ಸೋಮವಾರಪೇಟೆ, ಜ. ೧೭: ಸಮೀಪದ ಶಾಂತಳ್ಳಿ ಗ್ರಾಮದಲ್ಲಿರುವ ಶ್ರೀಕುಮಾರಲಿಂಗೇಶ್ವರ ದೇವಾಲಯದ ೬೭ನೇ ವರ್ಷದ ಮಹಾ ರಥೋತ್ಸವ ಹಾಗೂ ಜಾತ್ರಾ ಮಹೋತ್ಸವ ಹಲವು ಪೂಜಾ ವಿಧಿವಿಧಾನ, ದೈವಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಧ್ಯುಕ್ತವಾಗಿ ತೆರೆ ಕಂಡಿತು.
ಕಳೆದ ತಾ. ೧೩ರಂದು ‘ಬೆಳ್ಳಿ ಬಂಗಾರ ದಿನ’ ಆಚರಣೆಯೊಂದಿಗೆ ಪ್ರಸಕ್ತ ವರ್ಷದ ಜಾತ್ರೆಗೆ ಚಾಲನೆ ನೀಡಿದ್ದು, ನಂತರ ದೇವಾಲಯದಲ್ಲಿ ಮಕರ ಸಂಕ್ರಮಣ ಕರುವಿನ ಹಬ್ಬ, ದೇಗುಲದ ಗರುಡ ಕಂಬದ ಅಗ್ರಪೀಠದಲ್ಲಿ ತುಪ್ಪದ ನಂದಾದೀಪವನ್ನು ಬೆಳಗುವ ಪೂಜಾ ಕೈಂಕರ್ಯಗಳು ನಡೆದವು. ಇದರೊಂದಿಗೆ ಅಂಕುರಾರ್ಪಣ ಪೂಜೆ, ಮಹಾಮಂಗಳಾರತಿ, ಅರಸು ಬಲ ಸೇವೆ ನಡೆಯಿತು.
ದೇವಾಲಯದಲ್ಲಿ ಗಣಹೋಮ, ರಂಗಪೂಜೆ, ಬೀದಿ ಉತ್ಸವ, ನಿನ್ನೆ ಮಧ್ಯಾಹ್ನ ೪ಏಳನೇ ಪುಟಕ್ಕೆ
(ಮೊದಲ ಪುಟದಿಂದ) ಮಹಾ ರಥೋತ್ಸವ ಸಂಭ್ರಮದಿAದ ಜರುಗಿದ್ದು, ಇಂದು ಜಾತ್ರಾ ಮಹೋತ್ಸವದ ಸಮಾರೋಪ ಸಮಾರಂಭ ನಡೆಯಿತು. ದೇವಾಲಯದ ಮುಂಭಾಗದಲ್ಲಿರುವ ಪ್ರಶಾಂತ ವೇದಿಕೆಯಲ್ಲಿ ನಡೆದ ಕಾರ್ಯಕ್ರಮವನ್ನು ಒಕ್ಕಲಿಗರ ಸಂಘದ ನಿರ್ದೇಶಕ ಹರಪಳ್ಳಿ ರವೀಂದ್ರ ಉದ್ಘಾಟಿಸಿದರು. ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ, ದೇವಾಲಯ ಧರ್ಮದರ್ಶಿ ಸಮಿತಿ ಅಧ್ಯಕ್ಷ ಕೆ.ಎಂ. ಲೋಕೇಶ್, ಪ್ರಮುಖರಾದ ಕೆ.ಕೆ. ಮುತ್ತಣ್ಣ, ಎಸ್.ಆರ್. ಉತ್ತಯ್ಯ, ಜಿ.ಎಸ್. ಮಧು ಕುಮಾರ್ ಸೇರಿದಂತೆ ಇತರರು ಇದ್ದರು.
ಕಾರ್ಯಕ್ರಮದಲ್ಲಿ ಧರ್ಮದರ್ಶಿ ಕೆ.ಕೆ. ಪೊನ್ನಪ್ಪ, ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯನಿರ್ವಹಣಾಧಿಕಾರಿ ಡಿ.ಪಿ. ಜೋಯಪ್ಪ, ನಿವೃತ್ತ ನೀರುಗಂಟಿ ಎಸ್.ಜೆ. ರಾಜು, ಶೈಕ್ಷಣಿಕವಾಗಿ ಸಾಧನೆಗೈದ ವಿದ್ಯಾರ್ಥಿಗಳಾದ ಬೆಟ್ಟದಳ್ಳಿ ಗ್ರಾಮದ ಕೆ.ಜಿ. ನಿಧಿ ಹಾಗೂ ಬೆಂಕಳ್ಳಿ ಗ್ರಾಮದ ಸಿ.ಎಸ್. ಆದ್ವಿ ಅವರುಗಳನ್ನು ಸನ್ಮಾನಿಸಲಾಯಿತು.
ಫಲಪುಷ್ಪ, ವಸ್ತು ಪ್ರದರ್ಶನ, ವಿಶೇಷ ವಸ್ತುಗಳ ಪ್ರದರ್ಶನ ಸ್ಪರ್ಧೆಯಲ್ಲಿ ವಿಜೇತರಾದ ಕೃಷಿಕರಿಗೆ ಬಹುಮಾನ ವಿತರಿಸಲಾಯಿತು. ಶಾಂತಳ್ಳಿ ಹೋಬಳಿ ವ್ಯಾಪ್ತಿಯ ವಿವಿಧ ಶಾಲೆಗಳ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.