ಶನಿವಾರಸಂತೆ, ಜ. ೧೬: ಬೆಂಬಳೂರು ಗ್ರಾಮದ ಶ್ರೀಬಾಣಂತಮ್ಮ ದೇವಿ-ಕುಮಾರಲಿಂಗೇಶ್ವರ ಸ್ವಾಮಿ ಜಾತ್ರೋತ್ಸವದ ಹಾಗೂ ಪೂಜಾ ಕಾರ್ಯಕ್ರಮದಲ್ಲಿ ಕೊಡಗು-ಮೈಸೂರು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪಾಲ್ಗೊಂಡರು.
ನಂತರ ನಡೆದ ಸಭೆಯಲ್ಲಿ ಮಾತನಾಡಿ, ಕೇಂದ್ರ ಸರ್ಕಾರ ಗ್ರಾಮೀಣ ಸಂಸ್ಕೃತಿ ಹಾಗೂ ವಾತಾವರಣವನ್ನು ಉಳಿಸುವ ಜೊತೆಯಲ್ಲಿ ಆಧುನಿಕ ಕಾಲದ ಸೌಲಭ್ಯವನ್ನು ಅಭಿವೃದ್ಧಿ ಮಾಡುವ ಗುರಿಯನ್ನು ಇಟ್ಟುಕೊಂಡಿದೆ. ಭಾರತದ ಸಮಗ್ರ ಸಂಪೂರ್ಣ ಆರ್ಥಿಕ ಅಭಿವೃದ್ಧಿ ಯೋಜನೆ ಮೂಲಕ ಗ್ರಾಮೀಣ ಸಂಸ್ಕೃಯನ್ನು ಉಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ರಾಷ್ಟಿçÃಯ ಆಕಾಂಕ್ಷೆಯನ್ನಾಗಿ ಇಟ್ಟುಕೊಂಡಿದ್ದು, ಈ ದಿಸೆಯಲ್ಲಿ ಪ್ರತ್ಯೇಕ ಕಾಯಿದೆಯನ್ನು ರೂಪಿಸಿದೆ ಎಂದರು.
ಜಾತ್ರೋತ್ಸವದ ಮೂಲಕ ಸಂಸ್ಕೃತಿಯನ್ನು ಉಳಿಸಲು ಗ್ರಾಮೀಣ ಭಾಗದ ಜನರು ಪ್ರಯತ್ನಿಸುತ್ತಿರುವುದು ಶ್ಲಾಘನೀಯ. ಇದೇ ರೀತಿಯಲ್ಲಿ ಗ್ರಾಮೀಣ ಭಾಗದ ಜನರು ಗ್ರಾಮೀಣ ಸಂಸ್ಕೃತಿ ಜಾತ್ರೋತ್ಸವಗಳನ್ನು ನಡೆಸುವ ಮೂಲಕ ಭಾರತದ ಸಮಗ್ರ ಸಂಪೂರ್ಣ ಆರ್ಥಿಕ ಅಭಿವೃದ್ಧಿ ಯೋಜನೆಯ ಯಶಸ್ವಿಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ ಮಾತನಾಡಿ, ವೈಜ್ಞಾನಿಕವಾಗಿ ಎಷ್ಟೇ ಅಭಿವೃದ್ಧಿ ಹೊಂದಿದರೂ ಸಂಸ್ಕೃತಿ, ಧರ್ಮವನ್ನು ಜಾತ್ರೋತ್ಸವದ ಮೂಲಕ ಉಳಿಸಿ ಬೆಳೆಸಬೇಕಿದ್ದು, ಜಾತ್ರೋತ್ಸವಗಳು ನಿರಂತರ ನಡೆಯಬೇಕಿದೆ ಎಂದರು. ಮಾಜಿ ಶಾಸಕ ಎಂ.ಪಿ.ಅಪ್ಪಚ್ಚುರAಜನ್ ಮಾತನಾಡಿದರು. ಶ್ರೀ ಕಲ್ಲೇಶ್ವರ ಟ್ರಸ್ಟ್, ಜಾತ್ರಾ ಸಮಿತಿ ಪದಾಧಿಕಾರಿಗಳು ಹಾಗೂ ಗ್ರಾಮ ಮುಖಂಡರು ಹಾಜರಿದ್ದರು.