ಶನಿವಾರಸಂತೆ, ಜ. ೧೬: ಸುಮಾರು ೪೦೦ ವರ್ಷಗಳ ಇತಿಹಾಸ ಇರುವ ಶನಿವಾರಸಂತೆ ಸಮೀಪದ ಬೆಂಬಳೂರು ಗ್ರಾಮದ ಶ್ರೀ ಬಾಣಂತಮ್ಮ ದೇವಿ ಮತ್ತು ಕುಮಾರಲಿಂಗೇಶ್ವರ ದೇವರ ಜಾತ್ರಾ ಮಹೋತ್ಸವ ವಿಜೃಂಭಣೆಯಿAದ ಸಾಂಪ್ರದಾಯಿಕವಾಗಿ ಜರುಗಿತು.

ಬೆಂಬಳೂರು ಗ್ರಾಮದ ಶ್ರೀಕಲ್ಲೇಶ್ವರ ಸೇವಾ ಟ್ರಸ್ಟ್, ಜಾತ್ರಾ ಸಮಿತಿ ಹಾಗೂ ಬೆಂಬಳೂರು, ಶಿವರಳ್ಳಿ, ಊರುಗುತ್ತಿ ಗ್ರಾಮಸ್ಥರ ಸಹಭಾಗಿತ್ವದಲ್ಲಿ ನಡೆದ ಜಾತ್ರೆಯಲ್ಲಿ ಶನಿವಾರಸಂತೆ, ಮೂದರವಳ್ಳಿ, ಕೊಡ್ಲಿಪೇಟೆ, ಯಸಳೂರು, ಇತ್ಯಾದಿ ಗ್ರಾಮಗಳಿಂದ ಸಾವಿರಾರು ಮಂದಿ ಭಕ್ತರು ಶ್ರದ್ಧಾಭಕ್ತಿಯಿಂದ ಪಾಲ್ಗೊಂಡಿದ್ದರು.

ಬೆಳಿಗ್ಗೆ ೯ ಗಂಟೆಗೆ ಉಪವಾಸ ಇದ್ದ ಗ್ರಾಮಸ್ಥರು ಶ್ರೀಬಾಣಂತಮ್ಮ ದೇವಿಯನ್ನು ಅಡ್ಡಪಲ್ಲಕ್ಕಿಯಲ್ಲಿ ಇರಿಸಿ ಸಾಂಪ್ರದಾಯಿಕ ವಾದ್ಯಗೋಷ್ಠಿಯೊಂದಿಗೆ ಮೆರವಣಿಗೆಯಲ್ಲಿ ಬಾಣಂತಮ್ಮನ ಕೆರೆಗೆ ಕೊಂಡೊಯ್ದು ಪೂಜೆ ಸಲ್ಲಿಸಿ, ಪುನ: ಮೆರವಣಿಗೆಯಲ್ಲಿ ಬಾಣಂತಮ್ಮ ಜಾತ್ರಾ ಮೈದಾನಕ್ಕೆ ತಂದು ಅಲ್ಲಿನ ಮಂಟಪದಲ್ಲಿರಿಸಿ ಪೂಜೆ ಸಲ್ಲಿಸಿದರು. ಮಧ್ಯಾಹ್ನ ೧೨ ಗಂಟೆಯವರೆಗೆ ಭಕ್ತರು ಹಣ್ಣುಕಾಯಿ ಸಮರ್ಪಿಸಿದರು.ಮಹಿಳೆಯರು ಬಾಣಂತಮ್ಮ ಕೆರೆಗೆ ಬಾಗಿನ ಅರ್ಪಿಸಿದರು.ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಮಧ್ಯಾಹ್ನ ೧ ಗಂಟೆಗೆ ಕುಮಾರಲಿಂಗೇಶ್ವರ ದೇವರನ್ನು ಬಾಣಂತಮ್ಮ ಕೆರೆಯಲ್ಲಿ ಪೂಜಿಸಿ, ಅಡ್ಡಪಲ್ಲಕ್ಕಿಯಲ್ಲಿ ಇರಿಸಿ ವಾದ್ಯಗೋಷ್ಠಿಯೊಂದಿಗೆ ಗ್ರಾಮಸ್ಥರು ಕುಂಟುತ್ತಲೇ ಮೆರವಣಿಗೆಯಲ್ಲಿ ಕುಮಾರಲಿಂಗೇಶ್ವರ ಜಾತ್ರಾ ಮೈದಾನಕ್ಕೆ ಸಾಗಿ, ಅಲ್ಲಿನ ಮಂಟಪದಲ್ಲಿರಿಸಿ ಪೂಜಿಸಿದರು. ಸಂಜೆಯವರೆಗೂ ಭಕ್ತರು ಹಣ್ಣುಕಾಯಿ ಅರ್ಪಿಸಿ ಪೂಜಿಸಿದರು.

ಶಾಸಕರಾದ ಡಾ.ಮಂತರ್ ಗೌಡ ಅವರು ಥ್ರೋಬಾಲ್ ಹಾಗೂ ವಾಲಿಬಾಲ್ ಕ್ರೀಡಾ ಕೂಟವನ್ನು ಉದ್ಘಾಟಿಸಿ ಶುಭ ಕೋರಿದರು. ಮಧ್ಯಾಹ್ನ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಜಾತ್ರಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಮಾಜಿ ಶಾಸಕ ಎಂ..ಪಿ.ಅಪ್ಪಚ್ಚುರAಜನ್, ಇತರ ಮುಖಂಡರು ಹಾಜರಿದ್ದರು. ಭಕ್ತಜನರು ಪೂಜಾ ಕಾರ್ಯಕ್ರಮ, ಮೆರವಣಿಗೆ ಹಾಗೂ ಜಾತ್ರೆಯಲ್ಲಿ ಸಂಭ್ರಮದಿAದ ಪಾಲ್ಗೊಂಡಿದ್ದರು. ಸಂಜೆ ಐತಿಹಾಸಿಕ ಶ್ರೀಬಾಣಂತಮ್ಮ-ಕುಮಾರಲಿAಗೇಶ್ವರ ಜಾತ್ರಾ ಮಹೋತ್ಸವ ಸಂಪನ್ನವಾಯಿತು. ಬೆಂಬಳೂರು ಗ್ರಾಮದ ಶ್ರೀಕಲ್ಲೇಶ್ವರ ಸೇವಾ ಟ್ರಸ್ಟ್ ಅಧ್ಯಕ್ಷ ಬಿ.ಆರ್.ರೂಪೇಶ್, ಕಾರ್ಯದರ್ಶಿ ಎಚ್.ಬಿ.ಮುರಳಿಧರ್, ಸದಸ್ಯರು, ಜಾತ್ರಾ ಸಮಿತಿ ಮುಖಂಡ ಪ್ರಸಾದ್ ಪಟೇಲ್, ಬೆಂಬಳೂರು, ಮೂದರವಳ್ಳಿ, ಶಿವರಳ್ಳಿ, ಊರುಗುತ್ತಿ ಗ್ರಾಮಗಳ ಮುಖಂಡರು ಹಾಜರಿದ್ದರು.