ಸುAಟಿಕೊಪ್ಪ, ಜ. ೧೨: ಧ್ಯಾನ ದಿಂದ ಸನಾತನ ಧರ್ಮದ ಮೂಲ ಪವಿತ್ರ ಗ್ರಂಥಗಳಾದ ವೇದ ಉಪನಿಶತ್, ಭಗವದ್ಗೀತೆ ಗ್ರಂಥಗಳ ಸ್ವ ಅಧ್ಯಯನ ಮಾರ್ಗದರ್ಶನ ಪಡೆಯುವ ಹಿನ್ನಲೆಯಲ್ಲಿ ಸುಂಟಿಕೊಪ್ಪ ಹೋಬಳಿಯ ಕಂಬಿಬಾಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಅತ್ತೂರು ನಲ್ಲೂರು ಗ್ರಾಮದಲ್ಲಿ ಶ್ರೀ ಬ್ರಹ್ಮಜ್ಞಾನ ಧ್ಯಾನ ಮಂದಿರ ಆಶಾಕಿರಣವಾಗಿ ರೂಪುಗೊಂಡಿದೆ.

ಮಂದಿರ ಉಸ್ತುವಾರಿ ಸಮಿತಿಯ ಕಾರ್ಯಾಧ್ಯಕ್ಷ ಎಂ.ವಿ. ರಘುನಾಥ್ ಈ ಬಗ್ಗೆ ಮಾಹಿತಿ ನೀಡಿದರು. ಹಿಮಾಲಯದ ತಪ್ಪಲಿನ ಋಷಿಕೇಶದ ಸ್ವಾಮೀಜಿಯೊಬ್ಬರ ಆಕಸ್ಮಿಕ ಭೇಟಿ ಅವರ ಆಶೀರ್ವಾದದಿಂದ ವೇದÀ ಉಪನಿಶತ್ತು, ಭಗವದ್ಗೀತೆ ಹಾಗೂ ಅಧ್ಯಾತ್ಮದೆಡೆಗೆ ಆಕರ್ಷಿತರಾದ ಬಗ್ಗೆ ಹೇಳಿದರು.

ಈ ಹಿನ್ನಲೆಯಲ್ಲಿ ತಮ್ಮ ಊರಿನಲ್ಲೇ ಮೊದಲ ಹೆಜ್ಜೆಯಾಗಿ ಕಂಬಿಬಾಣೆ, ೭ನೇ ಹೊಸಕೋಟೆ ಹಾಗೂ ಕೊಡಗರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೀಮಿತವಾಗಿ ಈ ಮಂದಿರವನ್ನು ಸ್ಥಾಪಿಸಿದ್ದು ಇಲ್ಲಿ ಎಲ್ಲವೂ ಉಚಿತ. ಕಾಣಿಕೆ ಡಬ್ಬಿ ಆರತಿ ತಟ್ಟೆ ಇರುವುದಿಲ್ಲ ಎಲ್ಲಾವೂ ಸ್ವ ಅಧ್ಯಾಯ ಮತ್ತು ಮಾರ್ಗದರ್ಶನ ಮಾತ್ರ ಎಂದು ಹೇಳಿದ ಅವರು, ನ. ೩೦ ರಂದು ಈ ಧ್ಯಾನ ಮಂದಿರವನ್ನು ತಮ್ಮ ತಾಯಿ ತುಂಗಮ್ಮ ವೆಂಕಪ್ಪ ಅವರಿಂದ ಉದ್ಘಾಟಿಸಲಾಗಿದೆ. ಮಂದಿರವು ಪ್ರತಿದಿನ ಬೆಳಿಗ್ಗೆ ೬ ರಿಂದ ೮ ಮತ್ತು ಸಂಜೆ ೬ ರಿಂದ ೭ ಸ್ವಅಧ್ಯಾಯ ಮತ್ತು ಧ್ಯಾನಕ್ಕೆ ತೆರೆದಿರುತ್ತದೆ. ಪ್ರತಿ ಭಾನುವಾರ ದಿನಪೂರ್ತಿ ಧ್ಯಾನ ಮತ್ತು ಸ್ವ ಅಧ್ಯಾಯ ಮತ್ತು ಮಾರ್ಗದರ್ಶನವನ್ನು ಪಡೆಯಬಹುದು. ಮೊದಲ ಹಂತದಲ್ಲಿ ಪ್ರತಿ ತಿಂಗಳ ನಾಲ್ಕನೇ ಭಾನುವಾರ ಅಧ್ಯಾತ್ಮಿಕ ಪ್ರವಚನ ಏರ್ಪಡಿಸಲಾಗುತ್ತದೆ ಅಂದು ಬೆಳಗ್ಗಿನ ಲಘುಉಪಹಾರ, ಮಧ್ಯಾಹ್ನದ ಭೋಜನ ವ್ಯವಸ್ಥೆ ಮಾಡಲಾಗುವು ದೆಂದು ಎಂ.ವಿ.ರಘುನಾಥ್ ಮಾಹಿತಿ ನೀಡಿದರು. ತಮ್ಮ ಮಂದಿರ ಸ್ಥಾಪನೆ ಉದ್ದೇಶ ಮತ್ತು ಗುರಿಯ ಬಗ್ಗೆ ಮಾತನಾಡಿದ ಅವರು, ದೇವಸ್ಥಾನ ಸೇವಸ್ಥಾನವಾಗಿ ಮತ್ತು ಧರ್ಮಾನುಷ್ಠಾನ ಕೇಂದ್ರವಾಗಿ ರೂಪುಗೊಳ್ಳಬೇಕು. ಪೂಜೆ ಉತ್ಸವಗಳ ಜೊತೆಗೆ ಬಡ ಜನರಿಗೆ ಅವಶ್ಯ ಉಳ್ಳವರಿಗೆ ಸೇವಾ ಕಾರ್ಯಕ್ರಮಗಳನ್ನು ಪೂಜಾ ಭಾವದಿಂದ ಹಮ್ಮಿಕೊಂಡು ಶಿಕ್ಷಣ ಕೇಂದ್ರಗಳಾಗಿ ಪರಿವರ್ತನೆ ಹೊಂದಬೇಕು ಎಂದರು. ಅಸಕ್ತರು ತಮ್ಮನ್ನು ಮೊಬೈಲ್ ಸಂಖ್ಯೆಯಲ್ಲಿ ಸಂಪರ್ಕಿಸುವAತೆ ೭೭೬೦೮೭೮೫೫೯ ಹೇಳಿದ್ದಾರೆ.