಾಗ್ಯಲಕ್ಷಿö್ಮ, ಮಾತೃವಂದನ ಯೋಜನೆಗಳು ಇತ್ಯಾದಿಗಳ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಬಾರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾಡಂಡ ಸವಿತಾ ಕೀರ್ತನ್ ಅವರು ಸವಿವರವಾಗಿ ವಿವರಿಸಿದರು. ಕಾರ್ಯಕ್ರಮದಲ್ಲಿ ಪುಟಾಣಿಗಳಾದ ಹೆಯನ್ ಮತ್ತು ದಿಯನ್ಗೆ ಅನ್ನಪ್ರಾಸನವನ್ನು ಹಮ್ಮಿಕೊಳ್ಳಲಾಯಿತು.
ನಂತರ ಆರೋಗ್ಯ ಇಲಾಖೆಯ ವೈದ್ಯಾಧಿಕಾರಿ ಶೈಮ, ಆರೋಗ್ಯ ಕಾರ್ಯಕರ್ತೆ ಮಮತಾ ಅವರು ಮಕ್ಕಳ ತೂಕ, ಎತ್ತರ, ಆರೋಗ್ಯ ತಪಾಸಣೆ ಮತ್ತು ಅನಿಮಿಯಾ ಪರೀಕ್ಷೆ ನಡೆಸಿದರು. ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತೆ ಉಮಾಶ್ರೀ ಪಿ.ಎಸ್. ಸ್ವಾಗತಿಸಿ, ನಿರೂಪಿಸಿದರು. ಈ ಸಂದರ್ಭ ಶಾಲಾ ಶಿಕ್ಷಕಿ ಪುಷ್ಪವೇಣಿ, ಬಾಲವಿಕಾಸ ಸಮಿತಿಯ ಅಧ್ಯಕ್ಷೆ ಬಿನ್ನಿ ಗೋಪಾಲ್, ಕೇಂದ್ರದ ಸಹಾಯಕಿ ರೇಷ್ಮಾ ಕೆ.ಎಂ., ಬಾಲವಿಕಾಸ ಸಮಿತಿಯವರು, ಮಕ್ಕಳ ತಾಯಂದಿರು, ಪೋಷಕ ವರ್ಗದವರು ಹಾಜರಿದ್ದರು.