ಮಡಿಕೇರಿ, ಜ. ೧೬: ವಾಹನವೊಂದರಲ್ಲಿ ಭತ್ತದ ಹೊಟ್ಟಿನಡಿ ಬೀಟಿಮರದ ನಾಟಾಗಳನ್ನು ಸಾಗಾಟ ಮಾಡುತ್ತಿದ್ದ ಪ್ರಕರಣವೊಂದನ್ನು ಸಂಪಾಜೆ ಅರಣ್ಯ ತನಿಖಾ ಠಾಣೆ ಸಿಬ್ಬಂದಿ ಪತ್ತೆಹಚ್ಚಿದ್ದಾರೆ. ಕೃತ್ಯಕ್ಕೆ ಸಂಬAಧಿಸಿದAತೆ ಓರ್ವನನ್ನು ಬಂಧಿಸಲಾಗಿದ್ದು, ವಾಹನ ವಶಪಡಿಸಿಕೊಳ್ಳಲಾಗಿದೆ. ಮತ್ತೋರ್ವ ಆರೋಪಿ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಕಾರ್ಯಾಚರಣೆ ನಡೆಸಲಾಗುತ್ತಿದೆ. ತಾ. ೧೫ ರ ಸಂಜೆ ಸಂಪಾಜೆ ವ್ಯಾಪ್ತಿಯಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ಸಂದರ್ಭ ಸಂಪಾಜೆ ಅರಣ್ಯ ತನಿಖಾ ಠಾಣೆಯ ಉಪ ವಲಯ ಅರಣ್ಯಾಧಿಕಾರಿ ಮತ್ತು ಸಿಬ್ಬಂದಿ ಈ ಪ್ರಕರಣ ಪತ್ತೆಹಚ್ಚಿದ್ದಾರೆ.
ವಾಹನ (ಕೆಎ-೧೩-ಎಎ-೦೭೬೯) ದಲ್ಲಿ ಭತ್ತದ ಹೊಟ್ಟು ಚೀಲ ಹಾಕಿ ಅದರ ಕೆಳಗೆ ಬೀಟಿ ಮರದ ನಾಟಾಗಳನ್ನು ಸಾಗಿಸಲಾಗುತ್ತಿತ್ತು. ಆರೋಪಿ ವಾಹನ ಚಾಲಕ, ಬಲ್ಲಮಾವಟಿಯ ಬಿ.ಎಂ. ಸಜನ್ ಬಂಧಿತನಾಗಿದ್ದಾನೆ. ಪ್ರಮುಖ ಆರೋಪಿ ಸಿದ್ದಾಪುರದ ಅಬ್ದುಲ್ ಅಬ್ಬುಟ್ಟಿ ತಲೆಮರೆಸಿಕೊಂಡಿದ್ದಾನೆ. ವಾಹನ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ಡಿನ್ಸಿ ದೇಚಮ್ಮ, ಉಪವಲಯ ಅರಣ್ಯಾಧಿಕಾರಿ ಸಂದೀಪ್ ಗೌಡ, ಸಿಬ್ಬಂದಿಗಳಾದ ಡಿ. ಕಾರ್ತಿಕ್, ಎಸ್. ನಾಗರಾಜ್, ಸಿದ್ದರಾಜ್ ನಾಟಿಕರ್, ಭುವನೇಶ್ವರ್ ಹಾಗೂ ರಾಜೇಶ್ ಪಾಲ್ಗೊಂಡಿದ್ದರು.