ನಾಪೋಕ್ಲು, ಜ. ೧೪: ಸ್ಥಳೀಯ ಪಟ್ಟಣ ಸೇರಿದಂತೆ ಸುತ್ತಮುತ್ತಲಲ್ಲಿ ಬುಧವಾರ ಮಳೆ ಸುರಿಯಿತು. ಪಟ್ಟಣದಲ್ಲಿ ಸುಮಾರು ೪೫ ಸೆಂಟ್ ಮಳೆಯಾಗಿದ್ದು ಬೇತು, ಹಳೆ ತಾಲೂಕು, ಅಜ್ಜಿಮುಟ್ಟ, ಕೊಟ್ಟಮುಡಿ, ಹೊದ್ದೂರು, ಬಲಮುರಿ ವ್ಯಾಪ್ತಿಗಳಲ್ಲಿ ಸುರಿದ ಮಳೆಯಿಂದ ಬೆಳೆಗಾರರು ಆತಂಕಕ್ಕೀಡಾದರು.
ನಾಪೋಕ್ಲು ವ್ಯಾಪ್ತಿಯಲ್ಲಿ ದಿನವಿಡೀ ಮೋಡ ಕವಿದ ವಾತಾವರಣವಿದ್ದು, ಮಂಗಳವಾರ ರಾತ್ರಿ ನಾಪೋಕ್ಲು, ಚೈಯಂಡಾಣೆ, ಕಕ್ಕಬೆ, ಬಲ್ಲಮಾವಟ್ಟಿ, ಅಯ್ಯಂಗೇರಿ, ಎಮ್ಮೆಮಾಡು, ಹೊದ್ದೂರು, ಕೊಟ್ಟಮುಡಿ ವ್ಯಾಪ್ತಿಯ ಗ್ರಾಮಗಳಲ್ಲಿ ಅಲ್ಲಲ್ಲಿ ವರ್ಷದ ಪ್ರಥಮ ವರ್ಷಧಾರೆಯಾಗಿದೆ.