ಗೋಣಿಕೊಪ್ಪಲು, ಜ. ೧೬ : ಪೊನ್ನಂಪೇಟೆ ತಾಲೂಕಿನ ಕುಂದ - ಈಚೂರು ಗ್ರಾಮದಲ್ಲಿ ಥಾರ್ ಮಿಕ್ಸಿಂಗ್ ಘಟಕದಿಂದಾಗುತ್ತಿರುವ ಸಮಸ್ಯೆ ಸಂಬAಧ ಸ್ಥಳಕ್ಕೆ ಕೊಡಗು ಜಿಲ್ಲಾ ರೈತ ಸಂಘದ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ತೆರಳಿ ಅಲ್ಲಿನ ಗ್ರಾಮಸ್ಥರ ಸಮಸ್ಯೆಯನ್ನು ಆಲಿಸಿದರು. ಈಚೂರು - ಕುಂದ ಗ್ರಾಮಸ್ಥರು ಇಲ್ಲಿನ ಸಮಸ್ಯೆ ಬಗ್ಗೆ ರೈತ ಸಂಘದ ಪದಾಧಿಕಾರಿಗಳ ಗಮನ ಸೆಳೆದಿದ್ದರು. ಈ ಹಿನ್ನೆಲೆಯಲ್ಲಿ ಕಾಡ್ಯಮಾಡ ಮನು ಸೋಮಯ್ಯ ಸ್ಥಳಕ್ಕೆ ಭೇಟಿ ನೀಡಿ ಇಲ್ಲಿನ ಮಾಹಿತಿ ಪಡೆದರು. ಸ್ಥಳಕ್ಕೆ ಮೈಸೂರಿನಿಂದ ಮಾಲಿನ್ಯ ಮಂಡಳಿಯ ಪ್ರಮುಖರನ್ನು ಬರಮಾಡಿಕೊಂಡ ಮನು ಸೋಮಯ್ಯ, ಘಟಕದಿಂದ ಆಗುತ್ತಿರುವ ಮಾಲಿನ್ಯ ಬಗ್ಗೆ ವಿವರ ಪಡೆದು ಸಕಾಲದಲ್ಲಿ ಸಮರ್ಪಕವಾದ ತೀರ್ಮಾನ ತೆಗೆದುಕೊಳ್ಳುವಂತೆ ಒತ್ತಾಯಿಸಿದರು. ಗ್ರಾಮಸ್ಥರ ಅಹವಾಲು ಸ್ವೀಕರಿಸಿ, ಅಗತ್ಯ ಕ್ರಮ ಕೈಗೊಳ್ಳಲು ಸಂಬAಧಿಸಿದ ಅಧಿಕಾರಿಗಳ ಗಮನ ಸೆಳೆಯುವ ಭರವಸೆ ನೀಡಿದರು. ಭೇಟಿಯ ವೇಳೆ ರೈತ ಸಂಘದ ವೀರಾಜಪೇಟೆ ತಾಲೂಕು ಅಧ್ಯಕ್ಷ ಭವಿಕುಮಾರ್, ಸೇರಿದಂತೆ ಈಚೂರು - ಕುಂದ ಗ್ರಾಮಸ್ಥರು ಉಪಸ್ಥಿತರಿದ್ದರು.