ಸೋಮವಾರಪೇಟೆ, ಜ. ೧೩: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಬೇಳೂರು ಗ್ರಾಮ ಪಂಚಾಯಿತಿ, ಸಿಎಂಸಿಎ ಸಂಸ್ಥೆ ಬೆಂಗಳೂರು ಹಾಗೂ ನಾವು ಪ್ರತಿಷ್ಠಾನ ಕೊಡಗು ಸಂಯುಕ್ತ ಆಶ್ರಯದಲ್ಲಿ ಬಳಗುಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಆಯೋಜಿಸಿದ್ದ ಮಕ್ಕಳ ಗ್ರಾಮ ಸಭೆಯಲ್ಲಿ ವಿವಿಧ ಶಾಲೆಗಳ ವಿದ್ಯಾರ್ಥಿಗಳು ತಮ್ಮ ಸಮಸ್ಯೆಗಳನ್ನು ಅಧಿಕಾರಿಗಳೆದುರು ತೆರೆದಿಟ್ಟರು.
ಬೇಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಿಂಭಾಗದಲ್ಲಿ ಆನೆಕಂದಕ ನಿರ್ಮಿಸಲಾಗಿದೆ. ವಿದ್ಯಾರ್ಥಿಗಳ ಕಾಲು ಜಾರಿದರೆ ಕಂದಕದೊಳಗೆ ಬೀಳಬೇಕಾಗುತ್ತದೆ. ಈ ಬಗ್ಗೆ ಅರಣ್ಯ ಇಲಾಖೆಗೆ ಈ ಹಿಂದೆಯೇ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಇನ್ನಾದರೂ ಕಾಂಪೌAಡ್ ನಿರ್ಮಿಸಿಕೊಡಿ ಎಂದು ವಿದ್ಯಾರ್ಥಿನಿ ಶೀಮಾ ಮನವಿ ಮಾಡಿದರು.
ಮೀಸಲು ಅರಣ್ಯ ಪಕ್ಕದಲ್ಲೇ ಬೇಳೂರು ಶಾಲೆಯಿದೆ. ಕಾಡಾನೆ ಭಯ, ಬೀದಿನಾಯಿಗಳ ಹಾವಳಿಯಿಂದ ಭಯ ದಿಂದಲೇ ಶಾಲೆಗೆ ಬರಬೇಕು. ಮಕ್ಕಳು ನಡೆದುಕೊಂಡು ಹೋಗುವ ರಸ್ತೆಯಲ್ಲಿ ಬೀದಿ ದೀಪ ಅಳವಡಿಸಬೇಕು. ಇದರಿಂದ ಗ್ರಾಮದ ನಿವಾಸಿಗಳಿಗೂ ಉಪಯೋಗವಾಗಲಿದೆ ಎಂದು ವಿದ್ಯಾರ್ಥಿನಿ ಪೂರ್ವಿ ಹೇಳಿದಳು.
ಪ್ರತಿಕ್ರಿಯಿಸಿದ ಪಿಡಿಒ ಮೋಹನ್, ಪಂಚಾಯಿತಿಯಿAದ ರಸ್ತೆ ಬದಿ ಬೀದಿ ದೀಪ ಅಳವಡಿಸುತ್ತೇವೆ. ಶಾಲೆಯಲ್ಲಿ ತೆಗೆಸಿರುವ ಕೊಳವೆಬಾವಿಗೆ ಮೋಟಾರ್ ಅಳವಡಿಸಲಾಗುವುದು. ಇಂಗುಗುAಡಿ ನಿರ್ಮಿಸಲು ಕ್ರಮ ತೆಗದುಕೊಳ್ಳುತ್ತೇವೆ. ಕಂದಕದ ಸಮೀಪ ಕಾಂಪೌAಡ್ ನಿರ್ಮಿಸಲು ಅರಣ್ಯ ಇಲಾಖೆಗೆ ಪಂಚಾಯಿತಿಯಿAದ ಮನವಿ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಬೇಳೂರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಿಟಕಿಗಳು ಹಾಳಾಗಿವೆ ಎಂದು ವಿದ್ಯಾರ್ಥಿಗಳು ಹೇಳಿದರು. ಬಳಗುಂದ ಶಾಲೆಯ ಆವರಣದೊಳಗೆ ಕಿಡಿಗೇಡಿಗಳು ಸಮಸ್ಯೆ ಮಾಡುತ್ತಿದ್ದಾರೆ. ಶೌಚಾಲಯದ ಬೀಗವನ್ನು ಒಡೆದು ಹಾಕುತ್ತಿದ್ದಾರೆ. ಶಾಲಾ ಆವರಣದೊಳಗೆ ಮದ್ಯದ ಬಾಟಲ್‌ಗಳನ್ನು ಎಸೆಯುತ್ತಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದರು.
ಶಾಲಾ ಆವರಣದಲ್ಲಿ ಸಿಸಿ ಕ್ಯಾಮರಾ ಅಳವಡಿಸಿಕೊಡುವ ಭರವಸೆಯನ್ನು ಪಿಡಿಒ ನೀಡಿದರು. ಈ ಬಗ್ಗೆ ಈಗಾಗಲೇ ಪೊಲೀಸರಿಗೆ ದೂರು ನೀಡಲಾಗಿದೆ ಎಂದು ಮುಖ್ಯಶಿಕ್ಷಕಿ ಭಾಗ್ಯ ಹೇಳಿದರು.
ಈ ಹಿಂದೆ ಪ್ರಾಥಮಿಕ ಆರೋಗ್ಯ ಕೇಂದ್ರದಿAದ ಪ್ರಥಮ ಚಿಕಿತ್ಸೆ ಕಿಟ್ ನೀಡುತ್ತಿದ್ದರು. ಆರೋಗ್ಯ ಕೇಂದ್ರದಲ್ಲಿ ವೈದ್ಯರು, ದಾದಿಯರು ಇಲ್ಲದೆ ಇರುವುದರಿಂದ ಸಮಸ್ಯೆಯಾಗಿದೆ. ಮಾತ್ರೆ ಔಷಧಿಯನ್ನು ವೃದ್ದರು ಕೇಳುತ್ತಾರೆ. ನಾವು ಎಲ್ಲಿಂದ ಕೊಡುವುದು ಎಂದು ಕಾರ್ಯಕರ್ತೆಯೊಬ್ಬರು ತಮ್ಮ ಅಸಹಾಯಕತೆ ಹೇಳಿಕೊಂಡರು. ಆಶಾ ಕಾರ್ಯಕರ್ತರಿಗೂ ಸಂಬಳವಾಗಿಲ್ಲ ಎಂದು ಹೇಳಿದರು.
ಶಾಲೆಗೆ ಹೂ ತೋಟ ನಿರ್ಮಿಸಿಕೊಡಬೇಕು. ನೀರಿನ ಸೌಲಭ್ಯ ಒದಗಿಸಿಕೊಡಬೇಕು ಎಂದು ವಿದ್ಯಾರ್ಥಿಗಳು ಮನವಿ ಮಾಡಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕರಾದ ಸಾವಿತ್ರವ್ವ ಮಕ್ಕಳ ಹಕ್ಕುಗಳು ಮತ್ತು ಇಲಾಖೆಯಿಂದ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಸಭೆಯಲ್ಲಿ ಬೇಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಾರ್ವತಮ್ಮ, ಸದಸ್ಯರಾದ ಸುಜಾತ, ಬೇಳೂರು ಶಾಲೆಯ ಮುಖ್ಯಶಿಕ್ಷಕಿ ನಿರ್ಮಲ, ನಾವು ಪ್ರತಿಷ್ಠಾನದ ಸುಮನ ಮ್ಯಾಥ್ಯು, ಗೌತಮ್ ಕಿರಗಂದೂರು, ಶಿಕ್ಷಕಿ ಪುಷ್ಪ ಇದ್ದರು.