ಮಡಿಕೇರಿ, ಜ. ೧೬; ನಗರದ ಐತಿಹಾಸಿಕ ಹಿನ್ನೆಲೆಯಿರುವ ಶ್ರೀ ಓಂಕಾರೇಶ್ವರ ಸನ್ನಿಧಿಯ ಶಿವಲಿಂಗಕ್ಕೆ ಬೆಳ್ಳಿಯ ನಾಗರೂಪವನ್ನು ಭಕ್ತರು ಸಮರ್ಪಣೆ ಮಾಡಿದ್ದಾರೆ. ಈ ಹಿಂದೆ ಚೆನ್ನೆöÊ ಮೂಲದ ಭಕ್ತರಾದ ರಮೇಶ್ ಪ್ರಕಾಶ್ ಹಾಗೂ ಕುಟುಂಬಸ್ಥರು ಶಿವಲಿಂಗಕ್ಕೆ ಬೆಳ್ಳಿಯ ಕವಚ ಅರ್ಪಿಸಿದ್ದರು. ಇದೀಗ ಮತ್ತೆ ಇಂದು ಸುಮಾರು ೭೦೦ಗ್ರಾಂ ತೂಕದ ಬೆಳ್ಳಿಯ ನಾಗರೂಪವನ್ನು ಸಮರ್ಪಣೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ದೇವಸ್ಥಾನ ಸಮಿತಿಯ ಅಧ್ಯಕ್ಷ ಚುಮ್ಮಿ ದೇವಯ್ಯ, ಸದಸ್ಯ ಅಂಬೆಕಲ್ ಕುಶಾಲಪ್ಪ, ಸಂತೋಷ್ ಭಟ್‌ಕಾರ್ಯನಿರ್ವಹಣಾ ಅಧಿಕಾರಿ ದೇವರಾಜ್, ಸಿಬ್ಬಂದಿ ವರ್ಗ, ಭಕ್ತರು, ಅರ್ಚಕ ವರ್ಗದವರು ಇದ್ದರು.