ಪೊನ್ನಂಪೇಟೆ, ಜ. ೧೬: ಪೊನ್ನಂಪೇಟೆ ಅರಣ್ಯ ವಲಯದ ವ್ಯಾಪ್ತಿಗೆ ಒಳಪಡುವ ಚೀನಿವಾಡ, ಕೊಂಗಣ, ಬಿ. ಶೆಟ್ಟಿಗೇರಿ, ಕುಂದ, ಈಚೂರು, ಮುಗುಟಗೇರಿ, ಹಳ್ಳಿಗಟ್ಟು ವ್ಯಾಪ್ತಿಯಲ್ಲಿ ಕಾಡಾನೆಗಳ ಹಿಂಡು ಓಡಾಡುತ್ತಿದ್ದು, ಸುತ್ತಮುತ್ತಲಿನ ಕೃಷಿ ಜಮೀನುಗಳಿಗೆ ದಾಳಿ ಮಾಡಿ ಕೃಷಿ ಫಸಲನ್ನು ನಾಶಗೊಳಿಸುತ್ತಿವೆ. ಆದುದರಿಂದ ಹೆಚ್ಚಿನ ಅನಾಹುತ ಸಂಭವಿಸುವ ಮುನ್ನ ಕಾಡಾನೆಗಳ ಹಿಂಡನ್ನು ಮರಳಿ ಕಾಡಿಗೆ ಅಟ್ಟುವ ಕಾರ್ಯಾಚರಣೆಯನ್ನು ತಾ. ೧೮ ರಂದು ಬೆಳಗ್ಗೆ ೯ ಗಂಟೆಯಿAದ ಸಂಜೆ ೬.೩೦ ರವರೆಗೆ ನಡೆಸಲಾಗುತ್ತದೆ. ತೋಟದ ಮಾಲೀಕರು ಮತ್ತು ಕಾರ್ಮಿಕರು ತಮ್ಮ ಕೆಲಸ ಕಾರ್ಯಗಳನ್ನು ನಿಲ್ಲಿಸುವಂತೆ ಹಾಗೂ ಸಾರ್ವಜನಿಕರು, ಗ್ರಾಮಸ್ಥರು, ಬೆಳೆಗಾರರು ಎಚ್ಚರಿಕೆಯಿಂದ ಇದ್ದು, ಕಾರ್ಯಾಚರಣೆ ಸಂದರ್ಭ ಪಟಾಕಿ ಸಿಡಿಸದೇ ಇಲಾಖೆಯೊಂದಿಗೆ ಸಹಕರಿಸುವಂತೆ ಪೊನ್ನಂಪೇಟೆ ವಲಯ ಅರಣ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.