ಕಣಿವೆ, ಜ. ೧೬: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಪರಿಕಲ್ಪನೆಯ ನಾರಿ ಶಕ್ತಿಯೊಂದಿಗೆ ವಿಕಸಿತ ಭಾರತ ನಿರ್ಮಾಣ ಪ್ರಗತಿದಾಯಕವಾಗುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಮಹಿಳಾ ಶಕ್ತಿಗೆ ಬೇಕಾದ ಕಟ್ಟಡಗಳ ನಿರ್ಮಾಣ ಅವರ ಅಭ್ಯುದಯಕ್ಕೆ ಪೂರಕ ಎಂದು ಸಂಸದ ಯದುವೀರ್ ಹೇಳಿದರು.
ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಯೋಜನೆಯ ಮೂಲಕ ರೂ. ೧೪ ಲಕ್ಷ ವೆಚ್ಚದಲ್ಲಿ ಹೆಬ್ಬಾಲೆಯಲ್ಲಿ ನಿರ್ಮಿಸಿರುವ ಸ್ತಿçà ಶಕ್ತಿ ಭವನ ಉದ್ಘಾಟಿಸಿ ಮಾತನಾಡಿದರು.
ದೇಶದ ಸಂಸ್ಕೃತಿ, ಪರಂಪರೆ ಸಂರಕ್ಷಣೆಯಲ್ಲಿ ಮಹಿಳೆಯರ ಪಾತ್ರ ಅಪಾರವಿದೆ. ಕೌಶಲ್ಯಾಭಿವೃದ್ಧಿಗೆ ಕಟ್ಟಡಗಳು ಪೂರಕವಾಗಿದ್ದು ಸಂಜೀವಿನಿ ಒಕ್ಕೂಟದಲ್ಲಿ ಹೆಬ್ಬಾಲೆ ವ್ಯಾಪ್ತಿಯಲ್ಲಿ ೪೪ ಸಂಘಗಳ ೭೦೫ ಮಹಿಳಾ ಸದಸ್ಯರಿದ್ದು, ಪೂರಕ ಅಭಿವೃದ್ಧಿಗೆ ಬಳಸಿಕೊಳ್ಳಬಹುದಾಗಿದೆ. ಗ್ರಾಮೀಣ ಭಾಗದಲ್ಲಿ ಅಗತ್ಯ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕಾರ್ಯನಿರ್ವಹಿಸುತ್ತಿದೆ. ಗ್ರಾಮೀಣ ಕೌಶಲ್ಯ ಅಭಿವೃದ್ಧಿಗೆ ಬೇಕಾದ ಸವಲತ್ತುಗಳು ಹೊಸ ಜಿರಾಮ್ ಜಿ ಯೋಜನೆಯಲ್ಲಿ ದೊರೆಯಲಿದೆ. ಮನರೇಗಾ ಆ ಕಾಲಘಟ್ಟಕ್ಕೆ ಆಗಿದ್ದು ಸರಿ. ಆದರೆ ಈಗ ಸ್ವಾವಲಂಬಿಗಳಾಗಲೂ ಜಿರಾಮ್ ಜಿ ಯಂತಹ ಹೊಸ ಹೊಸ ಯೋಜನೆಗಳ ಅನುಷ್ಠಾನ ಹಾಗೂ ಸವಲತ್ತುಗಳು ಅಗತ್ಯವಿದೆ. ಯೋಜನೆ ಹೆಸರು ಬದಲಾವಣೆಯನ್ನು ವಿಪಕ್ಷಗಳು ವಿರೋಧಿಸುವುದು ಸರಿಯಲ್ಲ ಎಂದು ಸಂಸದರು ವಿವರಿಸಿದರು.
ರಾಜ್ಯ ಸರ್ಕಾರಗಳ ಉಚಿತ ಗ್ಯಾರಂಟಿ ಯೋಜನೆಗಳಿಂದಾಗಿ ಗ್ರಾಮೀಣ ಭಾಗದ ಮೂಲ ಸೌಕರ್ಯಗಳಾದ ರಸ್ತೆ, ಚರಂಡಿಗಳು ಆಗುತ್ತಿಲ್ಲ. ಸುಸಜ್ಜಿತ ರಸ್ತೆಗಳಿಲ್ಲದೇ ಉಚಿತ ಬಸ್ ನೀಡಿ ಪ್ರಯೋಜನವಿಲ್ಲ. ಜಲಜೀವನ್ ಮಿಷನ್ ಯೋಜನೆಯ ಕುಡಿಯುವ ನೀರಿನ ಸಮರ್ಪಕ ಪೂರೈಕೆಗೆ ಒತ್ತು ನೀಡಲಾಗುತ್ತಿದೆ ಎಂದರು.
ಕುಶಾಲನಗರ ತಾಲೂಕು ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ವಿ.ಪಿ. ಶಶಿಧರ್ ಮಾತನಾಡಿ, ಎಸ್.ಎಂ. ಕೃಷ್ಣ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಮಹಿಳೆಯರ ಸಬಲೀಕರಣಕ್ಕೆ ಮುನ್ನುಡಿ ಬರೆಯಲಾಯಿತು. ಮರದಡಿ, ಬೇರೆ ಬೇರೆ ಮನೆಯಂಗಳದಲ್ಲಿ ಮಹಿಳಾ ಚಟುವಟಿಕೆಗಳ ಮನಗಂಡು ಇಂತಹ ಸ್ತಿçà ಶಕ್ತಿ ಭವನ ನಿರ್ಮಾಣಕ್ಕೆ ಮುಂದಾಗಲಾಯಿತು. ಅತಿ ದೊಡ್ಡ ಜನಸಂಖ್ಯೆ ಇರುವ ಹೆಬ್ಬಾಲೆ ಗ್ರಾಮದ ವ್ಯಾಪ್ತಿಯ ಜನರಿಗೆ ಉದ್ಯೋಗ ಒದಗಿಸಲು ಕೈಗಾರಿಕಾ ನಿರ್ಮಾಣ, ಶಿಕ್ಷಣ ಸಂಸ್ಥೆಗಳು ಈ ಹಿಂದೆ ಆಗಬೇಕಿತ್ತು. ಆದರೆ, ಈ ಭಾಗ ಅಭಿವೃದ್ಧಿಯಿಂದ ಕಡೆಗಣಿಸಲ್ಪಟ್ಟಿದೆ. ಇದೀಗ ಹೋಬಳಿ ಕೇಂದ್ರವಾಗುವ ಮೂಲಕ ಹೆಬ್ಬಾಲೆ ಗ್ರಾಮ ಸಾಮೂಹಿಕ ಅಭಿಪ್ರಾಯಗಳ ಮೂಲಕ ಸಾಕಷ್ಟು ಅಭಿವೃದ್ಧಿಯಾಗಬೇಕು ಎಂದರು.
ಗ್ಯಾರAಟಿ ಯೋಜನೆಗಳು ಮಹಿಳೆಯರಿಗೆ ಸಾಕಷ್ಟು ಪ್ರಯೋಜನವಾಗುತ್ತಿರುವ ಕುರಿತು ವಿಮರ್ಶಿಸಿದ ಶಶಿಧರ್ ಸಂಸದರ ಟೀಕೆಗೆ ಪ್ರತ್ಯುತ್ತರ ನೀಡಿದರು. ಜಲಜೀವನ್ ಯೋಜನೆ ಇನ್ನೂ ಕೂಡ ಪೂರ್ಣಗೊಳ್ಳದ ಬಗ್ಗೆ ಹೇಳಿದ ಶಶಿಧರ್, ಈ ಬಗ್ಗೆ ಸಂಸದರು ಹೆಚ್ಚಿನ ಒತ್ತು ನೀಡುವ ಮೂಲಕ ಕೇಂದ್ರದ ಯೋಜನೆಗಳ ತ್ವರಿತ ಅನುಷ್ಠಾನಕ್ಕೆ ಒತ್ತಾಯಿಸಿದರು.
ಹೆಬ್ಬಾಲೆ ಗ್ರಾಪಂ ಅಧ್ಯಕ್ಷೆ ಅರುಣಕುಮಾರಿ ಮಾತನಾಡಿ, ಪಿಡಿಓ ಇಲ್ಲದೇ ಪಂಚಾಯಿತಿಯಲಿ ಸದಸ್ಯರುಗಳ ನಡುವೆ ಸಾಮರಸ್ಯವಿಲ್ಲದೆ ಇನ್ನಷ್ಟು ಒಳ್ಳೆಯ ಕೆಲಸಗಳು ನೆನೆಗುದಿಗೆ ಬಿದ್ದಿವೆಎಂದು ವಿಷಾದಿಸಿದರು. ಈ ಭಾಗದ ಮಹಿಳೆಯರಿಗೆ ಅತೀ ಅಗತ್ಯವಿದ್ದ ಸ್ತಿçà ಶಕ್ತಿ ಭವನ ನಿರ್ಮಾಣ ಹೆಮ್ಮೆ ತಂದಿದೆ ಎಂದು ಸಂತಸ ವ್ಯಕ್ತಪಡಿಸಿದರು.
೪ಏಳನೇ ಪುಟಕ್ಕೆ
ತಾಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಪರಮೇಶ್ ಕುಮಾರ್, ಸಹಾಯಕ ನಿರ್ದೇಶಕ ರಾಕೇಶ್, ಜಿ.ಪಂ. ಮಾಜಿ ಅಧ್ಯಕ್ಷ ಹೆಚ್.ಎಸ್. ಅಶೋಕ್, ಗ್ರಾ.ಪಂ. ಉಪಾಧ್ಯಕ್ಷೆ ಲತಾ ತಮ್ಮಯ್ಯ, ಸದಸ್ಯರಾದ ಹೆಚ್.ಸಿ. ಮಹದೇವ, ಮಹೇಶ್, ಚಂದ್ರಶೇಖರ್ ಜೋಗಿ, ನಾರಾಯಣ, ಹೆಚ್.ಪಿ. ತನು ಕುಮಾರ್, ಹೆಚ್.ಬಿ.ರತ್ನಮ್ಮ, ಪುಟ್ಟಲಕ್ಷ್ಮಮ್ಮ, ಯಶಸ್ವಿನಿ, ಪವಿತ್ರ, ಕವಿತಾ, ಪಂಚಾಯಿತಿ ಪಿಡಿಓ ರವಿಕುಮಾರ್, ಪಂಚಾಯಿತಿ ಮಾಜಿ ಅಧ್ಯಕ್ಷ ಹೆಚ್.ಎಸ್. ರಘು, ಹೆಬ್ಬಾಲೆ ವಿದ್ಯಾಸಂಸ್ಥೆ ಅಧ್ಯಕ್ಷ ಹೆಚ್.ವಿ. ಶಿವಪ್ಪ, ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು ಇದ್ದರು.