ಪೊನ್ನಂಪೇಟೆ, ಜ. ೧೭: ದಕ್ಷಿಣ ಕೊಡಗಿನಲ್ಲಿ ಜಾನುವಾರುಗಳ ಮೇಲೆ ಹುಲಿ ದಾಳಿ ಮುಂದುವರೆದಿದ್ದು, ಪೊನ್ನಪ್ಪಸಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಲ್ಲೂರು ಗ್ರಾಮದ ಕೊಕ್ಕಲೆಮಾಡ ದಾದಾ ಸೋಮಯ್ಯ ಎಂಬವರಿಗೆ ಸೇರಿದ ಗಬ್ಬದ ಹಸುವಿನ ಮೇಲೆ ಹುಲಿ ದಾಳಿ ಮಾಡಿ ಕೊಂದುಹಾಕಿರುವ ಘಟನೆ ನಡೆದಿದೆ. ಎಂದಿನAತೆ ಹಸುವಿನ ಮಾಲೀಕ ದಾದಾ ಸೋಮಯ್ಯ ಅವರು, ರಾಸುಗಳನ್ನು ಮೇಯಲು ಗದ್ದೆಗೆ ಹೊಡೆದುಕೊಂಡು ಹೋಗುತ್ತಿದ್ದ ಸಂದರ್ಭ ಏಕಾಏಕಿ ಹುಲಿ ದಾಳಿ ಮಾಡಲು ಮುಂದಾಗಿದೆ. ಈ ಸಂದರ್ಭ ದಾದಾ ಸೋಮಯ್ಯ ಅವರು ಜೋರಾಗಿ ಕಿರುಚಿಕೊಂಡು, ಕೈಯಲ್ಲಿದ್ದ ದೊಣ್ಣೆಯನ್ನು ಬೀಸಿ ತಪ್ಪಿಸಿಕೊಂಡಿದ್ದಾರೆ. ಸೋಮಯ್ಯ ಅವರ ಕಿರುಚಾಟದ ಶಬ್ದಕ್ಕೆ ಹೆದರಿದ ಹುಲಿ ಹಸುವಿನ ಮೇಲೆ ದಾಳಿ ಮಾಡಿದೆ. ಘಟನೆ ಬಗ್ಗೆ ಮಾಹಿತಿ ತಿಳಿದ ಪೊನ್ನಂಪೇಟೆ ಅರಣ್ಯ ವಲಯ ಆರ್‌ಎಫ್‌ಓ ಗಂಗಾಧರ್, ಡಿಆರ್‌ಫ್‌ಓ ಕೆ.ಜಿ. ದಿವಾಕರ್ ಹಾಗೂ ಆರ್‌ಆರ್‌ಟಿ ತಂಡ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಹುಲಿ ದಾಳಿಯಿಂದ ಹಸು ಸಾವನ್ನಪ್ಪಿರುವುದು ಕಂಡು ಬಂದಿದೆ.

ಬೆಳಿಗ್ಗೆ ೧೧ ಗಂಟೆಯಿAದಲೇ ಆರ್‌ಆರ್‌ಟಿ ಸಿಬ್ಬಂದಿಗಳ ತಂಡ ಹುಲಿಯ ಹೆಜ್ಜೆ ಗುರುತು ಪತ್ತೆ ಹಚ್ಚಲು ಕೂಂಬಿAಗ್ ನಡೆಸಿದಾಗ ಹುಲಿಯ ಹೆಜ್ಜೆ ಗುರುತು ಕಂಡುಬAದಿದೆ.

ಹುಲಿಯ ಹೆಜ್ಜೆಯ ಗುರುತನ್ನು ಆಧರಿಸಿ ಹುಲಿಯ ಚಲನವಲನ ವೀಕ್ಷಿಸಲು ಸಿಸಿ ಕ್ಯಾಮೆರಾ ಹಾಗೂ ಹುಲಿ ಸೆರೆಗೆ ಬೋನ್ ಅಳವಡಿಸಿ ಹಸುವಿನ ಕಳೆಬರಹ ಇರಿಸಿ ಹುಲಿಯ ಸೆರೆಗೆ ಮುಂದಾಗಿದ್ದಾರೆ.

ವಿಷಯ ತಿಳಿದ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಮನು ಸೋಮಯ್ಯ ಹಾಗೂ ಪದಾಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಕೂಡಲೇ ಹುಲಿಯನ್ನು ಸೆರೆ ಹಿಡಿಯುವಂತೆ ಅರಣ್ಯಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ. ಈ ಸಂದರ್ಭ ಮನು ಸೋಮಯ್ಯ ಮಾತನಾಡಿ, ನಲ್ಲೂರು ಗ್ರಾಮದ ಕೊಕ್ಕಲೆಮಾಡ ದಾದಾ ಸೋಮಯ್ಯ ಅವರ ಮೇಲೆ ಆಗಬೇಕಾಗಿದ್ದ ಹುಲಿ ದಾಳಿ ಹಸುವಿನ ಮೇಲೆ ಆಗಿದೆ. ಕೆಲವು ದಿನಗಳ ಹಿಂದಷ್ಟೇ ಇವರಿಗೆ ಸೇರಿದ ಮತ್ತೊಂದು ಹಸುವಿನ ಮೇಲೆ ಹುಲಿ ದಾಳಿ ನಡೆಸಿ ಕೊಂದುಹಾಕಿದೆ. ಅರಣ್ಯಾಧಿಕಾರಿಗಳು ಕ್ಯಾಮರಾ ಇಟ್ಟು ಹುಲಿಯ ಚಲನವಲನ ಗಮನಿಸಿ ಹುಲಿಯನ್ನು ಸೆರೆ ಹಿಡಿಯುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.

ಮೂರು ದಿನಗಳ ಒಳಗೆ ಹುಲಿಯನ್ನು ಸೆರೆಹಿಡಿಯುವ ಕಾರ್ಯ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಹಸುವಿನ ಮಾಲೀಕರಾದ ದಾದಾ ಸೋಮಯ್ಯ ಘಟನೆ ಕುರಿತು ಮಾತನಾಡಿ, ಬೆಳಗ್ಗಿನ ಸಮಯದಲ್ಲಿ ದನ ಮೇಯಿಸುತ್ತಿದ್ದ ಸಂದರ್ಭ ಹುಲಿ ಹಿಂಭಾಗದಿAದ ಬಂದು ನನ್ನ ಮೇಲೆ ದಾಳಿ ಮಾಡಲು ಪ್ರಯತ್ನಿಸಿತ್ತು. ಅದನ್ನು ಗಮನಿಸಿದ ನಾನು ಜೋರಾಗಿ ಕಿರುಚಿಕೊಂಡು ದೊಣ್ಣೆ ಬೀಸಿದ ಕಾರಣ, ನನ್ನ ಮೇಲೆ ಆಗಬೇಕಿದ್ದ ದಾಳಿ ಸಮೀಪದಲ್ಲಿದ್ದ ಹಸುವಿನ ಮೇಲೆ ಆಗಿದೆ ಎಂದರು.

ಹಸುವಿನ ಮಾಲೀಕರ ಮಗ ತಾಜ್ ಕುಶಾಲಪ್ಪ ಮಾತನಾಡಿ, ಆದಷ್ಟು ಶೀಘ್ರ ಹುಲಿಯನ್ನು ಸೆರೆಹಿಡಿಯಬೇಕು ಎಂದರು. ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯ ರಾಬಿನ್ ಮಾತನಾಡಿ, ಕಳೆದ ಕೆಲ ದಿನಗಳಲ್ಲಿ ಹುಲಿ ದಾಳಿಗೆ ಮೂರು ಜಾನುವಾರುಗಳು ಬಲಿಯಾಗಿವೆ. ನಾಲ್ಕು ದಿಕ್ಕಿನಲ್ಲಿಯೂ ಕ್ಯಾಮೆರಾ ಅಳವಡಿಸಿ ಹುಲಿಯ ಚಲನವಲನ ಗುರುತಿಸಿ ಆದಷ್ಟು ಶೀಘ್ರ ಹುಲಿಯನ್ನು ಸೆರೆಹಿಡಿಯಬೇಕು ಎಂದರು. ತಿತಿಮತಿ ಎ. ಸಿ. ಎಫ್ ಗೋಪಾಲ್ ಮಾತನಾಡಿ, ಈ ಹಿಂದೆ ೨ ಹಸುಗಳನ್ನು ಹುಲಿ ಕೊಂದುಹಾಕಿದ್ದ ಸಂದರ್ಭ ಕ್ಯಾಮರಾ ಇಟ್ಟು ಟ್ರಾಪಿಂಗ್ ಮಾಡಿದ್ದೆವು. ಇದರ ಬಗ್ಗೆ ಟೈಗರ್ ಸೆಲ್ ನವರು ಪ್ರತಿಕ್ರಿಯಿಸಿ ೫ ರಿಂದ ೬ ವರ್ಷ ಪ್ರಾಯವಿರುವ ಗಂಡು ಹುಲಿಯು ನಾಗರಹೊಳೆಯ ೨೩ಏಊ೩೧ ಹುಲಿಯೆಂದು ತಿಳಿದು ಬಂದಿದೆ. ಹುಲಿ ಕಾರ್ಯಾಚರಣೆಗೆ ಸಿಬ್ಬಂದಿ ನೇಮಕ ಮಾಡಿದ್ದು ಬೋನ್ ಅಳವಡಿಸಲಾಗಿದೆ ಎಂದರು.ಈ ಸಂದರ್ಭ ರೈತ ಸಂಘದ ಪ್ರಧಾನ ಸಂಚಾಲಕ ಪುಚ್ಚಿಮಾಡ ಸುಭಾಶ್ ಸುಬ್ಬಯ್ಯ, ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ, ವೀರಾಜಪೇಟೆ ತಾಲೂಕು ಅಧ್ಯಕ್ಷ ಬಾಚಮಾಡ ಭವಿ ಕುಮಾರ್, ಕುರ್ಚಿ ಗ್ರಾಮದ ಸಂಚಾಲಕ ಅಜ್ಜಮಾಡ ಪೂಣಚ್ಚ, ಪುಳ್ಳಂಗಡ ಪವನ್, ಪುಚ್ಚಿಮಾಡ ಸಂತೋಷ್, ತೀತರಮಾಡ ರಾಜ ಕರುಂಬಯ್ಯ, ಮಲಚೀರ ಗಿರೀಶ್, ಗ್ರಾಮಸ್ಥರಾದ ಬಲ್ಲಿಮಾಡ ಮಹೇಶ್, ಪೆಮ್ಮಣಮಾಡ ಪೊನ್ನಣ್ಣ, ಚೊಟ್ಟೆಯಂಡಮಾಡ ಲಿಖಿತ್, ಗಸ್ತು ಅರಣ್ಯಪಾಲಕ ಅಣ್ಣಯ್ಯ ಹಾಗೂ ಆರ್. ಆರ್. ಟಿ. ಸಿಬ್ಬಂದಿಗಳು ಪಾಲ್ಗೊಂಡಿದ್ದರು.

- ಚನ್ನನಾಯಕ