ಮಡಿಕೇರಿ, ಜ. ೧೬: ಮದ್ಯದ ಅಮಲಿನಲ್ಲಿ ಮಗನೇ ತಂದೆಯನ್ನು ಹೊಡೆದು ಕೊಲೆ ಮಾಡಿದ ಪ್ರಕರಣಕ್ಕೆ ಸಂಬAಧಿಸಿದAತೆ ಒಟ್ಟು ಎಂಟು ಮಂದಿ ಆರೋಪಿಗಳನ್ನು ಬಂದಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ ತಿಳಿಸಿದ್ದಾರೆ.

ತಮ್ಮ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು; ಮಡಿಕೇರಿ ಗ್ರಾಮಾಂತರ ಠಾಣಾ ವ್ಯಾಪ್ತಿಯ ಕಟ್ಟೆಮಾಡು ಗ್ರಾಮದ ಹೊಸ್ಕೇರಿ ನಿವಾಸಿ ದೇವಯ್ಯ ಅವರ ಲೈನ್‌ಮನೆಯಲ್ಲಿ ವಾಸವಿದ್ದ ಬುರೋ ಮುದಿ ಹಾಗೂ ಆತನ ಪುತ್ರ ಪ್ರಶಾಂತ್ ಮುದಿ ನಡುವೆ ಕಳೆದ ತಾ. ೧೧ರಂದು ರಾತ್ರಿ ೮.೩೦ರ ಸಮಯದಲ್ಲಿ ಮದ್ಯಸೇವನೆ ಮಾಡುತ್ತಿದ್ದ ವೇಳೆ ಜಗಳವಾಗಿದೆ. ಈ ಸಂದರ್ಭದಲ್ಲಿ ಪ್ರಶಾಂತ್ ಬುರೋ ಮೇಲೆ ದೊಣ್ಣಯಿಂದ ಹಲ್ಲೆ ಮಾಡಿದ್ದು, ಬುರೋ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ವಿಷಯವನ್ನು ಮರೆಮಾಚುವ ಸಲುವಾಗಿ ತೋಟದ ಮಾಲೀಕರು ಸೇರಿದಂತೆ ಇತರ ಕಾರ್ಮಿಕರು ಸೇರಿ ಮೃತದೇಹವನ್ನು ಮಡಿಕೇರಿಯ ರುದ್ರಭೂಮಿಗೆ ತಂದು ಅಂತ್ಯ ಸಂಸ್ಕಾರ ಮಾಡಿ ಸಾಕ್ಷಿ ನಾಶ ಮಾಡಿದ್ದಾರೆ. ಈ ಬಗ್ಗೆ ತಾ.೧೩ರಂದು ಮಾಹಿತಿ ದೊರೆತ ಮೇರೆಗೆ ವಿಚಾರಣೆ ನಡೆಸಿ ಮೊದಲು ಮೂವರು ಆರೋಪಿಗಳನ್ನು ಬಂದಿಸಲಾಗಿತ್ತು. ತದನಂತರದಲ್ಲಿ ವಿಚಾರಣೆ ವೇಳೆ ಇತರರ ಸಹಕಾರ ಇರುವದಾಗಿ ಆರೋಪಿ ಪ್ರಶಾಂತ್ ನೀಡಿದ ಮಾಹಿತಿಯಂತೆ ತಾ.೧೪ರಂದು ಮತ್ತೆ ಏಳು ಮಂದಿಯನ್ನು ಬಂದಿಸಲಾಗಿದೆ ಎಂದು ತಿಳಿಸಿದರು.

ಮೂಲತಃ ಪಶ್ಚಿಮ ಬಂಗಾಳದ ವರ್ದಮಾನ್ ಜಿಲ್ಲೆಯ ನಿವಾಸಿಗಳಾಗಿರುವ ಪ್ರಶಾಂತ್ ಮುದಿ, ಶ್ರೀಕಾಂತ್ ಮುದಿ, ಸುಧನ್ ಮುದಿ, ಲಕ್ಷಿö್ಮ ಮುದಿ, ತನುಶ್ರೀ, ಬಸಂತಿ ಮುದಿ, ಹಾಗೂ ತೋಟದ ಮಾಲೀಕರಾದ ಎಂ.ಎಸ್.ದೇವಯ್ಯ. ಅವರ ಪತ್ನಿ ಎಂ.ಡಿ.ಭಾರತಿ ಬಂಧಿತ ಆರೋಪಿಗಳಾಗಿದ್ದಾರೆ. ಆರೋಪಿಗಳೆಲ್ಲರನ್ನೂ ನ್ಯಾಯಾಂಗ ವಶಕ್ಕೊಪ್ಪಿಸಲಾಗಿದ್ದು, ಪ್ರಮುಖ ಆರೋಪಿ ನ್ಯಾಯಾಂಗ ವಶದಲ್ಲಿದ್ದಾನೆ. ಉಳಿದ ಏಳು ಮಂದಿಗೆ ಜಾಮೀನು ದೊರೆತಿರುವದಾಗಿ ತಿಳಿಸಿದರು.

ಕಾರ್ಮಿಕರು ಬಿಟ್ಟು ಹೋದರೆ ಮತ್ತೆ ಸಿಗುವದಿಲ್ಲವೆಂಬ ಕಾರಣಕ್ಕಾಗಿ ದೇವಯ್ಯ ಹಾಗೂ ಅವರ ಪತ್ನಿ ಕೊಲೆ ಪ್ರಕರಣವನ್ನು ಮುಚ್ಚಿ ಹಾಕಲು ಸಹಕಾರ ನೀಡಿದ್ದು, ಈ ಕಾರಣಕ್ಕಾಗಿ ಅವರುಗಳನ್ನು ಬಂದಿಸಿರುವದಾಗಿ ಎಸ್‌ಪಿ ತಿಳಿಸಿದರು. ೪ಏಳನೇ ಪುಟಕ್ಕೆ

ಘಟನೆ ನಡೆದ ಸ್ಥಳಕ್ಕೆ ಡಿವೈಎಸ್‌ಪಿ ಪಿ.ಎ.ಸೂರಜ್, ಪೊಲೀಸ್ ನಿರೀಕ್ಷಕ ಹೆಚ್.ವಿ.ಚಂದ್ರಶೇಖರ್, ಠಾಣಾಧಿಕಾರಿ ಜವರೇಗೌಡ, ಅಪರಾಧ ಪತ್ತೆದಳದ ಸಿಬ್ಬಂದಿಗಳು, ಅಪರಾಧ ಕೃತ್ಯ ಪರಿಶೀಲನಾ ತಜ್ಞರ ತಂಡ ಭೇಟಿ ನೀಡಿ ಸಾಕ್ಷಾಧಾರಗಳನ್ನು ಕಲೆ ಹಾಕಿ ಕೊಲೆ ಪ್ರಕರಣವನ್ನು ಬೇಧಿಸಿರುವದಾಗಿ ಅವರು ತಿಳಿಸಿದರು.

ಅಶ್ಲೀಲ ಮಾಹಿತಿ ಹಂಚಿಕೆ-ತನಿಖೆ

ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಮಾಹಿತಿಗಳನ್ನೊಳಗೊಂಡ ಮಾಹಿತಿಯ ಲಿಂಕ್ ಹರಿಯಬಿಟ್ಟಿರುವ ಪ್ರಕರಣಕ್ಕೆ ಸಂಬAಧಿಸಿದAತೆ ತಾ.೧೩ರಂದು ಸೈಬರ್ ಸೆನ್‌ನಲ್ಲಿ ದೂರು ದಾಖಲಾಗಿದ್ದು, ಈ ಸಂಬAಧ ತಾಂತ್ರಿಕ, ಖಾತೆ ವಿವರಗಳನ್ನು ಕಲೆ ಹಾಕಲಾಗುತ್ತಿದ್ದು, ಪ್ರಕರಣ ತನಿಖೆಯಲ್ಲಿದೆ ಎಂದು ಎಸ್‌ಪಿ ತಿಳಿಸಿದರು. ಯಾರೂ ಕೂಡ ಅಶ್ಲೀಲ ಲಿಂಕ್, ಅನಾಮಧೇಯ ಸಂಖ್ಯೆಗಳಿAದ ಬರುವಂತಹ ಪೋಸ್ಟ್ಗಳಿಗೆ ಉತ್ತರಿಸಲು ಹೋಗಬಾರದು. ಆ ರೀತಿಯ ಸಂದೇಶಗಳು ಕಂಡುಬAದರೆ ಸೈಬರ್ ಸೆನ್‌ಗೆ ಅಥವಾ ಸಹಾಯವಾಣಿ ಸಂಖ್ಯೆ ೧೯೩೦ಗೆ ಉಚಿತ ಕರೆ ಮಾಡಿ ತಿಳಿಸಿದರೆ ತಕ್ಷಣ ಸ್ಪಂದನ ಸಿಗಲಿದೆ. ಸಮಸ್ಯೆಗಳು ಉಂಟಾಗುವದಿಲ್ಲವೆAದು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು.