ಮಡಿಕೇರಿ, ಜ.೧೩: ಯೂನಿಯನ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆ, ಕೂಡಿಗೆ, ಕೊಡಗು ಜಿಲ್ಲೆ ಈ ಸಂಸ್ಥೆಯಲ್ಲಿ ನಿರುದ್ಯೋಗಿ ಯುವತಿಯರಿಗೆ ಊಟ ವಸತಿಯೊಂದಿಗೆ ಸಂಪೂರ್ಣ ಉಚಿತವಾಗಿ ನೀಡಲಾಗುವ ಸ್ವ-ಉದ್ಯೋಗ ತರಬೇತಿ ಪಡೆದುಕೊಳ್ಳಲು ಅವಕಾಶಗಳಿವೆ. ಅರ್ಜಿ ಸಲ್ಲಿಸಲು ೧೮ ರಿಂದ ೫೦ ವರ್ಷ ವಯೋಮಿತಿಯೊಳಗಿನ ಯುವತಿಯರಿಗೆ ಮಾತ್ರ ಅವಕಾಶ. ಆಸಕ್ತಿ ಉಳ್ಳವರು ಸಂಸ್ಥೆಯನ್ನು ನೇರವಾಗಿ ಅಥವಾ ಕರೆ ಮಾಡಿ ಮಾಹಿತಿ ಪಡೆಯಬಹುದು.
ಬ್ಯೂಟಿ ಪಾರ್ಲರ್ ತರಬೇತಿ ೩೫ ದಿನಗಳು, ಜನವರಿ, ೧೬ ರಿಂದ ೧೯ ರವರೆಗೆ, ಫಾಸ್ಟ್ ಫುಡ್ ತಯಾರಿಕೆ ತರಬೇತಿ ೧೨ ದಿನಗಳು. ಫೆಬ್ರವರಿ, ೧೬ ರಿಂದ ೨೭ ರವರೆಗೆ, ಹ್ಯಾಂಡ್ ಎಂಬ್ರಾಯಿಡರಿ ತರಬೇತಿ ೩೧ ದಿನಗಳು. ಫೆಬ್ರವರಿ, ೧೬ ರಿಂದ ಮಾರ್ಚ್, ೧೮ ರವರೆಗೆ, ಮಹಿಳೆಯರ ಹೊಲಿಗೆ ತರಬೇತಿ ೩೧ ದಿನಗಳು. ಫೆಬ್ರವರಿ, ೨೫ ರಿಂದ ಮಾರ್ಚ್, ೨೭ ರವರೆಗೆ, ಕಂಪ್ಯೂಟರ್ ಲೆಕ್ಕ ಪತ್ರ ನಿರ್ವಹಣೆ ತರಬೇತಿ ೩೮ ದಿನಗಳು. ಫೆಬ್ರವರಿ, ೧೯ ರಿಂದ ಮಾರ್ಚ್, ೨೮ ರವರೆಗೆ ನಡೆಯಲಿದೆ. ಈ ತರಬೇತಿಗಳು ಪ್ರಾರಂಭವಾಗುತ್ತಿದೆ. ಆಸಕ್ತಿ ಇರುವವರು ಹೆಚ್ಚಿನ ಮಾಹಿತಿಗೆ ದೂ.ಸಂ.೯೬೮೬೪೦೬೧೮೧, ೯೪೪೯೪೦೨೦೮೧, ೮೬೧೮೪೭೧೮೦೧ ಮತ್ತು ೯೯೦೦೧೪೨೬೦೨ ನ್ನು ಸಂಪರ್ಕಿಸಬಹುದು ಎಂದು ಸಂಸ್ಥೆಯ ನಿರ್ದೇಶಕರಾದ ಪ್ರಕಾಶ್ ಕುಮಾರ್ ಅವರು ತಿಳಿಸಿದ್ದಾರೆ.