ಮಡಿಕೇರಿ, ಜ. ೧೩: ಗಾಳಿಬೀಡು ಮತ್ತು ವಣಚಲು ಗ್ರಾಮ ವ್ಯಾಪ್ತಿಯ ಮಕ್ಕಳ ಆರೋಗ್ಯ ತಪಾಸಣಾ ಶಿಬಿರ ನಡೆಯಿತು. ಮಕ್ಕಳ ಕಣ್ಣಿನ ತಪಾಸಣೆ, ಅನೀಮಿಯ ಸೇರಿದಂತೆ ವಿವಿಧ ಆರೋಗ್ಯ ತಪಾಸಣೆ ನಡೆಸಲಾಯಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಭಾರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾಡಂಡ ಸವಿತಾ ಕೀರ್ತನ್, ರಕ್ತಹೀನತೆ ಪರೀಕ್ಷೆ ಬಗ್ಗೆ ಅರಿವು ಮೂಡಿಸಿ ಸ್ತನ್ಯಪಾನದ ಮಹತ್ವ ಪೌಷ್ಟಿಕ ಆಹಾರದ ಮಹತ್ವ ತಿಳಿಸಿದರು. ಸ್ಥಳೀಯವಾಗಿ ಸಿಗುವ ತರಕಾರಿ ಹಣ್ಣುಗಳು ಸೊಪ್ಪುಗಳನ್ನು ಯಥೇಚ್ಛವಾಗಿ ಬಳಸಲು ಸಲಹೆ ನೀಡಿದರು. ಮಕ್ಕಳಿಗೆ ಆರು ತಿಂಗಳು ತುಂಬಿದ ನಂತರ ಎರಡು ವರ್ಷಗಳ ಕಾಲ ರಾಗಿ, ೯ ತಿಂಗಳ ನಂತರ ಮೊಟ್ಟೆ ಮತ್ತು ತರಕಾರಿ ಬೇಳೆ ಸೊಪ್ಪುಗಳನ್ನು ಬಳಸಿ ಕಿಚಡಿ ತಯಾರಿಸಿ ನೀಡಲು ಹಾಗೂ ನುಗ್ಗೆ ಸೊಪ್ಪು,, ಕಡಲೆ ಬೆಲ್ಲಗಳ ಬಳಕೆ ಮಾಡಿ ಪೌಷ್ಟಿಕ ಉಂಡೆ ತಯಾರಿಸಿ ನೀಡಲು ತಿಳಿಸಿದರು. ಗಾಳಿಬೀಡು ಗ್ರಾ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಶಿಕಿರಣ್, ಗ್ರಾ.ಪಂ.ನಿAದ ದೊರೆಯುವ ಸೌಲಭ್ಯಗಳ ಬಗ್ಗೆ ವಿವರಿಸಿದರು. ತಾಲೂಕು ಪಂಚಾಯಿತಿಯಿAದ ಹೊಸದಾಗಿ ನಿರ್ಮಾಣಗೊಳ್ಳುತ್ತಿರುವ ಅಂಗನವಾಡಿ ಕಟ್ಟಡದ ಪರಿಶೀಲನೆಯನ್ನು ನಡೆಸಲಾಯಿತು.
ವೈದ್ಯಾಧಿಕಾರಿ ಪೂಜಾ, ರಮ್ಯ ಹಾಗೂ ಅಮೃತ ತಪಾಸಣೆ ನಡೆಸಿದರು. ಅಂಗನವಾಡಿ ಕಾರ್ಯಕರ್ತೆಯರಾದ ಧರಣಿ, ರಮ್ಯ, ವೈಜಯಂತಿ, ಸಹಾಯಕಿಯರಾದ ಪ್ರಿಯ, ವಿದ್ಯಾಶ್ರೀ, ಆಶಾ ಕಾರ್ಯಕರ್ತೆ ಸೌಭಾಗ್ಯ ಮತ್ತು ಕವಿತಾ ಬಾಲ ವಿಕಾಸ ಸಮಿತಿಯ ಅಧ್ಯಕ್ಷೆ ಲಿಖಿತ ಉಪಸ್ಥಿತರಿದ್ದರು.