ಕುಶಾಲನಗರ: ಕುಶಾಲನಗರ ಗೌಡ ಮಹಿಳಾ ಸಂಘ ಸುಮುಖ - ಸುಕೃತ ತಂಡದವರಿAದ ಸಂಭ್ರಮದ ಮಕರ ಸಂಕ್ರಾAತಿ ಆಚರಣೆ ನಡೆಯಿತು.
ಕುಶಾಲನಗರ ಗೌಡ ಸಮಾಜ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಲಾ ಆನಂದ್ ಸಂಕ್ರಾAತಿ ಹಬ್ಬದಂದು ಎಳ್ಳು ಬೆಲ್ಲ ಹಂಚಿಕೊಳ್ಳುವುದು ಒಂದು ಸುಂದರ ಸಂದೇಶ, ಎಳ್ಳು ಜೀವನದ ಕಷ್ಟವನ್ನು ಹಾಗೆ ಬೆಲ್ಲ ಜೀವನದ ಸುಖವನ್ನು ಸೂಚಿಸುತ್ತದೆ. ಜೀವನದಲ್ಲಿ ಸುಖ ದುಃಖವನ್ನು ಸಮನಾಗಿ ಸ್ವೀಕರಿಸಿ ಮಾತು ಸಿಹಿಯಾಗಿರಲಿ ಎಂಬ ಸಂದೇಶ ಇದರಲ್ಲಿ ಅಡಗಿದೆ. ಜೊತೆಗೆ ಚಳಿಗಾಲದಲ್ಲಿ ದೇಹಕ್ಕೆ ಶಕ್ತಿ ನೀಡುವ ಆಹಾರವು ಹೌದು, ಸಂಕ್ರಾAತಿ ಹಬ್ಬದ ಆಚರಣೆಯ ಮೂಲಕ ನಾವು ಪ್ರೀತಿ ಸೌಹಾರ್ದ ಮತ್ತು ಒಗ್ಗಟ್ಟು ಸಾರಬೇಕು ಎಂದು ಹೇಳಿದರು.
ಸಂಘದ ಸದಸ್ಯರಾದ ನಂಗಾರು ಅನಿತಾ ಮಾತನಾಡಿ, ಹಳ್ಳಿಗಳಲ್ಲಿ ಬೆಳಿಗ್ಗೆ ಎದ್ದ ತಕ್ಷಣ ಎತ್ತು ನೋಡು, ಹಸು ನೋಡು, ನೇಗಿಲು ನೋಡು, ಎನ್ನುವ ಕಾಲವೊಂದಿತ್ತು. ಆ ಕಾಲ ಬದಲಾಗುತ್ತಿದೆಯಷ್ಟೇ, ಕುವೆಂಪುರವರ ಸಾಲು ನೇಗಿಲ ಮೇಲೆ ನಿಂತಿದೆ ಎನ್ನುವುದನ್ನು ನಮ್ಮ ಪೂರ್ವಿಕರು ಅಕ್ಷರಶಃ ಅನುಭವಿಸಿ ಪಾಲಿಸುತ್ತಿದ್ದರು. ಆದರೆ ಇಂದು ಬದಲಾವಣೆ ನಮ್ಮ ತನವನ್ನು ಮರೆ ಮಾಚಿದೆ ಎಂದು ಹೇಳಿದರು. ಸದಸ್ಯರಾದ ಲತಾ ಕಾಳೇರಮ್ಮ ಮಾತನಾಡಿದರು.
ಈ ಸಂದರ್ಭ ಜಾನಪದ ಕೃಷಿ ಪರಿಕರಗಳು ಹಳೆ ಕಾಲದ ವಸ್ತುಗಳನ್ನು ಇರಿಸಿ ಧಾನ್ಯ ಲಕ್ಷಿö್ಮಗೆ ಪೂಜೆಸಲ್ಲಿಸಿ ದೀಪ ಬೆಳಗಿ ಎಳ್ಳು ಬೆಲ್ಲ ಹಂಚಿಕೊAಡು ಸಂಭ್ರಮಿಸಿದರು. ಸಂಘದ ಸದಸ್ಯರಾದ ಸೂದನ ಅನಿತಾ ಸೂದನ ಲಲಿತಾ ಪ್ರಾರ್ಥಿಸಿದರು. ಗೀತಾ ನಂಗಾರು ಸ್ವಾಗತಿಸಿ, ಲೀಲಾವತಿ ತುಂತಜೆ ವಂದಿಸಿದರು.
ಶನಿವಾರಸAತೆ: ಸಮೀಪದ ಕೊಡ್ಲಿಪೇಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಮೇನಹಳ್ಳಿ (ದೊಡ್ಡಾಕುಂದ) ಗ್ರಾಮದ ಶ್ರೀ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಮಕರ ಜ್ಯೋತಿ ಪೂಜಾ ಕಾರ್ಯಕ್ರಮ ಶ್ರದ್ಧಾಭಕ್ತಿ ಹಾಗೂ ವಿಜೃಂಭಣೆಯಿAದ ಜರುಗಿತು.
ಅರ್ಚಕ ಶಾಂತಮಲ್ಲಯ್ಯ ಅವರು ಶ್ರೀ ಅಯ್ಯಪ್ಪಸ್ವಾಮಿಗೆ ವಿಶೇಷ ಅಲಂಕಾರ ಮಾಡಿ, ಪೂಜಾ ಕೈಂಕರ್ಯವನ್ನು ನೆರವೇರಿಸಿದರು. ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ಎ.ಬಿ.ಜಗದೀಶ, ಗೌರವ ಅಧ್ಯಕ್ಷ ಎಸ್.ಎಸ್. ವರಪ್ರಸಾದ್. ಉಪಾಧ್ಯಕ್ಷ ಡಿ.ಕೆ.ಮಹೇಶ್, ಕಾರ್ಯದರ್ಶಿ ಡಿ.ಆರ್.ವೇದಕುಮಾರ್, ನಿರ್ದೇಶಕರಾದ ಡಿ.ಕೆ.ಮಧು, ಡಿ.ಜೆ. ರಾಜು, ಕೆ.ಡಿ.ಹೊನ್ನಪ್ಪ, ಕೆ.ವಿ.ರಮೇಶ್, ಗಗನ್ ರೈ, ಶಿವರಾಜ್, ಕುಮಾರ್, ಹರೀಶ್, ನಾಗರಾಜ್, ಸುಬ್ಬಯ್ಯ ಹಾಗೂ ಗ್ರಾಮಸ್ಥರು ಹಾಜರಿದ್ದರು.ಪೊನ್ನಂಪೇಟೆ: ಪೊನ್ನಂಪೇಟೆಯ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಮಕರ ಸಂಕ್ರಾAತಿಪ್ರಯುಕ್ತ ಅಯ್ಯಪ್ಪ ಮಾಲಾಧಾರಿಗಳು ಹಾಗೂ ಭಕ್ತಾದಿಗಳಿಗೆ ದೂರದರ್ಶನದ ಮೂಲಕ ಮಕರ ಜ್ಯೋತಿಯ ವೀಕ್ಷಣೆ ಮಾಡಲು ದೇವಸ್ಥಾನ ಆಡಳಿತ ಮಂಡಳಿ ವತಿಯಿಂದ ವ್ಯವಸ್ಥೆ ಕಲ್ಪಿಸಲಾಗಿತ್ತು. ಈ ವಿಶೇಷ ದಿನದಂದು ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಕಾಡ್ಯಮಾಡ ಅಶೋಕ್ ನೇತೃತ್ವದಲ್ಲಿ ದೇವಸ್ಥಾನದ ಅರ್ಚಕರಾದ ನಾಗರಾಜ್ ಭಟ್ ಅವರ ಮುಂದಾಳತ್ವದಲ್ಲಿ ಬೆಳಗಿನಿಂದಲೇ ಅಯ್ಯಪ್ಪ ಸ್ವಾಮಿಗೆ ವಿವಿಧ ಅಭಿಷೇಕಗಳು, ವಿಶೇಷ ಅಲಂಕಾರ ಪೂಜೆ, ಮಹಾಪೂಜೆ ನೆರವೇರಿಸಲಾಯಿತು. ರಾತ್ರಿ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.
ಈ ಸಂದರ್ಭ ದೇವಸ್ಥಾನ ಆಡಳಿತ ಮಂಡಳಿಯ ಉಪಾಧ್ಯಕ್ಷ ತೀತಿರ ಸನ್ನು, ಖಜಾಂಚಿ ಎಂ.ಎA. ದಿಲೀಪ್, ಸದಸ್ಯರುಗಳಾದ ಕೆ.ಬಿ.ವಿನು, ಎಂ.ಎಸ್. ಅನೀಶ್, ಎಸ್.ಎಸ್. ಮಹೇಶ್, ರಾಜಾ, ಶಿಬಿ, ಸಂದೀಪ್, ಸಾಬು, ವೆಂಕಟೇಶ್, ಸಂತೋಷ್, ಶಶಿ, ರುದ್ರಪ್ಪ, ರಾಘವ, ಉತ್ಸವ ಸಮಿತಿಯ ಸುದರ್ಶನ್, ಎಂ ಎಂ ಉಮೇಶ್, ಸುರೇಶ್, ಸುನಿಲ್, ವಿಜು ಹಾಗೂ ಭಕ್ತಾದಿಗಳು ಹಾಜರಿದ್ದರು.ವೀರಾಜಪೇಟೆ: ಬೇಟೋಳಿ ರಾಮನಗರದಲ್ಲಿರುವ ಪುದುಪಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಶ್ರೀ ಅಯ್ಯಪ್ಪ ಮಹೋತ್ಸವ ಹಾಗೂ ಮಕರ ಜ್ಯೋತಿ ಪೂಜಾ ಕಾರ್ಯಕ್ರಮವನ್ನು ಶ್ರದ್ಧಾಭಕ್ತಿಯಿಂದ ನೆರವೇರಿಸಲಾಯಿತು. ಶ್ರೀ ಅಯ್ಯಪ್ಪ ಉತ್ಸವದ ಪ್ರಯುಕ್ತ ಬೆಳಿಗ್ಗೆ ದೇವಸ್ಥಾನದಲ್ಲಿ ದೇವತಾ ಪ್ರಾರ್ಥನೆ, ಗಣಪತಿ ಹೋಮ ನಡೆಯಿತು.
ಶ್ರೀ ಅಯ್ಯಪ್ಪ ದೇವಸ್ಥಾನದ ಒಳ ಆವರಣದಲ್ಲಿರುವ ಶ್ರೀ ಮಹಾಗಣಪತಿ, ಶ್ರೀ ನಾಗ, ಶ್ರೀ ವನದುರ್ಗೆ ದೇವರುಗಳಿಗೆ ಪೂಜೆ ಸಲ್ಲಿಸಲಾಯಿತು.
ದೇವಸ್ಥಾನದ ಒಳ ಆವರಣದಲ್ಲಿ ನಿರ್ಮಿಸಲಾಗಿದ್ದ ಹದಿನೆಂಟು ಮೆಟ್ಟಿಲುಗಳುಳ್ಳ ಮಂಟಪದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ಹಾಲಿನ ಅಭಿಷೇಕ, ತುಪ್ಪದ ಅಭಿಷೇಕ, ಸೀಯಾಳದ ಅಭಿಷೇಕ ಹಾಗೂ ಪಂಚಾಮೃತ ಅಭಿಷೇಕ ಸೇವೆ, ಮಹಾ ಮಂಗಳಾರತಿ ನಡೆದು ನಂತರ ಭಕ್ತಾದಿಗಳಿಗೆ ಪ್ರಸಾದ ವಿತರಣೆ ಜರುಗಿತು.
ಸಂಜೆ ಶಬರಿಮಲೆಯಲ್ಲಿ ಮಕರ ಜ್ಯೋತಿ ದರ್ಶನದ ಬಳಿಕ ಮಕರ ಜ್ಯೋತಿ ಪೂಜೆ, ಪಡಿ ಪೂಜೆ ನೆರವೇರಿಸಲಾಯಿತು. ಮಹಿಳಾ ಭಜನಾ ಮಂಡಳಿ ವತಿಯಿಂದ ಭಜನಾವಳಿ, ಸ್ಥಳೀಯ ಶಾಲಾ ಮಕ್ಕಳಿಂದ ಕುಣಿತ ಭಜನೆ, ನೆರೆದ ಭಕ್ತಾದಿಗಳಿಗೆ ಅನ್ನ ಸಂತರ್ಪಣ ಸೇವೆ ಜರುಗಿತು.
ಸ್ಥಳೀಯ ಚಿತ್ರಕಲಾ ಕಲಾವಿದ ಸುನಾದ್ ಭಾರದ್ವಾಜ್, ಶ್ರೀ ಅಯ್ಯಪ್ಪ ಸಭಾಭವನಕ್ಕೆ ರಚಿಸಿದ ಗಣಪತಿ ಹಾಗೂ ಅಯ್ಯಪ್ಪ ಸ್ವಾಮಿ ದೇವರುಗಳ ಚಿತ್ರ ಕಲಾಕೃತಿಗಳನ್ನು ದೇವಸ್ಥಾನದ ಆಡಳಿತ ಮಂಡಳಿಯವರಿಗೆ ಹಸ್ತಾಂತರಿಸಿದರು.
ಶ್ರೀ ಅಯ್ಯಪ್ಪ ಮಹೋತ್ಸವ ಸಂದರ್ಭ ಆಡಳಿತ ಮಂಡಳಿಯ ಉಪಾಧ್ಯಕ್ಷ ಬಿ.ಜಿ. ನಂದ ಬೋರ್ಕರ್, ಗೀತಾ ಬೋರ್ಕರ್ ದಂಪತಿ ಹಾಗೂ ಬೆಂಗಳೂರಿನ ದಾನಿಗಳಾದ ಪದ್ಮನಾಭ ಮಡ್ಕೇಕರ್, ಜಯ ದಂಪತಿ ದೇವಸ್ಥಾನದ ಒಳ ಆವರಣದಲ್ಲಿರುವ ಶ್ರೀ ಮಹಾಗಣಪತಿ ದೇವರಿಗೆ ಬೆಳ್ಳಿಯ ಮುಖಕವಚ ಹಾಗೂ ಶ್ರೀ ನಾಗದೇವರಿಗೆ ಹಿತ್ತಾಳೆಯ ಮುಖ ಕವಚವನ್ನು ಕೊಡುಗೆಯಾಗಿ ನೀಡಿದರು. ನಾಪೋಕ್ಲು: ಮಕರ ಸಂಕ್ರಾAತಿ ಭೂಮಿ ಹಾಗೂ ಗೋವಿಗೂ ಇರುವ ಅವಿನಾಭಾವ ಸಂಬAಧವನ್ನು ಸೂಚಿಸುವ ಹಬ್ಬ ಎಂದು ಚೇರಂಬಾಣೆ ಗೌಡ ಮಹಿಳಾ ಒಕ್ಕೂಟದ ನಿರ್ದೇಶಕಿ ಕೂಡಕಂಡಿ ಸೋನಿ ಸುದೀಪ್ ಹೇಳಿದರು.
ಚೇರಂಬಾಣೆ ಗೌಡ ಸಮಾಜದಲ್ಲಿ ಚೇರಂಬಾಣೆ ಗೌಡ ಮಹಿಳಾ ಒಕ್ಕೂಟ ಆಯೋಜಿಸಿದ್ದ ಮಕರ ಸಂಕ್ರಾAತಿ ಹಬ್ಬದ ಆಚರಣೆ ಹಾಗೂ ಚೇರಂಬಾಣೆ ಗೌಡ ಮಹಿಳಾ ಒಕ್ಕೂಟದ ೨೦೨೬ ನೇ ವರ್ಷದ ಮಾಸಿಕ ಸಭೆಯಲ್ಲಿ ಅವರು ಭಾಗವಹಿಸಿ ಸಂಕ್ರಮಣದ ಆಚರಣೆ ಮತ್ತು ಪದ್ಧತಿ ಪರಂಪರೆ ಬಗ್ಗೆ ಬೆಳಕು ಚೆಲ್ಲಿ ಮಾತನಾಡಿದರು.
ರೈತರಿಗೆ ಇದು ಸುಗ್ಗಿ ಹಬ್ಬ. ದವಸ ಧಾನ್ಯಗಳು ಮನೆ ತುಂಬಿ ಸಂಭ್ರಮಿಸುವ ಕಾಲ. ಆದ್ದರಿಂದ ಮಾನವರಿಗೂ ಪ್ರಾಣಿಗಳಿಗೂ ಯಥೇಚ್ಛವಾಗಿ ದಾನ ನೀಡುತ್ತಾ ವರ್ಷವಿಡೀ ರೈತನಿಗೆ ಹೆಗಲುಕೊಟ್ಟ ಗೋವನ್ನು ಪೂಜಿಸುತ್ತಾ ಅವುಗಳ ದೇಹದಲ್ಲಿ ಕ್ರಿಮಿಕೀಟಗಳು ಬಾಧಿಸದಂತೆ ಅವುಗಳನ್ನು ಕಿಚ್ಚುಹಾಯಿಸಿ ಸಂರಕ್ಷಣೆ ಮಾಡುವಂತಹ ಜಾನಪದ ಹಬ್ಬ ಸಂಕ್ರಾAತಿ ಎಂದರು.
ಮಹಿಳಾ ಒಕ್ಕೂಟದ ಕಾರ್ಯದರ್ಶಿ ಕೇಕಡ ಪೂಜಾ ನಾಗೇಂದ್ರ ಮಾತನಾಡಿ ಮಕರ ಸಂಕ್ರಾAತಿ ಸೂರ್ಯನನ್ನು ಪೂಜಿಸುವ ಹಬ್ಬ ಸೂರ್ಯ ತನ್ನ ಪಥವನ್ನು ಉತ್ತರಾಯಣಕ್ಕೆ ಬದಲಿಸುವ ಪುಣ್ಯಕಾಲ. ಸಂಕ್ರಾAತಿ ಸಮಯದಲ್ಲಿ ಅತಿ ಹೆಚ್ಚು ಚಳಿ ಇರುವ ಕಾರಣ ನಮ್ಮ ದೇಹದಲ್ಲಿ ಎಣ್ಣೆಯ ಅಂಶ ಕಡಿಮೆಯಾಗಿ ಚರ್ಮ ಬಿಗಿಯಾಗಿರುತ್ತದೆ. ಈ ಸಂದರ್ಭದಲ್ಲಿ ನಾವು ಸೇವಿಸುವ ಎಳ್ಳು ಬೆಲ್ಲದಿಂದ ನಮ್ಮ ಚರ್ಮಕ್ಕೆ ಎಣ್ಣೆ ಅಂಶ ಕಬ್ಬಿಣಾಂಶ ಯಥೇಚ್ಛವಾಗಿ ದೊರಕಿ ಚರ್ಮ ಕಾಂತಿಗೊಳ್ಳುತ್ತದೆ. ಆರೋಗ್ಯ ವೃದ್ಧಿಯಾಗುತ್ತದೆ ಎಂದರು. ಇದಲ್ಲದೆ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸುವುದರೊಂದಿಗೆ ಸೂರ್ಯ ದೇವರಿಗೆ ಪ್ರಿಯವಾದ ಎಳ್ಳನ್ನು ಅರ್ಪಿಸಲಾಗುವುದು ಎಂದರು.
ಚೇರಂಬಾಣೆ ಗೌಡ ಮಹಿಳಾ ಒಕ್ಕೂಟದ ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್ ಅಧ್ಯಕ್ಷತೆ ವಹಿಸಿ ದಿನದ ಮಹತ್ವದ ಬಗ್ಗೆ ಮಾತನಾಡಿದರು. ಉಪಾಧ್ಯಕ್ಷೆ ಕೂರನ ಸುಶೀಲ ಅಪ್ಪಾಜಿ ಕೋಶಾಧಿಕಾರಿ ಕೊಡಪಾಲು ತೀರ್ಥ ಗಣಪತಿ , ಬೈಮನ ಜ್ಯೋತಿ ತಿಮ್ಮಯ್ಯ , ನಿವೃತ್ತ ಶಿಕ್ಷಕಿ ಪಾಣತ್ತಲೆ ತಾರಾಮಣಿ ಸೇರಿದಂತೆ ಹಲವರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಸಮಿತಿ ಸದಸ್ಯರು ಸಂಕ್ರಾAತಿ ಕುರಿತ ಸುಗ್ಗಿ ಹಾಡುಗಳನ್ನು ಹಾಡಿ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.ವೀರಾಜಪೇಟೆ: ಮಲೆತಿರಿಕೆ ಬೆಟ್ಟದಲ್ಲಿನ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಸಂಕ್ರಾAತಿ ಹಬ್ಬದ ಅಂಗವಾಗಿ ಅಯ್ಯಪ್ಪ ಸ್ವಾಮಿಯ ಪೂಜ್ಯೋತ್ಸವ ಕಾರ್ಯಕ್ರಮ ಶ್ರದ್ಧಾಭಕ್ತಿಯಿಂದ ನೆರವೇರಿತು. ಅಯ್ಯಪ್ಪ ಸ್ವಾಮಿಗೆ ಸಂಕ್ರಾAತಿ ಸಂಕ್ರಮಣದ ಅಂಗವಾಗಿ ಅಷ್ಟ ಅಭಿಷೇಕ, ಮಹಾಪೂಜೆ, ಮಹಾಮಂಗಳಾರತಿ ನಂತರ ಪ್ರಸಾದ ವಿತರಣೆ ನಡೆಯಿತು. ಈ ಸಂದರ್ಭ ಪಟ್ಟಣ ವ್ಯಾಪ್ತಿಯ ನೂರಾರು ಭಕ್ತರು ಆಗಮಿಸಿ ಪೂಜಾ ಕೈಂಕರ್ಯದಲ್ಲಿ ಪಾಲ್ಗೊಂಡರು.ಕೂಡಿಗೆ: ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೂಡ್ಲೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಗ್ರಾಮೀಣ ಜನಪದ ಸೊಗಡಿನ ಪ್ರತೀಕವಾದ ರೈತರ ಸುಗ್ಗಿ ಹಬ್ಬವಾದ ಸಂಕ್ರಾAತಿ ಹಬ್ಬವನ್ನು ಸಂಭ್ರಮ, ಸಡಗರದಿಂದ ಆಚರಿಸಲಾಯಿತು. ಸಂಕ್ರಾAತಿ ಹಬ್ಬದ ಪೂಜೆ ನೆರವೇರಿಸುವ ಮೂಲಕ ಶಾಲೆಯ ವಿದ್ಯಾರ್ಥಿಗಳು ಗ್ರಾಮೀಣ ಸೊಗಡಿನ ಸಂಕ್ರಾAತಿ ಹಬ್ಬದ ಸಂಸ್ಕೃತಿ ಬಿಂಬಿಸುವ ಮೂಲಕ ಕಾರ್ಯಕ್ರಮಕ್ಕೆ ಮೆರುಗು ನೀಡಿದರು.
ಅಲಂಕೃತ ಎತ್ತಿನ ಗಾಡಿ ಜತೆಗೆ ಎತ್ತುಗಳೊಂದಿಗೆ ಕೃಷಿ ಸಲಕರಣೆಗಳು ಮತ್ತು ಧಾನ್ಯಗಳ ರಾಶಿ ಹಾಗೂ ಗೋ ಪೂಜೆ ಮಾಡಿ ವಿದ್ಯಾರ್ಥಿಗಳು ಖುಷಿಪಟ್ಟು ಅನ್ನದಾತರ ಅರಿವು ಮೂಡಿಸುವ ಸುಗ್ಗಿ ಸಂಭ್ರಮದಲ್ಲಿ ಭಾಗಿಯಾದರು. ವಿದ್ಯಾರ್ಥಿಗಳು ರಂಗೋಲಿ ಚಿತ್ತಾರದೊಂದಿಗೆ ಎಳ್ಳು ಬೆಲ್ಲ ಕಬ್ಬು, ಹಣ್ಣು ಹಂಚಿಕೆ, ಸಾಂಪ್ರದಾಯಿಕ ಉಡುಪು, ಕುಣಿತದೊಂದಿಗೆ ಸಂಭ್ರಮಿಸಿದರು. ಶಾಲಾ ಆವರಣದಲ್ಲಿ ನಡೆದ ಸಂಕ್ರಾAತಿ ಸಂಭ್ರಮ ಕಳೆಗಟ್ಟಿತ್ತು. ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವ ರೀತಿ ಓದುವ ವಿದ್ಯಾರ್ಥಿಗಳಲ್ಲಿ ಹಬ್ಬ ಹರಿದಿನ, ಸಂಪ್ರದಾಯ, ಸಂಸ್ಕೃತಿಯ ಬಗ್ಗೆ ಜಾಗೃತಿ ಮೂಡಿಸಲು ಶಾಲೆಯ ವಿದ್ಯಾರ್ಥಿ ಸಂಘ, ರಾಷ್ಟಿçÃಯ ಸೇವಾ ಯೋಜನೆ (ಎನ್.ಎಸ್.ಎಸ್.) ಘಟಕ ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಘಟಕದಿಂದ ಆಯೋಜಿಸಲಾಗಿದ್ದ ಈ ಕಾರ್ಯಕ್ರಮ ಮಕ್ಕಳು ಮತ್ತು ಗ್ರಾಮಸ್ಥರ ಮನಸೂರೆಗೊಂಡಿತು. ಸಂಕ್ರಾAತಿ ಹಬ್ಬದ ಕುರಿತು ಮಾತನಾಡಿದ ಶಾಲಾ ಮುಖ್ಯೋಪಾಧ್ಯಾಯ ಟಿ.ಜಿ.ಪ್ರೇಮಕುಮಾರ್, ಬೆಳೆಗಳು ರೈತರ ಕೈ ಸೇರಿದ ಖಷಿಯಲ್ಲಿ ಎಲ್ಲರೂ ಸಾಮೂಹಿಕವಾಗಿ ತಮ್ಮ ತಮ್ಮ ಹೊಲ, ಗದ್ದೆಗಳಲ್ಲಿ ನವ ಧಾನ್ಯಗಳನ್ನು ರಾಶಿ ಹಾಕಿ ಪೂಜೆ ಮಾಡುತ್ತಿದ್ದು, ಇದನ್ನು ಯುವ ಪೀಳಿಗೆಗೆ ಪರಿಚಯಿಸಿ ಮುಂದುವರೆಸಿಕೊAಡು ಹೋಗುವಂತೆ ಪ್ರೇರೇಪಿಸಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು. ಸಂಕ್ರಾAತಿ ಹಬ್ಬದ ಮಹತ್ವ ಕುರಿತು ಮಾತನಾಡಿದ ಕನ್ನಡ ಭಾಷಾ ಶಿಕ್ಷಕ ಕೆ. ಗೋಪಾಲಕೃಷ್ಣ, ಸಂಕ್ರಾAತಿ ಎಂದರೆ ರೈತರಿಗೆ ಸುಗ್ಗಿಯ ಹಬ್ಬ. ವರ್ಷವಿಡೀ ಕಷ್ಟಪಟ್ಟು ದುಡಿಯುವ ರೈತರು ಸಂಕ್ರಾAತಿ ಬಂದರೆ ಸಾಕು ಬೆಳೆದ ಬೆಳೆ, ಜಾನುವಾರು, ಕುಟುಂಬ, ಬಂಧು-ಬಳಗದ ಜೊತೆ ಸುಗ್ಗಿಯನ್ನು ಹುಗ್ಗಿಯನ್ನಾಗಿ ಸಂಭ್ರಮಿಸುವ ಕಾಲವಿದು. ಇದು ಗ್ರಾಮೀಣ ಜನಪದ ಸಂಸ್ಕೃತಿಯ ಪ್ರತೀಕವಾಗಿದೆ ಎಂದರು. ನವಧಾನ್ಯಗಳ ರಾಶಿಗೆ ಪೂಜೆ ಸಲ್ಲಿಸಿದ ಗ್ರಾಮದ ಹಿರಿಯ ಕೃಷಿಕ ಕೆ.ಎಸ್.ರಾಜಾಚಾರಿ ಮಾತನಾಡಿ, ಸಂಕ್ರಾAತಿ ಹಬ್ಬವನ್ನು ಹಳ್ಳಿಗಳಲ್ಲಿ ಸಾಂಪ್ರದಾಯಿಕವಾಗಿ ಹಿಂದಿನಿAದಲೂ ಆಚರಿಸಿಕೊಂಡು ಬರಲಾಗುತ್ತಿದೆ ಎಂದರು. ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಸಂಘಟನಾ ಕಾರ್ಯದರ್ಶಿ ದಯಾನಂದ ಪ್ರಕಾಶ್, ಸಂಕ್ರಾAತಿ ಕುರಿತು ಮಾತನಾಡಿದರು.
ಶಿಕ್ಷಕರಾದ ಕೆ. ಗೋಪಾಲಕೃಷ್ಣ, ಬಿ.ಡಿ.ರಮ್ಯ, ಎಸ್.ಎಂ. ಗೀತಾ, ಅನ್ಸಿಲಾ ರೇಖಾ, ಎನ್ನೆಸ್ಸೆಸ್ ಅಧಿಕಾರಿ ಕೆ.ಟಿ.ಸೌಮ್ಯ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಎಚ್.ಎಸ್.ಸುಜಾತ, ಕಛೇರಿ ಸಿಬ್ಬಂದಿ ಎಂ.ಉಷಾ, ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸಂಕ್ರಾAತಿ ಸಂಭ್ರಮಕ್ಕೆ ಸಾಕ್ಷಿಯಾದರು. ಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಪರಸ್ಪರ ಎಳ್ಳು ಬೆಲ್ಲ ಹಂಚಿ ಕುಣಿದು ಸಂಭ್ರಮಿಸಿದರು. ಮಕ್ಕಳ ಸಂಭ್ರಮಕ್ಕೆ ಶಿಕ್ಷಕರು ಸಾಥ್ ನೀಡಿದರು. ನಂತರ ಕೂಡ್ಲೂರು ಗ್ರಾಮದ ಕೃಷಿಕ ಕೆ.ಆರ್. ನಾಗರಾಜ್ ಅವರ ಎತ್ತಿನ ಗಾಡಿಗೆ ಏರಿದ ವಿದ್ಯಾರ್ಥಿಗಳು ಗಾಡಿಯಲ್ಲಿ ಸಂಚರಿಸಿ ಸಂತಸಪಟ್ಟರು. ಕೃಷಿಕ ದಂಪತಿ ಕೆ.ಆರ್.ನಾಗರಾಜ್ ಮತ್ತು ರಜನಿ ಹಾಗೂ ಅವರ ಮಗಳು ಕೆ.ಎನ್. ಪುಣ್ಯ, ಸಂಕ್ರಾAತಿಯ ಹಬ್ಬದ ಆಚರಣೆಗಳನ್ನು ನಡೆಸಿಕೊಟ್ಟರು. ಶಾಲಾ ಅಂಗಳದಲ್ಲಿ ತೋಳೂರು ಶೆಟ್ಟಳ್ಳಿ ಡಾ ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯ ವಿದ್ಯಾರ್ಥಿನಿ ಕೆ.ಎನ್. ಪುಣ್ಯ, ಬಿಡಿಸಿದ್ದ ಸಂಕ್ರಾAತಿ ಹಬ್ಬ ಪ್ರತಿಬಿಂಬಿಸುವ ಬಣ್ಣಬಣ್ಣದ ರಂಗೋಲಿ ಚಿತ್ರಗಮನ ಸೆಳೆಯಿತು. ಸಂಕ್ರಾAತಿ ಹಬ್ಬವನ್ನು ಗ್ರಾಮೀಷ ಪ್ರದೇಶದಲ್ಲಿ ರೈತರು ತಾವು ವರ್ಷ ಪೂರ್ತಿ ವ್ಯವಸಾಯ ಮಾಡಿ ಬೆಳೆದ ಬೆಳೆಗಳನ್ನು ರಾಶಿ ಹಾಕಿ ಅವುಗಳಿಗೆ ಪೂಜೆ ಸಲ್ಲಿಸಿ ಸುಗ್ಗಿ ಹಬ್ಬವಾಗಿ ಆಚರಿಸುವುದು, ರೈತರಿಗೆ ವ್ಯವಸಾಯದಲ್ಲಿ ಪೂರಕವಾಗಿ ಸಹಕಾರ ನೀಡಿದ ವ್ಯವಸಾಯ ಸಲಕರಣೆಗಳು, ಹಸು, ಕರು, ದನಗಳನ್ನು ಪೂಜಿಸುವುದು ಮೊದಲಿನಿಂದಲೂ ನಡೆದುಕೊಂಡು ಬಂದ ಪದ್ಧತಿಯಾಗಿದೆ.
ಮಡಿಕೇರಿ: ಇಲ್ಲಿಗೆ ಸಮೀಪದ ಹೆಬ್ಬಾಲೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಸಂಕ್ರಾAತಿ ಸಂಭ್ರಮವನ್ನು ಸಡಗರದಿಂದ ಆಚರಿಸಲಾಯಿತು. ಮಕ್ಕಳ ಮನಸ್ಸಿನಲ್ಲಿ ಭಾರತೀಯ ಹಬ್ಬಗಳ ಬಗ್ಗೆ ಅರ್ಥ ಮತ್ತು ವೈಜ್ಞಾನಿಕ ಹಿನ್ನೆಲೆ ಬೇರೂರುವಂತೆ ಕಾರ್ಯಕ್ರಮವನ್ನು ರೂಪಿಸಲಾಗಿತ್ತು.
ಶಾಲಾ ಆವರಣ ಮತ್ತು ಮೈದಾನದ ಆವರಣವನ್ನು ಹಬ್ಬದ ವಾತಾವರಣ ಮೂಡುವಂತೆ ಅಲಂಕರಿಸಲಾಗಿತ್ತು. ಎಳ್ಳು- ಬೆಲ್ಲ -ಭತ್ತ- ಕಬ್ಬು ಗೆಣಸು. ಅವರೆ ಕಾಳು. ವಿವಿಧ ರಾಜ್ಯಗಳ ವಿವಿಧ ಬಗೆಗಳ ತಿನಿಸುಗಳನ್ನು ಪ್ರದರ್ಶಿಸುವ ಮೂಲಕ ಸುಗ್ಗಿ ಹಬ್ಬದ ಮಹತ್ವವನ್ನು ಎತ್ತಿ ಹಿಡಿದು ಮಕ್ಕಳಿಗೆ ಪರಿಚಯಿಸಲಾಯಿತು. ಕಾರ್ಯಕ್ರಮದ ಮೊದಲಿಗೆ ಶಾಲೆಯ ಹಿರಿಯ ಶಿಕ್ಷಕಿಯಾದ ಸಿ.ಎಂ. ಬಬಿತ ಸ್ವಾಗತಿಸಿದರು.
ಶಾಲಾ ಮುಖ್ಯ ಶಿಕ್ಷಕ ಎಚ್.ಎಂ. ವೆಂಕಟೇಶ ಪ್ರಾಸ್ತಾವಿಕವಾಗಿ ದಿನದ ಮಹತ್ವದ ಕುರಿತು ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಎಸ್ಡಿಎಂಸಿ ಅಧ್ಯಕ್ಷರಾದ ಪ್ರದೀಪ್ ವಹಿಸಿದ್ದರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಊರಿನ ಹಿರಿಯರಾದ ನಿವೃತ್ತ ಇಂಜಿನಿಯರ್ ಜಿ.ಎಲ್. ರಾಮಪ್ಪ ಮಾತನಾಡಿ, ಸಂಕ್ರಾAತಿ ಹಬ್ಬವು ಪ್ರಕೃತಿಗೆ ಕೃತಜ್ಞತೆ ಸಲ್ಲಿಸುವ ಹಬ್ಬವಾಗಿದೆ ಎಳ್ಳು ಬೆಲ್ಲದಂತೆ ಜೀವನದಲ್ಲಿ ಸಿಹಿ ಕಹಿ ಎರಡನ್ನು ಸಮಾನವಾಗಿ ಸ್ವೀಕರಿಸಿ ಪರಸ್ಪರ ಒಳ್ಳೆಯ ಮಾತನಾಡುವ ಸಂದೇಶವನ್ನು ಸಂಕ್ರಾAತಿ ನಮಗೆ ನೀಡುತ್ತದೆ ಎಂದು ಹೇಳಿದರು.
ಇನ್ನೋರ್ವ ಅತಿಥಿ ಸಂಯುಕ್ತ ಪದವಿಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ವೆಂಕಟ ನಾಯಕ್ ಮಾತನಾಡಿ ಹಬ್ಬಗಳ ಆಚರಣೆಯಿಂದ ಮಕ್ಕಳಲ್ಲಿ ಸಂಸ್ಕಾರ ಸಹಬಾಳ್ವೆ ಹಾಗೂ ಪ್ರಕೃತಿ ಸಂರಕ್ಷಣೆಯ ಅರಿವು ಹೆಚ್ಚುತ್ತದೆ ಎಂದರು.
ವೇದಿಕೆಯಲ್ಲಿ ಊರಿನ ಹಿರಿಯರಾದ ನಿಂಗಪ್ಪ, ನಿವೃತ್ತ ಶಿಕ್ಷಕರಾದ ಪುಟ್ಟರಾಜು, ರಮೇಶ, ಸಂಯುಕ್ತ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಬಸವರಾಜ್ ಶೆಟ್ಟಿ, ಶಿಕ್ಷಕಿ ಕವಿತಾ, ಶಿಕ್ಷಣ ಸಂಯೋಜಕಿ ರಾಜಕುಮಾರಿ, ಸಿಆರ್ಪಿ ಆದರ್ಶ, ಪ್ರಾಥಮಿಕ ಶಾಲೆಯ ಶಿಕ್ಷಕಿಯಾದ ಸಿ.ಎಂ. ಬಬಿತ ದೈಹಿಕ ಶಿಕ್ಷಣ ಶಿಕ್ಷಕಿ ವಂಜಮ್ಮ, ಶಿಕ್ಷಕರಾದ ಶಿವಾನಂದ, ರಮ್ಯಾ ಕೆಎಸ್., ಅತಿಥಿ ಶಿಕ್ಷಕರಾದ ಪ್ರತಿಮ, ಪ್ರ. ಶಿಕ್ಷಣಾರ್ಥಿ ರಕ್ಷಿತಾ, ಅಡುಗೆಯವರಾದ ವಿನೀತ ಮತ್ತು ಮಂಜಮ್ಮ, ಪೋಷಕರು ಮತ್ತು ಶಾಲಾ ಮಕ್ಕಳು ಹಾಜರಿದ್ದರು.ಸುಂಟಿಕೊಪ್ಪ: ಸುಂಟಿಕೊಪ್ಪ ಪೊಂಗಲ್ ಸಮಿತಿ ವತಿಯಿಂದ ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಸಡಗರ ಮಕರ ಸಂಕ್ರಾAತಿ ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಸುಂಟಿಕೊಪ್ಪ ಪೊಂಗಲ್ ಸಮಿತಿ ವತಿಯಿಂದ ೨೬ನೇ ವರ್ಷದ ಆಚರಣೆಯ ಅಂಗವಾಗಿ ಬೆಳಿಗ್ಗೆ ಮಧುರಮ್ಮ ಬಡಾವಣೆಯಲ್ಲಿರುವ ವೃಕ್ಷೆÆÃದ್ಭವ ಗಣಪತಿ ದೇವಾಲಯದಲ್ಲಿ ಮಹಿಳೆಯರು, ಯುವತಿಯರು ಪೂರ್ಣಕುಂಭ ಕಳಸವನ್ನು ಇರಿಸಿ ವಿಶೇಷ ಪೂಜೆಯನ್ನು ನೆರವೇರಿಸಿದರು. ನಂತರ ದೇವಾಲಯದ ಟ್ರಸ್ಟ್ ಸಮಿತಿ ಕಾರ್ಯದರ್ಶಿ ಎ. ಲೋಕೇಶ್ ಕುಮಾರ್ ಪೂರ್ಣಕುಂಭ ಕಳಸವನ್ನು ಹೊತ್ತು ಕೊಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.
ಶ್ರೀ ಚಾಮುಂಡೇಶ್ವರಿ ದೇವಿಯ ಮೂರ್ತಿಯನ್ನು ಅಲಂಕೃತ ಭವ್ಯ ಮಂಟಪದಲ್ಲಿ ಇರಿಸಿ ಮುಖ್ಯ ಬೀದಿಗಳ ಮೂಲಕ ಮೆರವಣಿಗೆ ನಡೆಸಿ ರಾಮ ಮಂದಿರ, ಅಯ್ಯಪ್ಪ ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಿ ನಂತರ ಶ್ರೀ ಚಾಮುಂಡೇಶ್ವರಿ ಶ್ರೀ ಮುತ್ತಪ್ಪದೇವಾಲಯದಲ್ಲಿ ಕಳಸÀವನ್ನಿಟ್ಟು ಪೂಜೆ ನಡೆಸಿ ದೇವಿಗೆ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು. ಭಕ್ತರು ದೇವಾಲಯದ ಆವರಣದಲ್ಲಿ ಪೊಂಗಲ್ ಮಾಡಿ ವಿತರಿಸಿದರು. ಮಧ್ಯಾಹ್ನ ನೂರಾರು ಸಂಖ್ಯೆಯಲ್ಲಿ ನೆರೆದಿದ್ದ ಭಕ್ತರಿಗೆ ಅನ್ನಸಂತರ್ಪಣೆ ನೆರವೇರಿತು. ಸದಸ್ಯರಾದ ಸುರೇಶ ಎಸ್, ಸುಂದರೇಶ, ಎಸ್, ರಾಜಾ .ಎಂ, ಗಣೇಶ ಎಂ, ರಾಜ, ಜಗದೀಶ, ವೆಂಕಟೇಶ, ಗಣೇಶ, ವಿಘ್ನೇಶ್ ನಿಖಿಲ್, ಏಳುಮಲೈ ಹಾಗೂ ಇತರರು ಹಾಜರಿದ್ದರು.ಸಿದ್ದಾಪುರ: ನೆಲ್ಯಹುದಿಕೇರಿ ಗ್ರಾಮದ ನಲ್ವತ್ತೇಕರೆ ಬರಡಿಯಲ್ಲಿರುವ ಶ್ರೀ ಕಾಡಯ್ಯಪ್ಪ ಬನದಲ್ಲಿ ಮಕರ ಸಂಕ್ರಾAತಿ ಪ್ರಯುಕ್ತ ವಿಶೇಷ ಪೂಜೆ ಮತ್ತು ದೀಪಾಲಂಕಾರ ನಡೆಯಿತು. ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಬರಡಿ, ನಲ್ವತ್ತೇಕರೆ ಗ್ರಾಮದ ಸುತ್ತಮುತ್ತಲಿನ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮಕ್ಕೆ ಭಾಗವಹಿಸಿದ್ದರು. ಪ್ರಮುಖರಾದ ಅನಿಲ್ ಕುಮಾರ್ ಇನ್ನಿತರರು ಹಾಜರಿದ್ದರು.ಮಡಿಕೇರಿ : ಕತ್ತಲೆಕಾಡುವಿನ ಶ್ರೀ ವಿನಾಯಕ ಸೇವಾ ಟ್ರಸ್ಟ್ ವತಿಯಿಂದ ಸಂಕ್ರಾAತಿ ದೀಪಾರಾಧನೆ ಕಾರ್ಯಕ್ರಮ ಸಂಭ್ರಮದಿAದ ಜರುಗಿತು.
ಟ್ರಸ್ಟ್ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಹಿಳೆಯರು ಸಾಲು ಹಣತೆ ಬೆಳಗಿದರು. ಟ್ರಸ್ಟ್ನ ಭಜನಾ ತಂಡದ ಸದಸ್ಯರು ಭಜನೆ ಮೂಲಕ ಮೆರುಗು ನೀಡಿದರು. ಸಾರ್ವಜನಿಕರು ಹಾಗೂ ದಾನಿಗಳ ಸಹಕಾರದಿಂದ ನೂತನವಾಗಿ ಖರೀದಿಸಲಾದ ಧ್ವನಿವರ್ಧಕವನ್ನು ಕಲಾವಿದ ಸುಭಾಷ್ ಲೋಕಾರ್ಪಣೆಗೊಳಿಸಿದರು. ಈ ವೇಳೆ ಮಾತನಾಡಿದ ಟ್ರಸ್ಟ್ ಅಧ್ಯಕ್ಷ ಹೊನ್ನಪ್ಪ ಆಚಾರ್ಯ, ಭಜನೆ ಹಾಗೂ ಇನ್ನಿತರೆ ಕಾರ್ಯಕ್ರಮಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ೫೩ ಸಾವಿರ ರೂ. ವೆಚ್ಚದಲ್ಲಿ ಧ್ವನಿವರ್ಧಕ ಖರೀದಿಸಲಾಗಿದೆ. ಇದಕ್ಕೆ ಗ್ರಾಮದ ಸಾರ್ವಜನಿಕರು, ದಾನಿಗಳು ನೆರವಾಗಿದ್ದಾರೆ ಎಂದರು. ಹಿಂದೂಗಳ ಎಲ್ಲಾ ಹಬ್ಬ ಹರಿದಿನಗಳನ್ನು ಟ್ರಸ್ಟ್ ವತಿಯಿಂದ ಸಾರ್ವಜನಿಕವಾಗಿ ಆಚರಿಸಿ ನಮ್ಮ ಸಂಸ್ಕೃತಿ, ಆಚರಣೆಗಳನ್ನು ಈಗಿನ ತಲೆಮಾರಿಗೆ ಪರಿಚಯಿಸುವ ಕಾರ್ಯವೂ ಆಗುತ್ತಿದೆ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಮಡಿಕೇರಿಯ ಶ್ರೀ ರಾಮಾಂಜನೇಯ ಭಜನಾ ತಂಡದ ಕುಮಾರ್ ಮಾತನಾಡಿ, ವಿನಾಯಕ ಸೇವಾ ಟ್ರಸ್ಟ್ ಭಜನೆ ಮೂಲಕ ಎಲ್ಲರನ್ನೂ ಒಂದುಗೂಡಿಸುವ ಕಾರ್ಯ ಮಾಡುತ್ತಿದೆ. ನೂತನವಾಗಿ ಖರೀದಿಸಿರುವ ಧ್ವನಿವರ್ಧಕದ ಮೂಲಕ ಊರಿನ ಧ್ವನಿ